Namma Lacchi: ಗೆಳೆಯರ ಮಾತಿಗೆ ಮುನಿಸಿಕೊಂಡ ರಿಯಾ, ರಿಯಾ ಕೋಪ ನೋಡಿ ಬೆಚ್ಚಿ ಬಿದ್ದ ಲಚ್ಚಿ!
ಸ್ಟಾರ್ ಸುವರ್ಣದಲ್ಲಿ ನಮ್ಮ ಲಚ್ಚಿ ಧಾರಾವಾಹಿಯನ್ನು ಜನ ಇಷ್ಟಪಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸಂಗಮ್ ಗೆ ಗಿರಿಜಾ ನೆನಪು ಬಹಳ ಜಾಸ್ತಿಯಾಗಿ ಕಾಡುತ್ತಿದೆ. ಗಿರಿಜಾ ತೊಡುತ್ತಿದ್ದ ಕಾಲಿನ ಗೆಜ್ಜೆ ಸಂಗಮ್ ಮನೆಯ ಆವರಣದಲ್ಲಿ ಸಿಗುತ್ತದೆ ಕಾಲಿನ ಗೆಜ್ಜೆ ನೋಡುತ್ತಿದ್ದ ಹಾಗೆಯೇ ಸಂಗಮ್ ಬಹಳ ಬೇಸರಗೊಳ್ಳುತ್ತಾನೆ.
ಹಾಗೆಯೇ ನನ್ನ ಗಿರಿಜಾ ಇಲ್ಲಿಯೇ ಎಲ್ಲೋ ಇದ್ದಾಳೆ ಎಂದು ಬಹಳ ಖುಷಿ ಪಡುತ್ತಾನೆ. ಆದರೆ ಗಿರಿಜಾ ಪತ್ತೆ ಇಲ್ಲ. ಆತ ಆ ಗೆಜ್ಜೆಯನ್ನು ಹಿಡಿದುಕೊಂಡು ಮನೆಯ ಒಳಗೆ ಹೋಗಿ ತನ್ನ ಬೀರುವಿನಲ್ಲಿ ಇರುವ ಗೆಜ್ಜೆಗೆ ಹೋಲಿಕೆ ಮಾಡಿ ನೋಡುತ್ತಾನೆ. ಅದರಲ್ಲಿರುವ ಗೆಜ್ಜೆಯನ್ನ ನೋಡಿ ಸಂಗಮ್ ಬಹಳ ಖುಷಿ ಪಡುತ್ತಾನೆ ಯಾಕೆಂದರೆ ಬೀರುವಿನಲ್ಲಿ ಗೆಜ್ಜೆ ಕೂಡ ಕೈಯಲ್ಲಿರುವ ಗೆಜ್ಜೆ ಕೂಡ ಒಂದೇ ತರನಾಗಿರುತ್ತದೆ. ಇದರಿಂದ ಸಂಗಮ್‌ಗೆ ಒಂದು ಅರ್ಥ ಆಗುತ್ತದೆ. ನನ್ನ ಗಿರಿಜಾ ಇಲಿಯೋ ಎಲ್ಲೆ ಇದ್ದಾಳೆ ಎಂದು ಬಹಳ ಖುಷಿಪಡುತ್ತಾನೆ. ಇನ್ನು ಆ ಬಗ್ಗೆ ಯೋಚನೆ ಮಾಡಿಕೊಂಡು ಮಹಡಿಯ ಮೇಲೆ ನಿಂತಿರುತ್ತಾನೆ.

ಸಂಗಮ್ ಮಾತಿಗೆ ದೀಪಿಕಾ ಬೇಸರ
ಸಂಗಮ್ ನಿಂತಿದ್ದನ್ನು ನೋಡಿದ ದೀಪಿಕಾ, ಸಂಗಮ್ ಯಾಕೆ ಇಂದು ನಿಂತಿದ್ದಾನೆ ಎಂದು ಯೋಚನೆ ಮಾಡುತ್ತಾಳೆ. ಬಳಿಕ ಸಂಗಮ್ ಬಳಿ ಮಾತನಾಡಿದಾಗ ಗಿರಿಜಾ ಬಗ್ಗೆ ಹೇಳುತ್ತಾನೆ. ಆಗ ದೀಪಿಕಾಗೆ ಬಹಳ ಕೋಪ ಬರುತ್ತದೆ. ಮದುವೆಯಾಗಿ ನನ್ನ ಜೊತೆ ದಾಂಪತ್ಯ ಜೀವನವನ್ನು ಆರಂಭಿಸಿದ ಬಳಿಕವೂ ನಿಮಗೆ ಹಳೆಯ ಗರ್ಲ್ ಫ್ರೆಂಡ್ ಮೇಲೆ ಬಹಳ ಪ್ರೀತಿ ಆಕೆಯನ್ನು ಇನ್ನು ಮರೆತಿಲ್ಲ ಎಂದು ಬಹಳ ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ.
ಲಚ್ಚಿಯ ಮೇಲೆ ರಿಯಾಗೆ ದ್ವೇಷ ಹುಟ್ಟು ಹಾಕಿದ ದೀಪಿಕಾ
ಇನ್ನು ಲಚ್ಚಿಯನ್ನು ಬಹಳ ಚೆನ್ನಾಗಿ ರೆಡಿ ಮಾಡುತ್ತಾಳೆ ದೀಪಿಕಾ. ಆದರೆ ಆಕೆಯ ಮೇಲೆ ದೀಪಿಕಾಗೆ ಕೊಂಚವು ಪ್ರೀತಿ ಇಲ್ಲ ಪ್ರೀತಿ ಇರುವ ಹಾಗೆ ನಟನೆ ಮಾಡುತ್ತಾಳೆ. ಯಾಕೆಂದರೆ ಲಚ್ಚಿಯನ್ನು ಬಿಟ್ಟು ಕೊಟ್ಟರೆ ನನ್ನ ಮಗಳ ಹಾಡಿಗೆ ದಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಲಚ್ಚಿಯ ಜೊತೆ ಪ್ರೀತಿ ನಾಟಕ ಆಡುತ್ತಾಳೆ. ಇನ್ನು ರಿಯಾಗು ಲಚ್ಚಿಯ ಮೇಲೆ ದ್ವೇಷ ನೋಡುವ ಹಾಗೆ ಮಾಡುತ್ತಿರುತ್ತಾಳೆ, ಆದರೆ ಅದೆಲ್ಲವನ್ನ ಲಚ್ಚಿ ಸರಿಪಡಿಸುತ್ತಾ ಹೋಗುತ್ತಿರುತ್ತಾಳೆ.

ರಿಯಾ ಮನೆಗೆ ಆಕೆಯ ಗೆಳೆಯರ ಬಳಗ ಬಂದಿರುತ್ತದೆ. ಈ ವೇಳೆ ಲಚ್ಚಿಯನ್ನು ನೋಡಿ ಆಕೆಯ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಾಗ ರಿಯಾಗೆ ಬಹಳ ಕೋಪ ಬರುತ್ತದೆ. ಆಕೆ ಅದೆಷ್ಟು ಸಾರಿ ಬೇಡ ಬೇಡ ಎಂದು ಹೇಳಿದರು. ಆಕೆ ಗೆಳೆಯರು ಮಾತ್ರ ಕೇಳಲೇ ಇಲ್ಲ ಕೊನೆಗೆ ಬಹಳ ಹೊಟ್ಟೆ ಕಿಚ್ಚಿದೆ ಎಂದು ಹೇಳಿ ಆಕೆ ಗೆಳೆಯರು ಹೊರಟು ಹೋಗುತ್ತಾರೆ.
ರಿಯಾ ಕೋಪ ಕಂಡು ಬೆಚ್ಚಿದ ಗೆಳೆಯರು
ಇದನ್ನೆಲ್ಲಾ ಕೇಳಿಸಿಕೊಂಡ ರಿಯಾಗೆ ಬಹಳ ಕೋಪ ಬರುತ್ತದೆ. ಆದರೆ ರಿಯಾ ಕೋಪ ಕಂಡು ಲಚ್ಚಿಗೆ ಬಹಳ ಭಯ ಕಾಡಲು ಶುರುವಾಗುತ್ತದೆ. ರಿಯಾ ಲಚ್ಚಿಯ ವಿರುದ್ಧ ತಿರುಗಿ ಬೀಳುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇನ್ನು ಸಂಗಮ್ ಮಾತ್ರ ಗಿರಿಜಾಳ ನೆನಪಿನಲ್ಲಿ ಬದುಕುತ್ತಿದ್ದಾನೆ. ಗಿರಿಜಾ ಯಾವಾಗ ನನ್ನ ಬದುಕಿಗೆ ಬರುತ್ತಾಳೆ ಎಂದು ಕಾಯುತ್ತಿದ್ದಾನೆ. ಆದರೆ ಗಿರಿಜಾ ತಮ್ಮೆಲ್ಲರನ್ನ ಬಿಟ್ಟು ಹೊರಟು ಹೋಗಿದ್ದಾಳೆ ಎಂದು ಯಾರ ಅರಿವಿಗೆ ಬಂದಿಲ್ಲ.


Click it and Unblock the Notifications











