Neenadhena: ವೇದಾ-ವಿಕ್ರಮ್ ಹಿಂಗೆ ನಗುತ್ತಾ ಇದ್ರೇನೆ TRP ಅಂತೆ..!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ನೀನಾದೆನಾ ಧಾರಾವಾಹಿ ಎಲ್ಲರ ಅಚ್ಚುಮೆಚ್ಚು ಅಂತಾನೇ ಹೇಳಬಹುದು. ವಿದೇಶದಲ್ಲಿ ಓದಿದ್ದ ವೇದಾಗೆ ಶಾಸ್ತ್ರ, ಸಂಪ್ರದಾಯಗಳ ಮೇಲೆ ಗೌರವ ಜಾಸ್ತಿ. ಹಾಗಾಗಿಯೇ ವಿಕ್ರಮ್ ಅನ್ಯಾಯದಿಂದ ತಾಳಿ ಕಟ್ಟಿದರು, ಅವನೇ ಗಂಡ ಎಂಬುದಾಗಿ ಒಪ್ಪಿಕೊಂಡು, ಎಷ್ಟೇ ಕಷ್ವವಾದರೂ ವೇದಾ ಸಹಿಸಿಕೊಳ್ಳುತ್ತಿದ್ದಾಳೆ.

ಈಗ ವೇದಾ-ವಿಕ್ರಂ ಇಬ್ಬರು ಮನೆಯಿಂದ ಹೊರಗೆ ಇದ್ದಾರೆ. ಆದರೆ ಇಬ್ಬರ ನಡುವೆ ಪ್ರೀತಿ ಬೆಸೆಯುವುದಕ್ಕೆ ಇದೇ ಕಾರಣವಾಗಿದೆ. ಇಬ್ಬರು ಹೆಚ್ಚಿನ ಆತ್ಮೀಯರಾಗುತ್ತಿದ್ದಾರೆ. ವಿಕ್ರಮ್, ವೇದಾಳನ್ನು ಕಾಳಜಿ ಮಾಡುವುದಕ್ಕೆ ಶುರು ಮಾಡಿದ್ದಾನೆ. ಸಣ್ಣ ಸಣ್ಣ ವಿಚಾರದಲ್ಲಿಯೇ ಖುಷಿ ಕೊಡುತ್ತಿದ್ದಾನೆ. ಪ್ರೇಕ್ಷಕರಿಗೂ ಇದು ಸಿಕ್ಕಾಪಟ್ಟೆ ಇಷ್ಟವಾಗುತ್ತಿದೆ.

Star suvarna serial Neenadhena Written Update on February 20th episode

ದೇವಸ್ಥಾನದಲ್ಲಿ ವೇದಾ-ವಿಕ್ರಮ್

ವಿಕ್ರಮ್ ಮತ್ತು ವೇದಾಳನ್ನು ಒಂದು ಮಾಡಿದ್ದೇ ದೇವರ ತಾಳಿ. ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದ ವೇದಾಳಿಗೆ ವಿಕ್ರಂ ಹೇಳದೆ ಕೇಳದೆ ತಾಳಿ ಕಟ್ಟಿಯೇ ಬಿಟ್ಟಿದ್ದ. ಅದಾದ ಮೇಲೆ ವೇದಾ ಸಾಕಷ್ಟು ಸಹಿಸಿಕೊಂಡಿದ್ದಾಳೆ. ವಿಕ್ರಂನನ್ನು ಬದಲಾಯಿಸುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ. ಈಗಲೂ ಸಂಕಷ್ಟವೇನೂ ಕಡಿಮೆಯಾಗಿಲ್ಲ. ಇದೀಗ ಮತ್ತೆ ಗಂಡ-ಹೆಂಡತಿ ಇಬ್ಬರು ಮನೆಯಿಂದ ಹೊರಗೆ ಬಿದ್ದಿದ್ದಾರೆ. ಈ ಸಮಯವನ್ನು ಅದ್ಭುತವಾಗಿ ಕಳೆಯುತ್ತಿದ್ದಾರೆ. ಅದರಲ್ಲೂ ದೇವಸ್ಥಾನಗಳಿಗೆ ದಂಪತಿ ಸಮೇತ ಮೊದಲ ಬಾರಿಗೆ ಹೋಗಿದ್ದಾರೆ. ಈ ವೇಳೆ ವಿಕ್ರಂ ಕಟ್ಟಿದ ತಾಳಿಗೂ ಪೂಜೆ ಮಾಡಿಸಿದ್ದಾಳೆ. ದೇವರಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದಿದ್ದಾರೆ.

ವೇದಾಳನ್ನು ಸುತ್ತಾಡಿಸುತ್ತಿರುವ ವಿಕ್ರಮ್

ದೇವಸ್ಥಾನದಲ್ಲಿ ಪೂಜೆ ಮುಗಿದ ಬಳಿಕ ವೇದಾ-ವಿಕ್ರಂ ಊರು ಸುತ್ತುವುದಕ್ಕೆ ಹೊರಟಿದ್ದಾರೆ. ವೇದಾಳಿಗೆ ಇದು ಒಂದು ಅದ್ಭುತ ಜಗತ್ತಿನಂತೆಯೇ ಕಾಣಿಸುತ್ತಿದೆ. ಕಾರಣ ಒರಟು ಒರಟಾಗಿದ್ದ ವಿಕ್ರಂ ಈ ರೀತಿ ಬದಲಾಗಿದ್ದಾನಾ ಎಂಬ ಅನುಮಾನ ಶುರುವಾಗಿದೆ. ಗುಂಡ ಎಂದು ಗಂಡನನ್ನು ಪ್ರೀತಿಯಿಂದ ಕರೆಯುತ್ತಾಳೆ. ಹೊರಗೆ ಸುತ್ತಾಡಿಸುತ್ತಿದ್ದ ವಿಕ್ರಂನನ್ನು ಕಂಡ ವೇದಾ, ಗುಂಡ ಇದು ನಿಜಕ್ಕೂ ನೀನೆನಾ ಎಂದು ಪ್ರಶ್ನಿಸಿದ್ದಾಳೆ.

Star suvarna serial Neenadhena Written Update on February 20th episode

ಟೀ ತೋರಿಸಿ ಹೆದರಿಸಿದ ವೇದಾ

ವಿಕ್ರಮ್ ಅಪ್ಪನ ಮುದ್ದಿನ ಮಗನಾಗಿದ್ದ. ಜಗನ್ನಾಥ್ ಶಿಕ್ಷಕರಾಗಿದ್ದು, ಮಗನು ಕೂಡ ಅಪ್ಪನಿಗೆ ತಕ್ಕ ಮಗನಾಗಿದ್ದ. ಇಂಜಿನಿಯರಿಂಗ್ ಓದುವ ತನಕವೂ ಉತ್ತಮ ವಿದ್ಯಾರ್ಥಿಯಾಗಿದ್ದ. ಆದರೆ ಅದ್ಯಾಕೋ ಏನೋ ರೌಡಿಸಂ ಕಡೆಗೆ ಹೋಗಿಬಿಟ್ಟ. ಅದಕ್ಕೊಂದು ಕಾರಣವಿದೆ. ಆದರೆ ಆ ಕಾರಣ ಇನ್ನೂ ಕೂಡ ರಿವೀಲ್ ಆಗಿಲ್ಲಮ ಒರಟ ಅಂದರೆ ಒರಟ. ಈ ಒರಟನನ್ನು ನೋಡಿದರೆ ಎಲ್ಲರೂ ಭಯ ಪಡುತ್ತಾರೆ. ಆದರೆ ವೇದಾ ಡೋಂಟ್ ಕೇರ್. ಅಷ್ಟು ದೊಡ್ಡ ರೌಡಿ ವಿಕ್ರಮ್ ನನ್ನು ಹೆದರಿಸಲು ವೇದಾಗೆ ಜಸ್ಟ್ ಒಂದು ಟೀ ಸಾಕು. ಈಗಲೂ ಹೊರಗೆ ಬಂದಿದ್ದಾರೆ. ಇಬ್ಬರು ಓಡಾಡುತ್ತಿದ್ದಾರೆ. ವೇದಾಗೆ ವಿಕ್ರಮ್ ಟೀ ಕೊಡಿಸಿದ್ದಾನೆ. ಆಗ ವೇದಾ ಹಳೆಯದ್ದನ್ನು ನೆನಪಿಸಿದ್ದಾಳೆ. ಬಿಸಿ ಬಿಸಿ ಟೀಯನ್ನು ಕಾಲಿಗೆ ಎರಚಿದ್ದಳು.

ವೇದಾ-ವಿಕ್ರಂ ಪ್ರೀತಿಗೆ ನೋಡುಗರು ಖುಷಿ

ವೇದಾ-ವಿಕ್ರಂ ಮದುವೆಯಾದಾಗಿನಿಂದ ಇಬ್ಬರು ಕಿತ್ತಾಡುವುದೇ ಆಗಿತ್ತು. ಮದುವೆಯಾದಾಗಿನಿಂದ ಇಬ್ಬರ ನಡುವೆ ಪ್ರೀತಿಯೇ ಇಲ್ಲದೆ ಇದ್ದರು, ವೇದಾ ತಾಳಿ ಕಟ್ಟಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ವಿಕ್ರಂ ರೇಗಿದರೂ ವೇದಾ ಸಹಿಸಿಕೊಳ್ಳುತ್ತಾಳೆ. ಆದರೆ ಈಗ ಇಬ್ಬರು ಮನೆಯಿಂದ ಹೊರಗೆ ಬಂದ ಮೇಲೆ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಇಬ್ಬರು ಲವ್ ಬರ್ಡ್ಸ್ ರೀತಿ ನಡೆದುಕೊಳ್ಳುತ್ತಿರುವುದಕ್ಕೆ ನೋಡಿಗರು ಫುಲ್ ಖುಷಿ ಪಡುತ್ತಿದ್ದಾರೆ. ಇದೇ ರೀತಿ ಇದ್ದರೆ ನಾವೂ ಹೆಚ್ಚೆಚ್ಚು ಧಾರಾವಾಹಿ ನೋಡುತ್ತೀವಿ, ಟಿ ಆರ್ ಪಿ ಬರುತ್ತೆ ಎಂದಿದ್ದಾರೆ.

More from Filmibeat

English summary
Neenadhena serial today episode. Here is the details about Vikram Veda is walking around like love birds;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X