Namma Lacchi: ಮಕ್ಕಳಿಂದ ಡೈಲಾಗ್ ಹೇಳಿಸುವುದು ಎಷ್ಟು ಕಷ್ಟ ಗೊತ್ತಾ..? ನಿರ್ದೇಶಕರ ಪಾಡು ನೋಡಿ!
ಮಕ್ಕಳಿಗೆ ಏನೇ ಹೇಳಿಕೊಟ್ಟರು ಬೇಗನೇ ಕಲಿತು ಬಿಡುತ್ತಾರೆ. ದೊಡ್ಡವರಿಗಿಂತ ಕೊಂಚ ಬೆಸ್ಟ್ ಅವರೇ. ಆದರೆ, ದೊಡ್ಡವರಿಗೆ ಬೈದು ಬುದ್ದಿ ಹೇಳಿದಂತೆ ಮಕ್ಕಳಿಗೆ ಹೇಳುವುದಕ್ಕೆ ಆಗಲ್ಲ. ಮಕ್ಕಳಲ್ಲಿ ಮಕ್ಕಳಾಗಿ ಕೆಲಸ ಮಾಡುವುದು ಕೂಡ ಎಲ್ಲರಿಗೂ ಬರುವುದಿಲ್ಲ. ಈ ವಿಚಾರದಲ್ಲಿ ನಿರ್ದೇಶಕ ಸಂಪೃಥ್ವಿ ಗೆಲ್ಲುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ 'ನಮ್ಮ ಲಚ್ಚಿ' ಧಾರಾವಾಹಿ ಮೂಡಿ ಬರುತ್ತಿದೆ. ಅದರಲ್ಲೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಾ ಇದೆ. ಕುತೂಹಲವನ್ನು ಹೆಚ್ಚು ಮಾಡುತ್ತಾ ಇದೆ. ಮರೆಯಾಗಿದ್ದ ಗಿರಿಜಾ ಬೇರೆ ಮತ್ತೆ ಬಂದಾಗಿದೆ. ಇನ್ನು ಮಕ್ಕಳ ಮೇಲೆ ಈ ಧಾರಾವಾಹಿ ಹೆಚ್ಚು ಫೋಕಸ್ ಆಗಿರುವುದರಿಂದ ಅದರ ತಯಾರಿಯ ವಿಡಿಯೋವೊಂದನ್ನು ನಿರ್ದೇಶಕ ಸಂಪೃಥ್ವಿ ಹಂಚಿಕೊಂಡಿದ್ದಾರೆ.

'ನಮ್ಮ ಲಚ್ಚಿ'ಯಲ್ಲಿ ಮೂರು ಮಕ್ಕಳು
'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಮೂವರು ಮಕ್ಕಳು ಸಾಕಷ್ಟು ಗಮನ ಸೆಳೆಯುತ್ತಾರೆ. ಅದರಲ್ಲಿ ಲಚ್ಚಿ ಮುಖ್ಯ ಪಾತ್ರಧಾರಿಯಾದರೆ, ರಿಯಾ ಕೂಡ ಪಾತ್ರಕ್ಕೂ ಅದರಷ್ಟೇ ಪ್ರಾಮುಖ್ಯತೆ ಪಡೆದಿದ್ದಾರೆ. ಇನ್ನು ಸುಗ್ಗಿ, ಲಚ್ಚಿಗೆ ತಂಗಿಯಾಗಿ ಗಮನ ಸೆಳೆಯುತ್ತಾಳೆ. ಈ ಮೂರು ಮಕ್ಕಳ ಕಥೆ ಒಂದೊಂದು ರೀತಿ ತಿರುವು ಪಡೆಯುತ್ತಿದೆ. ರಿಯಾ ಹಾಗೂ ಸುಗ್ಗಿ ಇಬ್ಬರ ಕಥೆಯೂ ಲಚ್ಚಿ ಕಥೆಗೆ ಬಹಳ ಹತ್ತಿರವಾದದ್ದಾಗಿದೆ. ನಿರ್ದೇಶಕರಿಗೆ ಈ ಮೂವರು ಮಕ್ಕಳಿಂದ ಡೈಲಾಗ್ ಹೇಳಿಸುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ.
ಪತ್ರ ಬರೆದು ಧನ್ಯವಾದ ತಿಳಿಸಿದ ಸಾಂಘವಿ
ಸಾಂಘವಿ ಅಲಿಯಾಸ್ ಲಚ್ಚಿಗೆ ಇದು ಮೊದಲ ಧಾರಾವಾಹಿ. ಈ ಧಾರಾವಾಹಿಯಲ್ಲಿನ ಲಚ್ಚಿ ಪಾತ್ರ ತುಂಬಾ ಮುಖ್ಯವಾದದ್ದು. ಚಿಕ್ಕ ವಯಸ್ಸೇ ಆದರೂ ಬಹಳ ಪ್ರಬುದ್ಧತೆ ಬೇಕು. ನೋವಾದರೂ ಸಹಿಸಿಕೊಳ್ಳುವ ಶಕ್ತಿ ಬೇಕು. ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಮಾತುಗಾರಿಕೆ ಇರಬೇಕು. ಹೀಗಾಗಿ ನಿರ್ದೇಶಕರು ಬಹಳ ಸೂಕ್ಷ್ಮತೆಯಿಂದ ಆಯ್ಕೆ ಮಾಡಿಕೊಂಡಿದ್ದಾರೆ. ಲಚ್ಚಿ ತಡವಾಗಿ ಬಂದರೂ ಅವಳಿಗಾಗಿ ಕಾದು ಈ ಪಾತ್ರ ನೀಡಿದ್ದಾರೆ. ಇದಕ್ಕೆ ಸಾಂಘವಿ ಧನ್ಯವಾದ ತಿಳಿಸಿದ್ದಾಳೆ. ನಿರ್ದೇಶಕರಿಗೆ ಪತ್ರ ಬರೆದು ಥ್ಯಾಂಕ್ಯೂ ಹೇಳಿದ್ದಾಳೆ.
ಕಡೆಗೂ ಬಂತು ಸುಗ್ಗಿಗೆ ಡೈಲಾಗ್
ಇದರಲ್ಲಿ ಸುಗ್ಗಿ ಲಚ್ಚಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಸುಗ್ಗಿ ಅತ್ತೆಯ ಮಗಳು. ಆದರೆ ಸಂಗಮ್ ಮನೆಗೆ ಬಂದಾಗ, ಶಾಂತ ತನ್ನ ಮಗಳನ್ನೇ ಸಂಗಮ್ ಮಗಳು ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದಳು. ಸುಗ್ಗಿ ಕೂಡ ಹಳ್ಳಿ ಸೊಗಡಿನ ಭಾಷೆಯನ್ನೇ ಮಾತನಾಡಬೇಕು. ಆದರೆ ಸುಗ್ಗಿ ಮೂಲತಃ ಹಳ್ಳಿಯವಳು ಅಲ್ಲ. ಧಾರಾವಾಹಿಗೋಸ್ಕರ ಹಳ್ಳಿ ಭಾಷೆ ಮಾತನಾಡುತ್ತಾಳೆ. ಕೆಲವೊಂದು ಸಲ ದೊಡ್ಡ ದೊಡ್ಡ ಡೈಲಾಗ್ ಇದ್ದಾಗ ಕಷ್ಟವಾಗಿ ಬಿಡುತ್ತದೆ. ಈಗ ಕತ್ತೆ ಕಿರುಲಿದೆ ಎಂಬ ಡೈಲಾಗ್ ಹೇಳುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಆದರೆ ನಿರ್ದೇಶಕರು ಮಾತ್ರ ಆ ಪ್ರಯತ್ನ ಬಿಟ್ಟಿಲ್ಲ. ಕಡೆಗೂ ಸುಗ್ಗಿಗೆ ಡೈಲಾಗ್ ಹೇಳಿ ಕೊಟ್ಟಿದ್ದಾರೆ. ನಿರ್ದೇಶಕರ ಈ ತಾಳ್ಮೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ.
ಸಂಗಮ್ ಮನೆಗೆ ಬಂದ ಗಿರಿಜಾ
ಗಿರಿಜಾ ಪಾತ್ರ ಸತ್ತು ಹೋಗಿತ್ತು. ನೇಹಾ ಗೌಡ ಕಮ್ ಬ್ಯಾಕ್ ಆಗಿದ್ದ ಧಾರಾವಾಹಿಯಲ್ಲಿ ಪಾತ್ರ ಇಷ್ಟು ಬೇಗ ಸತ್ತು ಹೋಯಿತಾ ಎಂಬ ಬೇಸರ ಅಭಿಮಾನಿಗಳಿಗೆ ಕಾಡಿತ್ತು. ಮತ್ತೆ ಪಾತ್ರ ಜೀವ ಪಡೆಯುತ್ತೆ ಎಂಬ ನಿರೀಕ್ಷೆಯೂ ಇರಲಿಲ್ಲ. ಆದರೆ, ಈಗ ಆ ಪಾತ್ರ ಜೀವ ಪಡೆದಿದೆ. ನೇರ ಸಂಗಮ್ ತನ್ನ ಪ್ರೇಯಸಿಯನ್ನು ತನ್ನ ಮನೆಗೆ ಕರೆದು ತಂದಿದ್ದಾನೆ. ಅದು ಮಗಳೊಂದಿಗೆ. ಇನ್ನು ಮುಂದೆ ನಮ್ಮ ಲಚ್ಚಿ ಹೊಸ ತಿರುವು ಪಡೆಯಲಿದೆ.


Click it and Unblock the Notifications











