Namma Lachi: ಅಮ್ಮ ಎಷ್ಟೇ ದೂರವಿಟ್ಟರೂ 'ನಮ್ಮ ಲಚ್ಚಿ'ಗೆ ಸಿಕ್ಕಿದ್ದು ತಂದೆಯಂತೆ ಕಂಠದ ಸನ್ಮಾನ..!

By ಎಸ್ ಸುಮಂತ್

ಗಿರಿಜಾ ಏನು ಆಗಬಾರದು ಎಂದುಕೊಂಡಿದ್ದಳೋ ಅದೇ ಆಗಿ ಬಿಟ್ಟಿದೆ. ಮಗಳನ್ನು ಸಂಗೀತದಿಂದ ದೂರವಿಡಬೇಕು ಅಂತ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಸಂಗೀತ ಕೇಳದಂತೆ ನೋಡಿಕೊಂಡಿದ್ದಾಳೆ. ನಮ್ಮ ಲಚ್ಚಿ ಕೂಡ ತಾಯಿಗೆ ಬೇಸರ ಮಾಡದೆ, ತಾಯಿಯ ಮುಂದೆ ಯಾವುದೇ ರೀತಿಯ ಸಂಗೀತವನ್ನು ಕೇಳದೆ, ದೂರ ಹೋಗಿ ಹಾಡು ಹಾಡುತ್ತಾ, ಹಾಡು ಕೇಳುತ್ತಾ ಕಾಲ ಕಳೆಯುತ್ತಿದ್ದಳು.

ಆದರೆ ಬ್ಲಡ್ ನಿಂದಾನೇ ಬಂದ ಟ್ಯಾಲೆಂಟ್ ಅಂತಾರಲ್ಲ ಲಚ್ಚಿಗೂ ಈಗ ಸಂಗೀತ ಹೊಲಿದು ಬಂದಿದ್ದು ಅದೇ ರೀತಿ. ತನ್ನ ತಂದೆ ಯಾರು ಅಂತ ತಿಳಿಯದೆ ತಂದೆಯನ್ನೇ ಅನುಸರಿಸುವ ನಮ್ಮ ಲಚ್ಚಿಗೆ ಸಂಗೀತ ತಾಯಿ ಅಚ್ಚುಕಟ್ಟಾಗಿ ಹೊಲಿದಿದ್ದಾಳೆ. ಅದರಿಂದ ಊರಿನವರಿಂದೆಲ್ಲಾ ಭೇಷ್ ಎನಿಸಿಕೊಂಡಿದ್ದಾಳೆ.

ಲಚ್ಚಿಗೆ ಆಗ್ಲೀ, ಊರವರಿಗೆ ಆಗ್ಲಿ ಸಂಗಮ್ ಬಗ್ಗೆ ಗೊತ್ತಿಲ್ಲ..!

ಲಚ್ಚಿಗೆ ಆಗ್ಲೀ, ಊರವರಿಗೆ ಆಗ್ಲಿ ಸಂಗಮ್ ಬಗ್ಗೆ ಗೊತ್ತಿಲ್ಲ..!

ಗಿರಿಜಾ ಮಾಡಿರುವ ಒಂದೇ ಒಂದು ತಪ್ಪಿಗೆ ದಿನಬೆಳಗಾದರೆ ಲಚ್ಚಿ ಕೂಡ ನೋವು ಅನುಭವಿಸುತ್ತಿದ್ದಾಳೆ. ತನ್ನ ತಂದೆಯ ಹೆಸರು ಗೊತ್ತಿಲ್ಲದೆ, ಊರವರ ಕೆಟ್ಟ ಪದಗಳಿಗೆ ಗುರಿಯಾಗುತ್ತಿದ್ದಾಳೆ. ಲಚ್ಚಿಯನ್ನು ತಂದೆ ಗೊತ್ತಿಲ್ಲದವಳು ಎಂದು ಕೆಟ್ಟದಾಗಿ ನಡೆಸಿಕೊಳ್ಳುವವರು ಜಾಸ್ತಿಯಾಗಿದ್ದಾರೆ. ಸಂಗಮ್ ಹಾಡಿಗೆ, ಸಂಗಮ್ ಕಂಠಕ್ಕೆ ಮರುಳಾಗಿ ಗಿರಿಜಾ ಪ್ರೀತಿಸಿದ್ದಳು, ಮದುವೆಯೂ ಆಯ್ತು, ಲಚ್ಚಿಯೂ ಹುಟ್ಟಿದಳು, ಆದ್ರೆ ವಾಪಸ್ ಬರುತ್ತೀನಿ ಅಂತ ಬಿಟ್ಟು ಹೋಗಿದ್ದ ಸಂಗಮ್ ಮಾತ್ರ ವಾಪಾಸ್ ಬರಲೇ ಇಲ್ಲ. ಇಡೀ ಊರಿಗೆ ಆತ ದೊಡ್ಡ ಸಿಂಗರ್ ಅಂತ ಗೊತ್ತು. ಈಗ ಅವನೇ ಲಚ್ಚಿ ತಂದೆ ಅಂತ ಹೇಳುವುದಕ್ಕೂ ಆಗದೆ ಒದ್ದಾಡುತ್ತಿರುವ ಗಿರಿಜಾ, ಮಗಳು ಸಂಗೀತವನ್ನು ಇಷ್ಟಪಟ್ಟರೆ ದ್ವೇಷಿಸುತ್ತಾಳೆ.

ಲಚ್ಚಿಯ ತಂದೆಯ ವಿಚಾರಕ್ಕೆ ಅವಮಾನ..!

ಲಚ್ಚಿಯ ತಂದೆಯ ವಿಚಾರಕ್ಕೆ ಅವಮಾನ..!

ಲಚ್ಚಿಯ ತಂದೆ ಯಾರು ಎಂಬುದು ಊರಿನವರಿಗೂ ಕೂಡ ಗೊತ್ತಿಲ್ಲ. ಹೀಗಾಗಿ ಲಚ್ಚಿಯನ್ನು ಚಿಕ್ಕ ಹುಡುಗಿ ಎಂದು ನೋಡದೆ, ಅವಳ ಮನಸ್ಸಿಗೆ ನೋವಾಗುತ್ತೆ ಎಂಬುದನ್ನು ನೋಡದೆ ಅವಮಾನ ಮಾಡುತ್ತಿದ್ದರು. ಲಚ್ಚಿ ತಾಯಿ ಚಾಮುಂಡವ್ವನಿಗೆ ಅಭಿಷೇಕ ಮಾಡುವುದಕ್ಕೆಂದು ದೊಡ್ಡ ಹಾಲಿನ ಕ್ಯಾನ್ ಅನ್ನು ಹೇಗೋ ಕಷ್ಟಪಟ್ಟು ಬೆಟ್ಟದ ಮೇಲಕ್ಕೆ ತೆಗೆದುಕೊಂದು ಹೋದಳು. ಆಗ ದೇವಸ್ಥಾನದ ಟ್ರಸ್ಟಿ ಲಚ್ಚಿಗೆ ಅವಮಾನ ಮಾಡಿ, ಅವಳು ತಂದಿದ್ದ ಹಾಳನ್ನು ಹೊರಗೆ ಚೆಲ್ಲಿದ್ದ. ಲಚ್ಚಿ ಆಗ ಬೇಸರ ಮಾಡಿಕೊಳ್ಳದೆ ಹೊರಗೆ ನಿಂತು ಹಾಡು ಹಾಡಿದಾಗ, ತಾಯಿಯ ಮೈಮೇಲಿದ್ದ ವಸ್ತ್ರವೇ ಲಚ್ಚಿ ಮೇಲೆ ಬಂದು ಬಿದ್ದಿತ್ತು.

ಬದಲಾದರೂ ಊರಿನ ಜನ..!

ಬದಲಾದರೂ ಊರಿನ ಜನ..!

ಲಚ್ಚಿಯ ತಾಳ್ಮೆ, ಲಚ್ಚಿಯ ಭಕ್ತಿಗೆ ದೇವರೇ ಒಲಿದಿರುವಾಗ ಮನುಷ್ಯರು ಯಾವ ಲೆಕ್ಕ. ಅದನ್ನು ಆದಷ್ಟು ಬೇಗ ಅರ್ಥ ಮಾಡಿಕೊಂಡಿದ್ದಾರೆ ದೇವಸ್ಥಾನದ ಟ್ರಸ್ಟಿಗಳು. ಅದಕ್ಕಾಗಿಯೇ ಲಚ್ಚಿಯನ್ನು ಹುಡುಕಿಕೊಂಡು ಮನೆಯ ಬಳಿಗೆ ಬಂದಿದ್ದರು. ಆಗ ಲಚ್ಚಿ "ನೀವೂ ಇಲ್ಲಿಂದ ಹೊರಡಿ ಅರ್ಚಕರೆ ಇಲ್ಲಂದ್ರೆ ಮೈಲಿಗೆ ಆಗುತ್ತೀರಿ" ಎಂದಾಗ ಅರ್ಚಕರು, ಟ್ರಸ್ಟಿಗಳು ಪುಟ್ಟ ಲಚ್ಚಿ ಬಳಿ ಕ್ಷಮೆ ಕೇಳಿದ್ದಾರೆ.

ಏನು ಬೇಡ ಅಂತಿದ್ದಳೋ ಅದೇ ಆಯ್ತು..!

ಏನು ಬೇಡ ಅಂತಿದ್ದಳೋ ಅದೇ ಆಯ್ತು..!

ಗಿರಿಜಾ ಇಷ್ಟು ವರ್ಷ ಕಷ್ಟ ಪಟ್ಟಿದ್ದು, ಲಚ್ಚಿಯ ಬಾಯಲ್ಲಿ ಸಂಗೀತ ಬರಬಾರದು ಅಂತ. ಆದ್ರೆ ಈಗ ಇಡೀ ಊರಿನ ಜನ ಅವಳನ್ನು ಹೊಗಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣವೇ ಆ ಸಂಗೀತ. ಅರ್ಚಕರು ಕೂಡ ಅದನ್ನೇ ಆಶೀರ್ವಾದ ಮಾಡಿದ್ದಾರೆ. ನಿನ್ನ ಸಂಗೀತ ಇನ್ನು ಎತ್ತರಕ್ಕೆ ಬೆಳೆಯಲಿ. ಇದನ್ನು ಯಾರಿಂದಾನು ತಪ್ಪಿಸಲು ಸಾಧ್ಯವಿಲ್ಲ ಎಂದಾಗಲೇ ಗಿರಿಜಾ ಶಾಕ್ ಆಗಿದ್ದಾಳೆ.

More from Filmibeat

English summary
Star suvarna serial Namma Lacchi Written Update on February 9th episode. Here is the details about lacchi mother Girija shock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X