Muddumanigalu: ಮುದ್ದುಲಕ್ಷ್ಮಿ ಬಳಿಕ ಮುದ್ದುಮಣಿಗಳು ಮುಕ್ತಾಯ?.. ಬರಲಿದೆ ಚಾಪ್ಟರ್ 3?

By ಎಸ್ ಸುಮಂತ್

ಸಿನಿಮಾದಲ್ಲಿ ಕಥೆ ಗಟ್ಟಿಯಾಗಿದ್ದರೆ, ಮೊದಲಾರ್ಧ ಯಶಸ್ವಿಯಾಗಿ ಓಡಿದರೆ ಮತ್ತೆ ಅದರ ಮುಂದುವರೆದ ಭಾಗವಾಗಿ ಸಿನಿಮಾ ತಯಾರು ಮಾಡಲಾಗುತ್ತದೆ. ಸೀಕ್ವೆಲ್ ಭಾಗ್ಯ ಸಿನಿಮಾಗಳಿಗೆ ಮಾತ್ರ ಸಿಗುತ್ತಿತ್ತು. ಆದರೆ ಈಗ ಧಾರಾವಾಹಿಗೂ ಆ ಸೀಕ್ವೆಲ್ ಭಾಗ್ಯ ಸಿಕ್ಕಿದೆ. ಅದುವೇ 'ಮುದ್ದುಮಣಿಗಳು' ಧಾರಾವಾಹಿ.

ಈಗಾಗಲೇ 'ಮುದ್ದುಮಣಿಗಳು' ಧಾರಾವಾಹಿ ಎರಡು ಭಾಗವಾಗಿ ಮೂಡಿ ಬಂದಿದೆ. ಮೊದಲು 'ಮುದ್ದುಲಕ್ಷ್ಮಿ' ಬಳಿಕ 'ಮುದ್ದುಮಣಿಗಳು' ಈಗ ಅದೂ ಮುಕ್ತಾಯದ ಹಂತ ತಲುಪಿದೆ. ಮುಂದೆ ಇದೇ ಧಾರಾವಾಹಿಯ ಮೂರನೇ ಭಾಗವೂ ಬರಲಿದೆ. ಅದ್ಯಾಗ ತಿಳಿಯೋ ಮುನ್ನ ಮುದ್ದುಮಣಿಗಳ ಬಾಳಲ್ಲಿ ಏನಾಗುತ್ತಿದೆ ನೋಡೋಣ.

Star Suvarna serial Muddumanigalu ending soon and chapter 3 will start

'ಮುದ್ದುಮಣಿಗಳು' ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಶಾರ್ವರಿ ಬಂದ ಮೇಲೆ ಒಂದಾಗಿದ್ದ ಅಕ್ಕ ತಂಗಿಯರು ದೂರಾದ್ರು. ಒಗ್ಗಟ್ಟಾಗಿದ್ದ ಮನೆ ಒಡೆದು ಚೂರಾಗಿತ್ತು. ಅದೆಲ್ಲವನ್ನು ಹೇಗೋ ಜಾಹ್ನವಿ ಸರಿ‌ ಮಾಡಿದ್ದಳು. ಆದರೆ, ಪ್ರಯೋಜನವೇನು? ಶಾರ್ವರಿ ಮಾಡಿದ ಕೆಲಸಕ್ಕೆ ದೃಷ್ಟಿ ಆಸ್ಪತ್ರೆ ಸೇರಿದ್ದಾಳೆ. ಬದುಕುವ ಭರವಸೆಯನ್ನು ಮನೆಯವರೆಲ್ಲಾ ಕಳೆದುಕೊಂಡಿದ್ದಾರೆ.

ದೃಷ್ಟಿಯ ಸ್ಥಿತಿ ಈಗ ಹೇಗಿದೆ..?

ಶಾರ್ವರಿ ದೊಡ್ಡ ಸೈಕೋ. ಮನೆಗೆ ಬಂದು ಸೇರಿಕೊಂಡಾಗಿನಿಂದ ತೊಂದರೆ ಮಾಡುತ್ತಲೇ ಇದ್ದಾಳೆ. ಜಾಹ್ನವಿನ ಕೊಲ್ಲಲು ಹೋದಾಗ ದೃಷ್ಟಿ ಅಡ್ಡ ಬಂದಿದ್ದಾಳೆ. ಶಾರ್ವರಿ ಚುಚ್ಚಿದ ಪರಿಣಾಮ ಈಗ ದೃಷ್ಟಿ ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಈಗ ಪೊಲೀಸರು ಬೇರೆ ಆಸ್ಪತ್ರೆಗೆ ಬಂದಿದ್ದಾರೆ. ದೃಷ್ಟಿಯನ್ನು ಅರೆಸ್ಟ್ ಮಾಡಲು. ಬಂದ ರೋಗಿಗಳಿಂದ ಕಿಡ್ನಿ ಕಿತ್ತುಕೊಂಡು ಮಾರಾಟ ಮಾಡುತ್ತಿದ್ದಾರೆಂದು ದೂರು ನೀಡಿದ್ದಾರೆ. ಆಸ್ಪತ್ರೆಗೆ ಬಂದ ಪೊಲೀಸರಿಗೆ ಶಿವು ಅವಾಜ್ ಹಾಕಿದ್ದಾನೆ.

Star Suvarna serial Muddumanigalu ending soon and chapter 3 will start

ಸತ್ತಿದ್ದ ಮುದ್ದುಲಕ್ಷ್ಮೀ ಜಾನು ಆಗಿ ಬಂದಿದ್ಧೇಗೆ..?

ಈ ಮೊದಲು 'ಮುದ್ದುಲಕ್ಷ್ಮೀ' ಧಾರಾವಾಹಿ ಎಲ್ಲರಿಗೂ ನೆನಪಿದ್ದೆ ಇರುತ್ತದೆ. 'ಮುದ್ದುಲಕ್ಷ್ಮೀ'ಯ ಗಂಡ ಧ್ರುವಂತ್‌ನನ್ನು ಶಾರ್ವರಿ ಇಷ್ಟಪಟ್ಟಿದ್ದಳು. ಆ ಆಸೆಯೇ ಮುದ್ದುಲಕ್ಷ್ಮೀಗೆ ಆಕ್ಸಿಡೆಂಟ್ ಆಗುವುದಕ್ಕೂ ಕಾರಣವಾಗಿತ್ತು. ಅದರಲ್ಲಿ ಮುದ್ದುಲಕ್ಷ್ಮೀ ಸಾವನ್ನಪ್ಪಿದ್ದಳು, ಧ್ರುವಂತ್ ಬದುಕಿದ್ದ. ಮುದ್ದುಲಕ್ಷ್ಮೀಯ ಎರಡನೇ ಜನ್ಮವೇ ಜಾಹ್ನವಿ. ಮಕ್ಕಳಿಗಾಗಿ ಮನಸ್ಸು ಕನವರಿಸುತ್ತಾ ಇತ್ತು. ಅದರ ಪರಿಣಾಮ ಮಕ್ಕಳು ತೀರಾ ಕಷ್ಟದಲ್ಲಿದ್ದಾಗ ಕಡೆಗೂ ಮಕ್ಕಳ ಬಳಿ ಬಂದಳು. ಆಗಲೂ ಹಳೆಯ ಜನ್ಮದ ಶಾರ್ವರಿ ಬೆನ್ನು ಬಿಡಲಿಲ್ಲ.

ದೃಷ್ಟಿ ಬದುಕುವುದು ಅನುಮಾನ

ವಂಶಪಾರಂಪರ್ಯವಾಗಿ ಬಂದ ಶತ್ರು ಶಾರ್ವರಿ. ಆ ಶಾರ್ವರಿ ಕೈಯಿಂದಾನೇ ದೃಷ್ಠಿಯ ಪ್ರಾಣ ಪಕ್ಷಿ ಹಾರಿ ಹೋಗುವ ಸಾಧ್ಯತೆ ಇದೆ. ಇತ್ತ ವೀಕ್ಷಕರು ದೃಷ್ಠಿ ಗುಣಮುಖರಾಗಿ ಬರುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಕಿರುತೆರೆ ಮೂಲಗಳ ಪ್ರಕಾರ ದೃಷ್ಟಿ ಬದುಕುಳಿಯಲ್ಲ. ಈಗ ಆಸ್ಪತ್ರೆಯಲ್ಲಿರುವ ದೃಷ್ಟಿ ಮತ್ತೆ ಎದ್ದು ಮನೆಗೆ ಬರಲ್ಲ. ಶಿವು ಒಂಟಿಯಾಗ್ತಾನೆ. ದೃಷ್ಟಿಯ ಸಾಯುತ್ತಾಳೆ. ದೃಷ್ಟಿ ಸತ್ತ ಬಳಿಕ ಎಲ್ಲರ ಮನಸ್ಸು ಒಡೆಯುತ್ತೆ ಅನ್ನೋ ಗುಸು ಗುಸು ಓಡಾಡುತ್ತಿದೆ.

ಇನ್ನೊಂದು ವಾರದಲ್ಲಿ ಹೊಸ ತಿರುವು

ಮುದ್ದುಮಣಿಗಳು ಧಾರಾವಾಹಿ ಮತ್ತೊಂದು ಸರ್ಪ್ರೈಸ್ ನೀಡಲಿದೆ ಎನ್ನಲಾಗುತ್ತಿದೆ. ಈಗ ದೃಷ್ಟಿ ಸತ್ತರು, ಹೊಸ ಮುಖಗಳ ಪರಿಚಯ ಈ ಧಾರಾವಾಹಿ‌ ಮೂಲಕ ಆಗಲಿದೆ. ಸತ್ತ ಧ್ರುವಂತ್ ಮೂರನೇ ಭಾಗದಲ್ಲಿ ಪರಿಚಯವಾಗ್ತಾನೆ. ಯಾರು ಕೂಡ ಊಹೆ ಮಾಡದ ರೀತಿ ಧಾರಾವಾಹಿಯ ಕಥೆ ಬದಲಾಗಲಿದೆ ಅನ್ನೋದು ಸೀರಿಯಲ್ ಲೋಕದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಇದೆ ಮೊದಲ ಬಾರಿಗೆ ಅನ್ಸುತ್ತೆ ಸ್ಟಾರ್ ಸುವರ್ಣದಲ್ಲಿಯೇ ಧಾರಾವಾಹಿಯನ್ನು ಚಾಪ್ಟರ್‌ಗಳಾಗಿ ಪ್ರಸಾರ ಮಾಡ್ತಾ ಇರೋದು. ಅದರಲ್ಲೂ ಮುದ್ದುಲಕ್ಷ್ಮೀ ಧಾರಾವಾಹಿ ಮುಗಿದ ಬಳಿಕ ಮುಂದುವರೆದ ಭಾಗವಾಗಿ 'ಮುದ್ದುಮಣಿಗಳು' ಆರಂಭ ಆಗಿತ್ತು. ಈಗ ಅದೂ ಮುಗಿಯುತ್ತಾ ಬಂದಿದ್ದು ಇದರ ಮುಂದುವರೆದ ಭಾಗದಲ್ಲಿ ಹೊಸ ಪಾತ್ರಗಳು, ಹೊಸ ಅಧ್ಯಾಯದೊಂದಿಗೆ ಶೀಘ್ರವೇ ಪ್ರಸಾರ ಆಗಲಿದೆ.

More from Filmibeat

English summary
Star Suvarna serial Muddumanigalu ending soon and chapter 3 will start. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X