Neenadhee Naa: ಕಲ್ಲಂತಿದ್ದ ವಿಕ್ರಂನನ್ನು ಕಲ್ಲೇಶಿಯಂತೆ ಬದಲಾಯಿಸಿದ ವೇದಾ.. ಮುಂದೇನು?

By ಎಸ್ ಸುಮಂತ್

ವಿಕ್ರಂ ಬದುಕಲ್ಲಿ ವೇದಾ ಬಂದ ಮೇಲೆ ಬದಲಾವಣೆಯ ಪರ್ವ ಶುರುವಾಗಿದೆ. ಕಲ್ಲಂತಿದ್ದ ವಿಕ್ರಂನನ್ನು ಕಲ್ಲೇಶಿಯಂತೆ ಬದಲಾಯಿಸಿದ್ದಾಳೆ. ಮಾತು ಎತ್ತಿದ್ರೆ ನಾಯಕರು ಎಂತಿದ್ದ ವಿಕ್ರಂ ಈಗ ನಾಯಕನ ಸಹವಾಸ ಬಿಟ್ಟು, ನಾಯಕನ ಹುಡುಗ ಎಂಬ ಹೆಸರನ್ನೇ ಬಿಟ್ಟು, ದುಡಿಯುವ ಮಾರ್ಗ ಹುಡುಕಿಕೊಂಡಿದ್ದಾನೆ. ಅದಕ್ಕೆಲ್ಲ ಕಾರಣ ವೇದಾ. ಮೊದ ಮೊದಲಿಗೆ ಕೋಳಿ ಜಗಳ ಮಾಡುತ್ತಿದ್ದ ಜೋಡಿ ಈಗ ಫ್ರೆಂಡ್ಸ್ ಆಗಿ ಬಿಟ್ಟಿದ್ದಾರೆ.

ವಿಕ್ರಂ-ವೇದಾಳದ್ದು ಅಂತಿಂಥ ಮದುವೆಯಲ್ಲ. ಇಬ್ಬರು ಒಬ್ಬರಿಗೊಬ್ಬರು ನೋಡಿಯೂ ಇಲ್ಲ. ಯಾರದ್ದೋ ಮದುವೆಯನ್ನ ವಿಕ್ರಂ ನಿಲ್ಲಿಸಲು ಹೋದಾಗ, ವೇದಾ ತಡೆದಿದ್ದೇ ತಡ. ದೇವಿ‌ ಕುತ್ತಿಗೆಯಲ್ಲಿದ್ದ ತಾಳಿಯನ್ನ ಕಿತ್ತು, ವೇದಾಳ ಕುತ್ತಿಗೆಗೆ ಕಟ್ಟಿಯೇ ಬಿಟ್ಟ ವಿಕ್ರಂ‌. ಈ ರೀತಿಯಾಗಿ ಇಡೀ ದೇವರ ಆಶೀರ್ವಾದ ಪಡೆದು ಆದ ಮದುವೆಯೇ ವಿಕ್ರಂ - ವೇದಾಳದ್ದು. ಮನೆಗೆ ಬಂದು ನೀನೆ ನನ್ನ ಗಂಡ ಎಂದು ಕುಳಿತಾಗಲೂ ವಿಕ್ರಂ ತಿರುಗಿಯೂ ನೋಡಿರಲಿಲ್ಲ. ಆದ್ರೆ ಈಗ ಎಲ್ಲವೂ ಹೆಂಡತಿಯೇ.

Neenadhe Naa, Star Suvarna Serial

ಕಡೆಗೂ ಕೆಲಸಕ್ಕೆ ಸೇರಿದ ವಿಕ್ರಂ

ವಿಕ್ರಂ ಈಗ ನಿಯತ್ತಾಗಿ ದುಡಿಯಲೇಬೇಕಾದ ಅನುವಾರ್ಯತೆ ಇದೆ. ಯಾಕಂದ್ರೆ ಅಪ್ಪ - ಅಮ್ಮ ವಿಕ್ರಂನನ್ನು ಮಗ ಎಂದು ಒಪ್ಪಿಕೊಳ್ಳಬೇಕಾದರೆ, ಮಗನಿಂದ ಸಹಾಯ ಪಡೆಯಬೇಕಾದರೆ ವಿಕ್ರಂ ದುಡಿಮೆ ನಿಯತ್ತಾಗಿರಬೇಕಾಗಿದೆ. ಹೀಗಾಗಿ ವೇದಾಳ ಮಾತನ್ನು ವಿಕ್ರಂ ಸಂಪೂರ್ಣವಾಗಿ ನಂಬಿದ್ದಾನೆ. ಹೇಗಾದರೂ ಮಾಡಿ ಅಪ್ಪ ಅಮ್ಮನ ಪ್ರೀತಿ ಪಡೆಯಬೇಕು ಎಂದು ಕೆಲಸಕ್ಕೆ ಅಲೆದಿದ್ದಾನೆ. ಆದರೆ ಕೆಲಸ‌ ಸಿಕ್ಕಿಲ್ಲ. ಕಡೆಯದಾಗಿ ಅಂಕಲ್ ಸಹಾಯ ಪಡೆದಿದ್ದಾನೆ. ಅಂಕಲ್ ಸಹಾಯದಿಂದ ಒಂದು‌ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ವೆಲ್ಡಿಂಗ್ ಕೆಲಸ ಮಾಡುವ ವಿಕ್ರಂ

ವಿಕ್ರಂ ರಾಜಾರೋಷವಾಗಿ ಓಡಾಡಿಕೊಂಡಿದ್ದವ. ಬೇಕು ಎಂದರೆ ಲಕ್ಷಾಂತರ ರೂಪಾಯಿ ಹಣ ಅವನ ಮುಂದೆ ಬಂದು ಬೀಳುತ್ತೆ. ಅದಕ್ಕೆ ಆತ ತಲೆ ಕೆಡಿಸಿಕೊಳ್ಳುವಂತೆ ಇಲ್ಲ. ಆದರೆ, ಆ ಹಣದಿಂದ ಅದೆಷ್ಟು ಜನರ ಕಣ್ಣೀರು ಇರುತ್ತೋ ಗೊತ್ತಿಲ್ಲ. ಹೀಗಾಗಿಯೇ ಅವರ ಅಪ್ಪ ಆ ಹಣವನ್ನು ಮುಟ್ಟುತ್ತಿರಲಿಲ್ಲ. ಆದರೆ, ಅಪ್ಪ ಅಮ್ಮ ಇಷ್ಟಪಟ್ಟಂತೆ ಬದುಕಲು ನಿರ್ಧರಿಸಿದ ವಿಕ್ರಂ, ವೆಲ್ಡಿಂಗ್ ಮೆಷಿನ್ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕೈಯೆಲ್ಲಾ ಬೊಬ್ಬೆ ಬಂದರೂ ನಿಯತ್ತಿಂದ ಕೆಲಸ ಮಾಡಿದ್ದಾನೆ.

Neenadhe Naa, Star Suvarna Serial

ಹೆಸರು ಬದಲಾಯಿಸಿಕೊಂಡ ವಿಕ್ರಂ

ವಿಕ್ರಂ ಹೆಸರು ಕೇಳಿದರೇನೆ ಜನ ಗಾಬರಿಯಾಗುತ್ತಾರೆ. ನಾಯಕರ ಹುಡುಗ, ರೌಡಿಸಂ ಅಂತೆಲ್ಲಾ ಮಾತಾಡಿಕೊಳ್ಳುತ್ತಾರೆ. ವಿಕ್ರಂ ಬಂದ್ರೆ ಸಾಕು ವಸೂಲಿಗೆ ಬಂದಿದ್ದಾನೆ ಎಂದುಕೊಳ್ಳುತ್ತಾರೆ. ಮುಖ ತೋರಿಸಿದರಂತು ಯಾರೂ ಕೆಲಸ ಕೊಡುವುದಿಲ್ಲ. ನಿಮಗೆ ನಾವೂ ಕೆಲಸ ಕೊಡುವುದಾ ಎಂದೇ ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿಯೇ ಈಗ ವಿಕ್ರಂ ಮುಖ ಮುಚ್ಚಿಕೊಂಡು ಕೆಲಸಕ್ಕೆ ಸೇರಿದ್ದಾನೆ. ಅಂಕಲ್ ಹೆಸರು ಹೇಳಿ ಕಲ್ಲೇಶಿಯಾಗಿ ಸೇರಿಕೊಂಡಿದ್ದಾನೆ.

ಸಾವಿರ ರೂಪಾಯಿ ನೋಡಿ ಸಂತಸ

ವಿಕ್ರಂ ನಿಯತ್ತಾಗಿ ಕೆಲಸ ಮಾಡಿದ್ದಾನೆ. ಊಟದ ಸಮಯದಲ್ಲೂ ಎಲ್ಲಿಯೂ ಹೋಗಿಲ್ಲ. ಸುಮ್ಮನೆ ಕೂತು ಕೆಲಸ ಮಾಡಿದ್ದಾನೆ. ವಿಕ್ರಂ ಕೆಲಸ ಮಾಲೀಕರಿಗೆ ಇಷ್ಟವಾಗಿದೆ. ವಿಕ್ರಂ ಇಷ್ಟು ದಿನ ಯಾರ ಮುಂದೆಯೂ ಕೂಲಿಗಾಗಿ ಕೈ ಒಡ್ಡಿದವನೇ ಅಲ್ಲ. ಆದರೆ, ಇಂದು ಮಾಡಿದ ಕೆಲಸಕ್ಕೆ ಕೂಲಿಗಾಗಿ ಕೈ ಒಡ್ಡಿದ್ದಾನೆ. ಕೆಲಸ‌ ಮೆಚ್ಚಿ ಮಾಲೀಕ ಒಂದು ಸಾವಿರ ಹಣ ನೀಡಿದ್ದಾನೆ. ಲಕ್ಷಾಂತರ ರೂಪಾಯಿ ಎಣಿಸುತ್ತಿದ್ದ ಕೈಯಲ್ಲಿ ಕಷ್ಟಪಟ್ಟು ದುಡಿದ 1 ಸಾವಿರ ದೊಡ್ಡ ಮೊತ್ತವಾಗಿ ಕಂಡಿದೆ. ಇದನ್ನು ವೇದಾಗೆ ಕೊಡುತ್ತಾನಾ?

More from Filmibeat

English summary
Kannada Serial Neenadhee Naa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X