Namma Lacchi Serial: ಆತ್ಮವಂಚನೆ ಮಾಡಿಕೊಳ್ಳುತ್ತಿರುವ ಸಂಗಮ್‌ಗೆ ಲಚ್ಚಿ ಹೇಳಿದ ಮಾತೇನು..?

By ಎಸ್ ಸುಮಂತ್

ಸಂಗಮ್ ಮತ್ತು ಲಚ್ಚಿಯದ್ದು ಅಪ್ಪ-ಮಗಳ ಸಂಬಂಧ. ಅದು ನಿಜವಾಗಿಯೂ ಹೌದು. ಆದರೆ, ಸತ್ಯ ಗೊತ್ತಿಲ್ಲದೆ ಇದ್ದರು ಇಬ್ಬರು ಅಪ್ಪ ಮಗನ ರೀತಿಯೇ ಇದ್ದಾರೆ. ಲಚ್ಚಿಯನ್ನು ರಿಯಾಳಷ್ಟೇ ಪ್ರೀತಿಸುತ್ತಿದ್ದಾನೆ ಸಂಗಮ್. ಆದರೆ, ಸತ್ಯ ಗೊತ್ತಾಗುವುದಕ್ಕೆ ಸಂಗಮ್ ಮನೆಯಲ್ಲಿಯೇ ಹಲವರು ಅಡ್ಡಗಾಲು ಹಾಕುತ್ತಿದ್ದಾರೆ.

ಹಣದ ಆಸೆಗೆ ಶಾಂತಾ, ತನ್ನ ಮಗಳು ಸುಗ್ಗಿಯನ್ನೇ ಮಾರುವುದಕ್ಕೆ ಹೊರಟಿದ್ದಾಳೆ. ಸಾಗರ್‌ಗೆ ಎಲ್ಲಾ ಸತ್ಯ ಗೊತ್ತಿದೆ. ಅದರ ಜೊತೆಗೆ ಸುಗ್ಗಿಯೇ ಸಂಗಮ್ ಮಗಳು ಎಂಬ ಸುಳ್ಳನ್ನು ನಂಬಿದ್ದಾನೆ. ಹೀಗಾಗಿ ಶಾಂತಾ, ಮನೆಯಲ್ಲಿಯೇ ಇದ್ದುಕೊಂಡು ನೆಮ್ಮದಿ ಹಾಳು ಮಾಡುತ್ತಿದ್ದಾಳೆ.

namma-lacchi-kannada-serial

ಲಚ್ಚಿಯಿಂದಾನೇ ರಿಯಾ ಫೇಮಸ್

ದೀಪಿಕಾಳ ತಂದೆ ಮ್ಯೂಸಿಕ್‌ನಿಂದಾನೇ ದೊಡ್ಡ ಶ್ರೀಮಂತನಾಗಿರುವುದು. ದೀಪಿಕಾಳ ಗಂಡ ಸಂಗಮ್ ದೊಡ್ಡ ಸಿಂಗರ್. ಖ್ಯಾತ ಗಾಯಕ. ಆದರೆ, ಸಂಗಮ್ ಮತ್ತು ದೀಪಿಕಾ ಮಗಳಿಗೆ ಹಾಡುಗಾರಿಕೆ‌ ಅಂದರೇನೆ ಗೊತ್ತಿಲ್ಲ. ಸಂಗಮ್ ಕಲಿಸಿ ಕೊಡುತ್ತೀನಿ ಎಂದರೂ ಕಲಿಯುವ ಶ್ರದ್ಧೆ ಅವಳಲ್ಲಿ ಇಲ್ಲ. ಹೀಗಾಗಿ ಸಂಗಮ್ ಮತ್ತು ಸಾಗರ್ ಬಿಟ್ಟು ಬಿಟ್ಟಿದ್ದಾರೆ. ಆದರೆ, ದೀಪಿಕಾ ಸುಮ್ಮನೆ ಇರುವವಳೇ ಅಲ್ಲ. ಮಗಳನ್ನು ಹೇಗಾದರೂ ಸಿಂಗರ್ ಮಾಡಲೇಬೇಕೆಂಬ ದಾರಿಯಲ್ಲಿ ಹೊರಟು, ಯಶಸ್ಸನ್ನು ಪಡೆದಿದ್ದಾಳೆ. ಆ ಎಲ್ಲಾ ಯಶಸ್ಸಿಗೂ ಲಚ್ಚಿಯೇ ಕಾರಣವಾಗಿದ್ದಾಳೆ.

ರಿಯಾಳ ಖ್ಯಾತಿ ಹಿಂದೆ ಬಿದ್ದಿರುವ ದೀಪಿಕಾ

ಈಗ ಬ್ಯಾಕ್ ಟು ಬ್ಯಾಕ್ ರೆಕಾರ್ಡಿಂಗ್ ರಿಯಾಳಿಗೆ ಸಿಗುತ್ತಿದೆ. ರಿಯಾಳ ಹೆಸರು ರಾರಾಜಿಸಬೇಕು ಅಂದರೆ ಅದರ ಹಿಂದೆ ಲಚ್ಚಿಯ ಧ್ವನಿ ಇರಲೇಬೇಕು. ಹೀಗಾಗಿ ಹೊಸ ಅಲ್ಬಂ ಸಾಂಗಿಗೆ ಲಚ್ಚಿಗೆ ಸಿದ್ಧ ಮಾಡಿಕೊಳ್ಳುವುದಕ್ಕೆ ಹೇಳಿದ್ದಾಳೆ. ಅದು ಸಂಗಮ್ ಬಳಿಯೇ ಬಂದು ಈ ವಿಚಾರ ತಿಳಿಸಿದ್ದಾಳೆ. ಹೊಸ ರೆಕಾರ್ಡಿಂಗ್ ಇದೆ ಅಂತ ದೀಪಿಕಾಳಿಗೆ ಸಂಗಮ್ ಸಾಕಷ್ಟು ಸಲ ಹೇಳಿದ್ದಾನೆ. "ತಪ್ಪು ಮಾಡುತ್ತಿದ್ದೀಯಾ ಆ ಮಗುವಿನ ಟ್ಯಾಲೆಂಟ್ ಬಳಸಿಕೊಂಡು ನಮ್ಮ ಮಗಳು ಫೇಮಸ್ ಆಗುವುದು ಅಪರಾಧ" ಅಂತ. ಆದರೆ, ದೀಪಿಕಾಳಿಗೆ ಈ ವಿಚಾರದಲ್ಲಿ ಯಾವುದೇ ರೀತಿಯ ಗಿಲ್ಟ್ ಕಾಡುವುದೇ ಇಲ್ಲ.

namma-lacchi-kannada-serial

ಆತ್ಮವಂಚನೆ ಬಗ್ಗೆ ಸಂಗಮ್ ಬೇಸರ

ಸಂಗಮ್‌ಗೆ ಸತ್ಯ ಗೊತ್ತಾದಾಗಿನಿಂದ ಮನಸ್ಸಿನಲ್ಲಿ ತುಂಬಾ ಬೇಸರವಿದೆ. ಲಚ್ಚಿಯ ಕಲೆಯನ್ನು ಜಗತ್ತಿಗೆ ಪರಿಚಯಿಸಬೇಕು ಎಂಬುದು. ಆದರೆ, ಅಡಕತ್ತರಿಯಲ್ಲಿ ಸಿಲುಕಿದ್ದಾನೆ. ಸತ್ಯ ಪ್ರಪಂಚಕ್ಕೆ ಗೊತ್ತಾದರೆ ಲಚ್ಚಿ ನಮ್ಮ ಮನೆಯಲ್ಲಿ ಇರುವುದಿಲ್ಲ ಎಂದು ದೀಪಿಕಾ ಹೇಳಿದ್ದಾಳೆ. ಇದೇ ಕಾರಣಕ್ಕೆ ಈಗ ಸಂಗಮ್ ಸುಮ್ಮನೆ ಆಗಿದ್ದಾನೆ. ಆದರೆ, ದೀಪಿಕಾ ಬಂದು ರೆಕಾರ್ಡಿಂಗ್ ಇದೆ ಅಂತ ಹೇಳಿದಾಗ ಆತ್ಮವಂಚನೆ ಮಾಡಿಕೊಳ್ಳುತ್ತಿರುವುದಾಗಿ ಫೀಲ್ ಮಾಡಿಕೊಂಡಿದ್ದಾನೆ ಸಂಗಮ್.

ಲಚ್ಚಿಯ ಮಾತಿಗೆ ಸಂಗಮ್ ಬೇಸರ

ಲಚ್ಚಿ ಅಲ್ಲೇ ಇದ್ದ ಕಾರಣ, ಲಚ್ಚಿಯ ಮುಂದೇನೆ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ಆದರೆ, ಲಚ್ಚಿ ಹೇಳಿದ್ದೇ ಬೇರೆ ಮಾತು. "ಈಗ ನೋಡಿ ನನಗೇನಾದರೂ ಬೇಸರ ಆಗುತ್ತಾ ಇದೆಯಾ. ನೋವು ಆಗುವುದಿಲ್ಲ. ನಾನು ಸಾಯುವ ತನಕ ರಿಯಾಗಾಗಿ ಹಾಡಿಕೊಂಡು ಇದ್ದು ಬಿಡುತ್ತೀನಿ" ಎಂದಿದ್ದಾಳೆ. ಲಚ್ಚಿಗೆ ನಿಯತ್ತು ಜಾಸ್ತಿ. ಯಾರಿಗೆ ಮಾತು ಕೊಡಲಿ ಆ ಮಾತನ್ನು ಯಾವತ್ತಿಗೂ ತಪ್ಪುವುದಿಲ್ಲ. ಹಾಗೇ ತನಗೆ ಕೆಡುಕು ಬಯಸಿದವರಿಗೂ ಕೆಡುಕು ಮಾಡುವುದಿಲ್ಲ. ಈಗ ಮನೆಗೆ ಬಂದಿರುವ ಶಾಂತಾ ಏನೋ ಕಿತಾಪತಿ ಮಾಡುತ್ತಾಳೆ ಅಂತ ಗೊತ್ತಿದ್ದರೂ ಸತ್ಯ ಹೇಳುವುದಕ್ಕೆ ಹೋಗಿಲ್ಲ.

More from Filmibeat

English summary
Star Suvarna serial Namma Lacchi Written Update on September 25th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X