Namma Lacchi: ಗಿರಿಜಾಳನ್ನು ಹುಡುಕಿಕೊಂಡು ಸಂಪಿಗೆ ಹಳ್ಳಿಗೆ ಬಂದ ಸಂಗಮ್‌ಗೆ ಶಾಕ್ ಮೇಲೆ ಶಾಕ್!
ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಸಂಗಮ್ ಈಗಾಗಲೇ ಗಿರಿಜಾಳನ್ನು ಹುಡುಕಿಕೊಂಡು ಸಂಪಿಗೆ ಹಳ್ಳಿಗೆ ಬಂದಿದ್ದಾನೆ. ಲಚ್ಚಿಗೆ ಈಗಾಗಲೇ ತನ್ನ ತಂದೆ ಸಂಗಮ್ ಎಂದು ತಿಳಿದು ಹೋಗಿದೆ. ಸಂಗಮ್ ಮಾತ್ರ ಗಿರಿಜಾ ಅದೆಕೋ ಕಷ್ಟದಲ್ಲಿ ಇದ್ದಾಳೆ. ಆಕೆಗೆ ನಾನು ಹೇಗಾದರೂ ಮಾಡಿ ಸಹಾಯ ಮಾಡಲೇಬೇಕು ಎಂದು ಹೇಳುತ್ತಿರಬೇಕಾದರೆ ಸಂಗಮ್ ಅಣ್ಣ ತಡೆಯುತ್ತಾನೆ.
ಆದರೆ ಆತ ಏನೇ ಹೇಳಿದರೂ ಸಂಗಮ ಮಾತ್ರ ಯಾವುದನ್ನು ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ಇರುತ್ತಾನೆ. ಆದರೆ ಇವರೆಲ್ಲ ಮಾತನಾಡುತ್ತಿರುವುದನ್ನು ಲಚ್ಚಿ ಮಹಡಿ ಮೇಲಿಂದ ನೋಡುತ್ತಿರುತ್ತಾಳೆ. ಇನ್ನು ಸಂಗಮ್ ಜೋರಾಗಿ ಗಿರಿಜಾ ಗಿರಿಜಾ ಎಂದು ಹೇಳಿದಾಗ ಲಚ್ಚಿ ಓಡಿ ಬರುತ್ತಾಳೆ. ಸಂಗಮಪ್ಪ ಇದ್ಯಾಕೆ ಇಷ್ಟಕ್ಕೆ ರೊಚ್ಚಿಗೆದ್ದಿದ್ದಾರೆ . ಹಾಗೆಯೇ ನನ್ನ ತಾಯಿಯ ಹೆಸರನ್ನು ಯಾಕೆ ಇವರು ಎತ್ತುತ್ತಿದ್ದಾರೆ ಎಂದು ಯೋಚನೆ ಮಾಡುತ್ತಿರುತ್ತಾಳೆ. ಆಗ ಜೋರಾಗಿ ಸಂಗಮ್ ಹೇಳುತ್ತಾನೆ. ಗಿರಿಜಾ ಬೇರೆ ಯಾರು ಅಲ್ಲ, ನಾನು ತಾಳಿ ಕಟ್ಟಿದ ನನ್ನ ಹೆಂಡತಿ ಎಂದು ಹೇಳಿದಾಗ ಲಚ್ಚಿಗೆ ತನ್ನ ತಂದೆ ಸಂಗಮ್ ಎನ್ನುವ ವಿಚಾರ ಗೊತ್ತಾಗುತ್ತದೆ.

ಲಚ್ಚಿ ಇದುವರೆಗೂ ತನ್ನ ತಂದೆಯನ್ನು ಹುಡುಕುತ್ತಿದ್ದಳು. ಆದರೆ ಸಂಗಮ್ ತನ್ನ ತಂದೆ ಎಂದು ಆಕೆಗೆ ತಿಳಿಯಲೇ ಇಲ್ಲ. ಕೊನೆಗೂ ತನ್ನ ತಂದೆ ಸಂಗಮ್ ಎನ್ನುವ ವಿಚಾರ ಲಚ್ಚಿಗೆ ಇದೀಗ ತಿಳಿದುಹೋಗಿದೆ. ಇನ್ನು ಸಂಗಮ್ ತಪ್ಪಿಸಿಕೊಂಡು ಸಂಪಿಗೆ ಹಳ್ಳಿಗೆ ಹೋಗುತ್ತಾನೆ ಆದರೆ ಈ ವಿಚಾರ ಯಾರಿಗೂ ತಿಳಿದಿರುವುದಿಲ್ಲ ಸ್ವಲ್ಪ ಸಮಯದ ಬಳಿಕ ಮನೆಯವರಿಗೆಲ್ಲಾ ವಿಚಾರ ತಿಳಿಯುತ್ತದೆ.
ಸಂಗಮ್ ಮೇಲೆ ಮುನಿಸಿಕೊಂಡ ದೀಪಿಕಾ
ದೀಪಿಕಾ, ಸಂಗಮ್ ಬಗ್ಗೆ ಕೋಪ ಮಾಡಿಕೊಂಡು ಇರುತ್ತಾಳೆ.. ಹಾಗೆಯೇ ಸಂಗಮ್ ಅಣ್ಣ ಸಂಗಮ್ ನನ್ನು ಹುಡುಕಲು ಸಂಪಿಗೆ ಹಳ್ಳಿಗೆ ಹೋಗುತ್ತಾನೆ. ಗಿರಿಜಾ ಇದೀಗ ಬದುಕಿ ಉಳಿದಿಲ್ಲ ಎನ್ನುವ ಸತ್ಯ ಸಂಗಮ್‌ಗೆ ತಿಳಿಯಬಾರದು ಎನ್ನುವುದು ಸಂಗಮ್ ಅಣ್ಣನ ಉದ್ದೇಶ. ಸಂಗಮ್ ಗೆ ಅದೆಷ್ಟೇ ಬಾರಿ ಗಿರಿಜಾ ಬೇರೆ ಮದುವೆಯಾಗಿ ಸಂತೋಷವಾಗಿದ್ದಾಳೆ ಎಂದು ಹೇಳಿದರೂ ಕೂಡ ಆತ ಸಂಪಿಗೆಹಳ್ಳಿ ಗೆ ಹೋಗಿದ್ದನೆ.

ಸಂಪಿಗೆ ಹಳ್ಳಿಗೆ ಹೊರಟ ಸಂಗಮ್ ಅಣ್ಣ
ಲಚ್ಚಿ ಕೂಡ ಸಂಗಮ ಅಣ್ಣನ ಕಾರು ಹತ್ತಿ ಸಂಪಿಗೆ ಹಳ್ಳಿ ಕಡೆ ಹೊರಟಿದ್ದಾಳೆ. ಇದೀಗ ಸಂಗಮ್ ಗೆ ಸಂಪಿಗೆ ಹಳ್ಳಿಯಲ್ಲಿ ಗಿರಿಜಾಳ ದರ್ಶನವಾಗಿದೆ. ಹೌದು ಯಾವುದೋ ಒಂದು ಡ್ರಾಮಾ ಕಂಪನಿಯವರು ನಾಟಕ ಆಡುತ್ತಿರುವ ಬಳಿಗೆ ಹೋದ ಸಂಗಮ್ ಗಿರಿಜಾಳನ್ನು ನೋಡುತ್ತಾನೆ. ಲಚ್ಚಿ ಕೂಡ ಓಡಿಕೊಂಡು ಡ್ರಾಮ ಮಾಡುತ್ತಾ ಇರುವವರ ಬಳಿಗೆ ಬಂದಾಗ ಆಕೆಗೆ ಶಾಕ್ ಆಗುತ್ತದೆ.
ತಾಯಿಯನ್ನು ನೋಡಿ ಶಾಕ್ ಆದ ಲಚ್ಚಿ
ತನ್ನ ತಾಯಿಯಂತೆ ಇರುವ ತದ್ರೂಪಿ ಯುವತಿ ಅಲ್ಲಿ ಇರುತ್ತಾಳೆ. ಗಿರಿಜಾ ದೀಪಿಕಾ ಕಾರಿನಡಿ ಬಿದ್ದು ಈಗಾಗಲೇ ಸತ್ತು ಹೋಗಿದ್ದಾಳೆ ವಿಚಾರ ಲಚ್ಚಿಗೂ ತಿಳಿದಿದೆ. ಆದರೆ ಸಂಗಮಗೆ ಯಾವುದೇ ವಿಚಾರ ಗೊತ್ತಿಲ್ಲ. ಆತನ ಬಳಿ ಆತನ ಅಣ್ಣ ಸುಳ್ಳು ಹೇಳಿ ದೀಪಿಕಾ ಜೊತೆ ಮದುವೆ ಮಾಡಿಸಿದ್ದಾನೆ. ದೀಪಿಕಾ ಜೊತೆ ಸರಿಯಾಗಿ ಸಂಸಾರ ಮಾಡಲು ಆಗದೆ ಗಿರಿಜಾಳನ್ನು ಮರೆಯಲು ಆಗದೆ ಸಂಗಮ್ ಪಟ್ಟ ಪಾಡು ಅದೆಷ್ಟು, ಆದರೂ ಇದೀಗ ಸಂಗಮ್ ಗಿರಿಜಾಳನ್ನು ಹುಡುಕಿಕೊಂಡು ಸಂಪಿಗೆ ಹಳ್ಳಿಗೆ ಬಂದೇಬಿಟ್ಟಿದ್ದಾನೆ.


Click it and Unblock the Notifications











