Namma Lacchi: ಜಾಜಿ-ಸಂಗಮ್ ನಾಟಕದ ನಡುವೆ ಬಯಲಾಯ್ತು ಮಗು ಇರುವ ವಿಚಾರ..!
ಸಂಗಮ್ ತನ್ನ ಪ್ರೀತಿಯ ಹಿಂದೆ ಬಿದ್ದಿದ್ದಾನೆ. ಗಿರಿಜಾಳ ಕೊನೆಯುಸಿರೆಳೆದಿರುವ ವಿಚಾರ ಅದಾಗಲೇ ಗೊತ್ತಾಗಿದೆ. ಆದರೆ ಆ ಸಾವಿಗೆ ಕಾರಣಕರ್ತರನ್ನು ಹುಡುಕುತ್ತಾ ಹೊರಟಿದ್ದಾನೆ. ತನ್ನ ಪ್ರೀತಿಯನ್ನು ಕೊಂದವರ ಸುಳಿವು ಸುಲಭವಾಗಿ ಸಿಕ್ಕಿಲ್ಲ. ಆದರೆ ಕೆಲವೊಂದು ಸಾಕ್ಷಿಗಳು ಸಿಕ್ಕಿವೆ. ಆ ಸಾಕ್ಷಿಗಳ ಹಿಂದೆ ಬಿದ್ದಿರುವ ಸಂಗಮ್‌ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಅದರ ನಡುವೆಯೇ ಕೆಲವೊಂದು ಭಾವನಾತ್ಮಕ ವಿಚಾರಗಳು ಮನಸ್ಸನ್ನು ಕದಡುತ್ತಿವೆ.
ಗಿರಿಜಾಳನ್ನು ಕೊಂದಿರುವುದು ದೀಪಿಕಾ ಎಂಬ ಸತ್ಯ ಗೊತ್ತಾದ ದಿನ ಮನೆಯಲ್ಲಿ ಯುದ್ಧವೇ ನಡೆಯಬಹುದು. ಆ ವಿಡಿಯೋದಲ್ಲಿ ಇರುವುದು ಗೊತ್ತಿರುವ ವ್ಯಕ್ತಿ ಅಂತ ಸಂಗಮ್‌ಗೆ ಅನ್ನಿಸುತ್ತಿದೆ. ಆದರೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಅದರ ಹಿಂದೆ ಬಿದ್ದಿದ್ದಾನೆ. ಅದಕ್ಕೆ ಜಾಜಿ ಕೂಡ ಬೆಂಬಲ ಕೊಟ್ಟಿದ್ದಾಳೆ.

ಗಿರಿಜಾ ವಿಚಾರಕ್ಕಾಗಿ ನಾಟಕ
ಸಂಪಿಗೆಹಳ್ಳಿಯಿಂದ ಜಾಜಿಯನ್ನು ಸಂಗಮ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಾಜಿಯನ್ನು ಕಾಪಾಡುವುದು ಸಂಗಮ್ ಜವಾಬ್ದಾರಿ. ಅದಕ್ಕಾಗಿಯೇ ಮನೆಯಲ್ಲಿಯೇ ಇಟ್ಟುಕೊಂಡಿದ್ದಾನೆ. ಇದರ ನಡುವೆ ಸಂಗಮ್ ಹಾಗೂ ಜಾಜಿ ಇಬ್ಬರು ಸೇರಿ ನಾಟಕವಾಡುತ್ತಿದ್ದಾರೆ. ಗಿರಿಜಾಳನ್ನು ಕೊಂದವರು ಯಾರು ಎಂಬುದನ್ನು ಕಂಡು ಹಿಡಿಯುವುದಕ್ಕೆ ನಾಟಕವಾಡುತ್ತಿದ್ದಾರೆ. ಆರಂಭದಲ್ಲಿ ಜಾಜಿಯೇ ಗಿರಿಜಾ ಎಂದುಕೊಳ್ಳಲಾಗಿತ್ತು. ಆದರೆ ಈಗ ಜಾಜಿ ಬೇರೆ, ಗಿರಿಜಾ ನಿಜವಾಗಲೂ ಸತ್ತು ಹೋಗಿದ್ದಾಳಾ ಎಂಬ ಅನುಮಾನ ಮತ್ತೆ ನೋಡುಗರಿಗೆ ಶುರುವಾಗಿದೆ.
ಸಾಗರ್‌ನಿಂದ ಸತ್ಯ ಬಯಲು
ಸಂಗಮ್ ಹಾಗೂ ಗಿರಿಜಾಳ ಪ್ರೀತಿಗೆ ಒಂದು ಮಗು ಇದೆ. ಅವಳು ಲಚ್ಚಿ. ಗೋಪಾಲ ಅವಳನ್ನು ಸಂಗಮ್ ಬಳಿ ಒಪ್ಪಿಸಿ, ಸತ್ಯ ಹೇಳಬೇಕೆಂದುಕೊಂಡು ಬಂದಿದ್ದ. ಆದರೆ ಪರಿಸ್ಥಿತಿ ಏನೇನೋ ಆಗಿ ಗೋಪಾಲ ಪ್ರಜ್ಞೆ ಕಳೆದುಕೊಂಡ. ಆದರೆ ವಿಧಿ ಅಪ್ಪ-ಮಗಳನ್ನು ಒಂದು ಮಾಡಿದೆ. ಆದರೆ ಇದು ಲಚ್ಚುಗೆ ಮಾತ್ರ ಗೊತ್ತು. ಈಗ ಜಾಜಿಗೂ ಸತ್ಯ ಗೊತ್ತಾಗಿದೆ. ಗಿರಿಜಾ ಹಾಗೂ ಸಂಗಮ್ ಪ್ರೀತಿಗೆ ಒಬ್ಬ ಮಗಳಿದ್ದಾಳೆ ಎಂಬುದು. ಆದರೆ ಆ ಮಗಳು ಎಲ್ಲಿದ್ದಾಳೆ ಎಂಬುದು ಗಿರಿಜಾಳಿಗೂ ಗೊತ್ತಿಲ್ಲ. ಮಗಳಿದ್ದಾಳೆ ಎಂಬುದಷ್ಟೇ ಗೊತ್ತು. ಸಾಗರ್ ಕಡೆಯಿಂದ ಮಗಳು ಇದ್ದಾಳೆ ಎಂಬ ಸತ್ಯವಷ್ಟೇ ಗೊತ್ತಾಗಿದೆ.
ಮಗಳಿರುವ ವಿಚಾರ ತಿಳಿಯಿತು
ಜಾಜಿ, ಆಗಾಗ ಗಿರಿಜಾಳ ಅವತಾರವೆಂಬಂತೆ ಹಾಡುತ್ತಿದ್ದಾಳೆ. ಇದರಿಂದ ಸತ್ಯ ಬಾಯಿ ಬಿಡಿಸುವ ಕೆಲಸವಾಗುತ್ತಿದೆ. ಆಗಲೂ ಗಿರಿಜಾಳ ಹಳೇ ನೆನಪುಗಳು ಬಂದಂತೆ ಹಾಡಿದ್ದಾಳೆ. ಈ ಸಮಯದಲ್ಲಿಯೇ ಸಾಗರ್ ಕಡೆಯಿಂದ ಮಗಳಿರುವ ವಿಚಾರ ತಿಳಿದಿದೆ. ಈಗ ಸಂಗಮ್ ಬಳಿ ಜಾಜಿ ಅದೇ ವಿಚಾರವನ್ನು ತಿಳಿಸಿದ್ದಾಳೆ. ಅಂದು ಹಾಡಿದ್ದ ನಾಟಕ, ಆಗ ಸಾಗರ್ ಮಗಳ ವಿಚಾರ ಬಗ್ಗೆ ಹೇಳಿದ್ದು ಎಲ್ಲವನ್ನು ಹೇಳಿದ್ದಾಳೆ. ಇದನ್ನು ಕೇಳಿ ಸಂಗಮ್‌ಗೆ ಹಳೆಯ ನೆನಪುಗಳು ಕಾಡಿವೆ.

ಜಾಜಿಗೆ ಗೊತ್ತಾಗುತ್ತಾ ಮಗಳ ಸತ್ಯ..?
ಮೊದಲೇ ಸಂಗಮ್‌ಗೆ ಗಿರಿಜಾಳ ಸಾವು ಕಾಡುತ್ತಿದೆ. ಈಗ ಮಗಳಿರುವ ವಿಚಾರ ಮತ್ತಷ್ಟು ತಲೆ ಕೆಡಿಸುತ್ತಿದೆ. ಪ್ರೇಮಿಯ ಸಾವನ್ನು ಹುಡುಕುವುದೋ, ಮಗಳನ್ನು ಹುಡುಕುವುದೋ ತಿಳಿಯದೇ ಗೊಂದಲದಲ್ಲಿದ್ದಾನೆ. ಆಗ ಜಾಜಿಯೇ ಒಂದಷ್ಟು ವಿಚಾರಗಳನ್ಮು ತಿಳಿಸಿದ್ದಾಳೆ. ಶಾಂತಾಳ ಬಳಿಯೇ ಗಿರಿಜಾಳ ಎಲ್ಲಾ ವಸ್ತುಗಳು ಇರುವಾಗ, ಮಗಳು ಶಾಂತಾಳಿಗೆ ಗೊತ್ತಿರುತ್ತದೆ. ಹೀಗಾಗಿ ಅವಳನ್ನು ಕೇಳಿದರೆ ಖಂಡಿತಾ ಮಗಳ ವಿಚಾರ ತಿಳಿಯುತ್ತದೆ ಎಂದಿದ್ದಾಳೆ. ಈ ಮೂಲಕ ಸಂಗಮ್ ಈಗ ಮಗಳ ಹುಡುಕಾಟದ ಹಿಂದೆ ಬೀಳುತ್ತಾನೆ. ಹೀಗಾಗಿ ದೀಪಿಕಾಗೆ ಕೊಂಚ ಬ್ರೇಕ್ ಸಿಗಲಿದೆ.


Click it and Unblock the Notifications











