Namma Lacchi: ಮತ್ತೆ ಬದಲಾದ ರಿಯಾಳಿಂದ ಲಚ್ವಿಯ ಆಸೆಗೂ ನಿರಾಸೆ..!

By ಎಸ್ ಸುಮಂತ್

ಲಚ್ಚಿ ಯಾರ ಮನೆ ಸೇರಬೇಕೋ ಅವರ ಮನೆಯನ್ನೇ‌ ಸೇರಿದ್ದಾಳೆ. ಅಭಿಮಾನದಿಂದ ಅಪ್ಪ ಎಂದು ಕರೆಯುವ ಸಂಗಮ್ ನಿಜವಾದ ಅಪ್ಪ. ಆ ಸತ್ಯ ಗೊತ್ತಾದ ದಿನ ಲಚ್ಚಿ ಜೊತೆಗೆ ಮನೆಯವರ ರಿಯಾಕ್ಷನ್ ಹೇಗಿರುತ್ತೋ ಗೊತ್ತಿಲ್ಲ. ಆದರೆ ಪ್ರೇಕ್ಷಕರಂತು ಆ ದಿನಕ್ಕಾಗಿಯೇ ಕಾಯುತ್ತಿದ್ದಾರೆ.

ಲಚ್ಚಿ ಈಗ ಯಾವುದೇ ಆತಂಕವಿಲ್ಲದೆ ಸಂಗಮ್ ಮನೆಯಲ್ಲಿ ಬದುಕುತ್ತಿದ್ದಾಳೆ. ಮುಚ್ಚಿಟ್ಟ ಸತ್ಯ ಕೂಡ ಬಯಲಾಗಿದೆ. ಇನ್ನು ಯಾವುದೇ ಆತಂಕ ಅವಳಲ್ಲಿ ಇಲ್ಲಿ. ಹೀಗಾಗಿ ಹುಡುಗ ಆಗಿದ್ದ ಲಚ್ಚಿ, ಈಗ ನಿಜರೂಪದಲ್ಲಿಯೇ ಎಲ್ಲರ ಪ್ರೀತಿ ಪಾತ್ರಳಾಗಿದ್ದಾಳೆ‌. ಇದರ ನಡುವೆ ರಿಯಾಳಲ್ಲಿ ಮತ್ತೆ ಬದಲಾವಣೆಯಾಗಿದೆ.

Star Suvarna serial Namma Lacchi Written Update on October 30th episode

ಲಚ್ಚಿ ಕಂಡರೆ ಹೊಟ್ಟೆ ಕಿಚ್ಚು ಪಡುತ್ತಿದ್ದ ರಿಯಾ

ಲಚ್ಚಿಯನ್ನು ಮನೆಗೆ ಕರೆತಂದಾಗಿನಿಂದ ರಿಯಾಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಸಾಕಷ್ಟು ಸಲ ಅವಳ ಪ್ರಾಣಕ್ಕೆ ಕುತ್ತು ತಂದಿದ್ದಾಳೆ. ಅದೃಷ್ಟವಶಾತ್ ಲಚ್ಚಿ ಪ್ರಾಣಪಾಯದಿಂದ ಬಚಾವ್ ಆಗಿದ್ದಾಳೆ. ರಿಯಾಳಿಗೋಸ್ಕರ ಧ್ವನಿಯಾಗಿದ್ದು ಇದೇ ಲಚ್ಚಿ. ದೀಪಿಕಾ ಸಾಕಷ್ಟು ಬಾರಿ ರಿಯಾಗೆ ಹೇಳಿದ್ದ ಮಾತು ಇದೇ ಆಗಿತ್ತು. ಸತ್ಯಾಂಶ ಗೊತ್ತಾದ ಮೇಲೆ ಸಂಗಮ್ ಕೂಡ ರಿಯಾಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದನು. ಆದರೂ ರಿಯಾಳಿಗೆ ಲಚ್ವಿ ಕಂಡರೆ ಪ್ರೀತಿ ಬರುತ್ತಿರಲಿಲ್ಕ. ಸದಾ ದ್ವೇಷಕಾರುತ್ತಿದ್ದಳು.

ದೀಪಿಕಾ ಕೂಡ ಮಗಳಾಗಿ ಸ್ವೀಕರಿಸಿದ್ದರು

ದಿನ ಕಳೆದಂತೆ ಸಂಗಮ್ ಎರಡು ಮಕ್ಕಳನ್ನು ಸಮಾನವಾವಿ ಕಾಣಲು ಶುರು ಮಾಡಿದ. ರಿಯಾಗೆ ಲಚ್ಚಿಯ ತ್ಯಾಗದ ಬಗ್ಗೆ ಮನವರಿಕೆ ಮಾಡಲು ಶುರು ಮಾಡಿದ. ಲಚ್ಚಿ ಹುಡುಗ ಆಗಿದ್ದಾಗಲೂ ರಿಯಾ ಒಪ್ಪಿಕೊಂಡಳು. ಇವನು ನನ್ನ ಅಣ್ಣ ಇದ್ದಂಗೆ ಅಂತ. ಬಳಿಕ ಹುಡುಗಿ ಎಂಬ ಸತ್ಯ ತಿಳಿದಾಗಲೂ ನನ್ನ ಅಕ್ಕ ಎಂದೇ ಸ್ವೀಕರಿಸಿದಳು. ದೀಪಿಕಾ ಕೂಡ ಲಚ್ಚಿ‌ ಇನ್ನು ಮುಂದೆ ನನ್ನ ದೊಡ್ಡ ಮಗಳು ಎಂದೇ ಘೋಷಣೆ ಮಾಡಿದಳು. ಅಂದಿನಿಂದ ಎಲ್ಲವೂ ಸರಿ ಇತ್ತು. ಲಚ್ವಿಗಾಗಿ ರಿಯಾ ಬಟ್ಟೆ ತೆಗೆಯುವುದು ಸೇರಿದಂತೆ ಅವಳಿಗಾಗಿ ಕಾಳಜಿ ಮಾಡುತ್ತಿದ್ದಳು.

ಮತ್ತೆ ಹೊಟ್ಟೆಕಿಚ್ಚು ಪಡುತ್ತಿರುವ ರಿಯಾ

ಆದರೆ, ದಿನಕಳದೆಂತೆ ರಿಯಾಳಿಗೆ ಲಚ್ಚಿ ಮೇಲೆ ಮತ್ತೆ ಹಳೆಯ ಭಾವನೆಯೇ ಬರುವುದಕ್ಕೆ ಶುರುವಾಗಿದೆ. ಮನೆಯಲ್ಲಿರುವವರೆಲ್ಲಾ ಲಚ್ಚಿ ಲಚ್ಚಿ ಎನ್ನುತ್ತಿದ್ದರೆ, ಬಂದ ರಿಯಾಳ ಫ್ರೆಂಡ್ಸ್ ಕೂಡ ಲಚ್ಚಿ ಜೊತೆಗೆ ಸೆಲ್ಫೀ ತೆಗೆಸಿಕೊಳ್ಳುತ್ತಿದ್ದರೆ, ರಿಯಾಳ ಡ್ಯಾಡ್ ಹೆಚ್ಚು ಲಚ್ಚುಯ ಜೊತೆಗೆ ಹೆಚ್ಚು ಸಮಯ ಇದ್ದರೆ ರಿಯಾಳಿಗೆ ಹೊಟ್ಟೆಕಿಚ್ಚು ಬರುವುದಿಲ್ಲವೆ. ಅದನ್ನು ನೇರವಾಗಿಯೇ ತೋರಿಸಿದ್ದಾಳೆ. ಡ್ಯಾಡ್ ಮತ್ತು ಲಚ್ಚಿಯ ಈ ಅನ್ಯೋನ್ಯತೆ ಇಷ್ಟ ಆಗಿಲ್ಲ ಅಂತಾನೇ ಹೇಳುತ್ತಿದ್ದಾಳೆ.

Star Suvarna serial Namma Lacchi Written Update on October 30th episode

ದತ್ತು ಬೇಡ ಎನ್ನುತ್ತಿರುವ ಲಚ್ಚಿ

ಲಚ್ಚಿ ಮನೆಗೆ ಬಂದಾಗಿನಿಂದ ಸಂಗಮ್‌ಗೆ ಅದೇನೋ ಪ್ರೀತಿ. ಅದರಲ್ಲೂ ರಿಯಾಳಿಗಾಗಿ ಧ್ವನಿಯಾಗಿದ್ದಾಳೆ ಎಂದು ಗೊತ್ತಾದ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗಿದೆ. ಇದರ ಜೊತೆಗೆ ಪ್ರತಿ ನಡೆಯಲ್ಲೂ ಗಿರಿಜಾಳನ್ನೇ ಹೋಲುತ್ತಾಳೆ. ಹೀಗಾಗಿ ಅಧಿಕೃತವಾಗಿ ಲಚ್ಚಿಯನ್ನು ದತ್ತು ಪಡೆಯಬೇಕು ಎಂದುಕೊಂಡಿದ್ದ. ಆದರೆ ಲಚ್ಚಿ ಅದಕ್ಕೆ ಒಪ್ಪಿಲ್ಲ. ಫ್ಯಾಮಿಲಿ ಫೋಟೋದಲ್ಲಿ ತನ್ನ ಫೋಟೋವನ್ನು ಲಚ್ಚಿ ಅಳಿಸಲು ಯತ್ನಿಸಿದ್ದಾಳೆ. ಯಾಕೆ ಎಂದು ಸಂಗಮ್ ಕೇಳಿದರೆ, ಮನೆಹಲ್ಲಿ ಎಲ್ಲರೂ ಸಂತೋಷವಾಗಿರಬೇಕು‌. ನನ್ನನ್ನು ದತ್ತು ಪಡೆಯಬೇಡಿ ಎಂದಿದ್ದಾಳೆ.

More from Filmibeat

English summary
Kannada News: Star Suvarna serial Namma Lacchi Written Update on October 30th episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X