Neenadhe Naa: ಅಪ್ಪ-ಅಮ್ಮನ ಮುಂದೆ ನಾಟಕ ಮಾಡಿದರೂ, ವೇದಾ ಮುಂದೆ ವೆಂಕಿ ಆಟ ನಡೆಯಲ್ಲ!
ವೇದಾಳ ಮದುವೆ ತನ್ನಿಷ್ಟದಂತೆ ಆಗದೆ ಇದ್ದರು, ಗಂಡನ ಮನೆಗೆ ಯಾವತ್ತು ಕೆಡಕು ಬಯಸಿದವಳಲ್ಲ. ಗಂಡನ ಮನೆ ಸದಾ ನಗುತ್ತಾ ಇರಬೇಕು ಎಂದು ಹಾರೈಸುತ್ತಾಳೆ. ಅದಕ್ಕಾಗಿ ಶ್ರಮ ಹಾಕುತ್ತಾಳೆ. ಎಲ್ಲಿಯೂ ಗಂಡನ ಮನೆಯವರ ಮರ್ಯಾದೆಯನ್ನು ತೆಗೆಯುವ ಪ್ರಯತ್ನ ಮಾಡುವುದಿಲ್ಲ. ಬದಲಿಗೆ ಕಾಪಾಡುತ್ತಾಳೆ. ಅದಕ್ಕೆ ಅಲ್ಲವೆ ತವರು ಮನೆಯಿಂದ ತನ್ನ ಇಡೀ ಸಂಬಂಧವನ್ನು ಕಡಿದುಕೊಂಡು ಬಂದಿರುವುದು.
ಈಗಾಗಲೇ ರೌಡಿಯಂತೆ ಇದ್ದ ತನ್ನ ಗಂಡನನ್ನು ಬದಲಾಯಿಸಿದ್ದಾಳೆ. ಮನೆಯ ಜವಾಬ್ದಾರಿ ಬರುವಂತೆ ಮಾಡಿದ್ದಾಳೆ. ಪೂರ್ತಿ ಸರಿಯಾಗದೆ ಇದ್ದರು ಅಪ್ಪ-ಮಗನ ಸಂಬಂಧವನ್ನು ಸರಿ ಮಾಡುವ ಹಾದಿಯಲ್ಲಿ ಇದ್ದಾಳೆ. ಇದು ಒಳ್ಳೆ ಸೊಸೆಯ ಲಕ್ಷಣ. ಆದರೆ, ಇಬ್ಬರು ಒಳ್ಳೆ ಸೊಸೆಯಂದಿರ ನಡುವೆ ಹುಳಿ ಹಿಂಡುವುದಕ್ಕೆ ಅಂತ ಇರುವುದು ನಡುವಿನ ಸೊಸೆ ಶೈಲು.

ಅಣ್ಣನ ಮೇಲೆ ಕೇಡು ಬಯಸುವ ವೆಂಕಿ
ಮೇಷ್ಟ್ರಿಗೆ ಮೂರು ಜನ ಗಂಡು ಮಕ್ಕಳೇ ಆದರೂ ಒಬ್ಬನಿಗೆ ಮನೆಯ ಮೇಲೆ ಕಾಳಜಿಯೇ ಇಲ್ಲ. ಕಾಳಜಿ ಬೇಡ ತನ್ನವರ ಮೇಲೆಯೇ ಕೆಡುಕು ಬಯಸುವ ಬುದ್ದಿ ಅದು. ಸುಮಾರು ವರ್ಷದಿಂದ ಅಣ್ಣ ಕೆಲಸ ಕಾರ್ಯವಿಲ್ಲದೆ ಮನೆಯಲ್ಲಿ ಕೂತಿದ್ದಾನೆ. ಅದಕ್ಕೆ ಸಹಾಯ ಮಾಡುವ ನೆಪದಲ್ಲಿ ಅವನ ಜೀವನವನ್ನೇ ಹಾಳು ಮಾಡಲು ವೆಂಕಿ ಹುನ್ನಾರ ಹೂಡಿದ್ದ. ಅದು ತನ್ನ ಹೆಂಡತಿಯ ಮಾತನ್ನು ಕೇಳಿಕೊಂಡು.
ವೆಂಕಿ ಮಾಡಿದ ತಪ್ಪನ್ನು ಹೇಳಿದ ವಿಷ್ಣು
ವಿಷ್ಣುವಿಗೆ ಕೆಲಸ ಹೋಗಿದೆ ಎಂಬುದು ಗೊತ್ತು. ಸಂಕಷ್ಟದಲ್ಲಿ ಸಿಲುಕಿದ್ದಾನೆ ಅಂತಾನು ಗೊತ್ತು. ವೇದಾಳ ಅಣ್ಣ ಲೋಕೇಶ್ ಬಳಿ ಕೆಲಸಕ್ಕೆ ಹೋಗಿದ್ದು ಯಾಕೆ ಅನ್ನುವುದು ಮನೆಯವರೆಲ್ಲರ ಪ್ರಶ್ನೆಯಾಗಿತ್ತು ಎಂದು ಧೈರ್ಯವಾಗಿ ಮಾತನಾಡದ ವಿಷ್ಣು, ಇಂದು ಮನೆಯವರೆದುರು ಧೈರ್ಯವಾಗಿಯೇ ತನಗೆ ಆದ ಅನ್ಯಾಯಕ್ಕೆ ಕಾರಣ ಯಾರು ಎಂಬುದನ್ನು ಹೇಳಿದ್ದಾನೆ. ವೆಂಕಿಯೇ ಆ ಕೆಲಸ ಕೊಡಿಸಿದ್ದು. ವೆಂಕಿಗೆ ಆ ಲೋಕಿನೆ ಬಾಸ್ ಎಂಬುದು ಗೊತ್ತಿತ್ತು ಎಂಬ ಸತ್ಯವನ್ನು ಹೊರಹಾಕಿದ್ದಾನೆ.

ವಿಷ್ಣು ಮಾತಿಗೆ ಮಾತು ಜೋಡಿಸಿದ ಶೈಲೂ
ಈ ಸತ್ಯವನ್ನು ಕೇಳಿ ಮನೆಯವರೆಲ್ಲ ಒಂದು ಕ್ಷಣ ಆತಂಕಗೊಂಡಿದ್ದಾರೆ. ಅಣ್ಣನ ಜೀವನವನ್ನು ತಮ್ಮನೆ ಹಾಳು ಮಾಡುವಿದಕ್ಕೆ ನೋಡಿ ಬಿಟ್ಟನಾ ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ತಗಲಾಕಿಕೊಳ್ಳುತ್ತೀವಿ ಎಂಬ ಭಯ ಶೈಲೂ ಹಾಗೂ ವೆಂಕಿಯಲ್ಲಿ ಕಾಣಿಸಿಕೊಂಡಿದೆ. ಅದಕ್ಕೆ ಸತ್ಯ ಒಪ್ಪಿಕೊಂಡವರಂತೆ ನಾಟಕವಾಡಿದ್ದಾರೆ. ಕೆಲಸ ಕೊಡಿಸಿದ್ದು ನಾನೇ. ಆದರೆ ಮುಂಚೆ ಲೋಕಿನೆ ಬಾಸ್ ಅಂತ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಲೋಕಿಗೇನೆ ಕಾಲ್ ಮಾಡಿ, ವಿಚಾರಿಸಿದೆ. ಬೇರೆ ಯಾವ ಉದ್ದೇಶವೂ ಅಲ್ಲಿ ಇರಲಿಲ್ಲ ಎಂದು ಸತ್ಯ ಒಪ್ಪಿಕೊಂಡವನಂತೆ ಸುಳ್ಳು ಹೇಳಿದ್ದಾನೆ.
ವೇದಾ ಮುಂದೆ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯನಾ?
ವೇದಾ ಮನೆಯ ವಿಚಾರ ಅಂದರೆ ಯಾವಾಗಲೂ ನ್ಯಾಯದ ಪರವಾಗಿ ನಿಲ್ಲುತ್ತಾಳೆ. ಮನೆಗೆ ಅನ್ಯಾಯವಾಗುತ್ತಿದೆ ಎಂದರೆ ಅಂತವರನ್ನು ಸದೆ ಬಡಿಯುತ್ತಾಳೆ. ಶೈಲೂ ಎಂತ ಕೆಡುಕಿ ಎಂಬುದು ಗೊತ್ತೆ ಇದೆ. ಸತ್ಯ ಹೇಳಲ್ಲ ಎಂಬುದು ಗೊತ್ತಿದೆ. ಜೊತೆಗೆ ತನ್ನ ಅಣ್ಣನ ಸಂಸ್ಥೆಗೆ ಹೋಗಿ ಸತ್ಯ ತಿಳಿದುಕೊಂಡು ಬಂದಿದ್ದಾಳೆ. ಅಣ್ಣನಿಗೆ ಎಚ್ಚರಿಕೆಯನ್ನು ನೀಡಿದ್ದಾಳೆ. ಈಗ ಮನೆಯಲ್ಲಿ ವೆಂಕಿ ನಾಟಕದ ಮಾತುಗಳನ್ನು ಆಡುವಾಗ, ನಂಬುತ್ತಾಳಾ? ಅದರಲ್ಲೂ ವೇದಾಳನ್ನು ವೆಂಕಿ ಎದುರಿಸಲು ಸಾಧ್ಯವಾ? ವಿಷ್ಣು ಬಿಟ್ಟು ಕೊಡುವುದಕ್ಕೆ ವೇದಾ ಕೂಡ ರೆಡಿ ಇಲ್ಲ.


Click it and Unblock the Notifications











