Bettada Hoo Serial: ರಿಯಲ್ ಲೈಫ್‌ನಲ್ಲಿ ಹೂವಿ ನಿಮ್ಮ ಎದುರಿಗೆ ಬಂದೆ ನಿಮಗೆ ಖಂಡಿತಾ ಗುರುತು ಸಿಗಲ್ಲ..!

By ಎಸ್ ಸುಮಂತ್

'ಬೆಟ್ಟದ ಹೂ' ಧಾರಾವಾಹಿಯ ಹೂವಿ ಬಗ್ಗೆ ನಿಮಗೆಲ್ಲಾ ಈಗಾಗಲೇ ಪರಿಚಯವಾಗಿದೆ. ಮುಗ್ಧ ಮನಸ್ಸಿನ, ನೋವೆಲ್ಲಾ ನುಂಗಿಕೊಂಡು, ಪಟ ಪಟ ಅಂತ ಮಾತಾಡುವ ಹುಡುಗಿ. ಯಾವಾಗಲೂ ಲಂಗ ಧಾವಣಿ ಹಾಕಿ, ಕತ್ತಿಗೊಂದು ಕಪ್ಪು ದಾರಾ ಕಟ್ಟಿಕೊಂಡು, ಬೈತಲೆ ತೆಗೆದು, ಮಾರುದ್ಧ ಜಡೆ ಹೆಣೆದಿರುವ ಹುಡುಗಿ. ಆ ರೂಪ ಕಣ್ಣಲ್ಲಿ ಕಟ್ಟಿದಂತೆ ಆಗದೆ. ಇಷ್ಟೆಲ್ಲಾ ಯಾಕೆ ಹೇಳುತ್ತಾ ಇದ್ದೇವೆ ಅನ್ನೋದು ನಿಮಗೆ ಟೈಟಲ್ ನೋಡಿದಾಗ ಗೊತ್ತಾಗುತ್ತೆ. ಈಗ ಮತ್ತೆ ಹೂವಿಯ ರೂಪ ಕಣ್ಣು ಮುಂದೆ ಬಂದಿರುತ್ತೆ. ಆದರೆ ಇಷ್ಟೆಲ್ಲಾ ಇಷ್ಟ ಪಡುವ ಹೂವಿ ನಿಮ್ಮ ಪಕ್ಕದಲ್ಲೇ ಬಂದರೂ ಖಂಡಿತ ನೀವೂ ಕೂಡ ಗುರುತು ಹಿಡಿಯೋದಕ್ಕೆ ಸಾಧ್ಯವಿಲ್ಲ.

Recommended Video

Beast ಚಿತ್ರಕ್ಕೆ ಎದುರಾಯ್ತು ದೊಡ್ಡ ಸಂಕಷ್ಟ | Vijay Beast | Pooja Hegde

ಏನಪ್ಪಾ ಹೀಗೆಲ್ಲಾ ಹೇಳುತ್ತಾ ಇದ್ದಾರೆ. ನಟ-ನಟಿಯರನ್ನು ತೆರೆ ಮೇಲೆ ನೋಡಿ, ಎದುರುಗಡೆ ಬಂದಾಗ ಅದೆಷ್ಟು ಸೆಲೆಬ್ರೆಟಿಗಳನ್ನು ಗುರುತು ಹಿಡಿದಿಲ್ಲ ಎಂಬುದನ್ನು ನೀವೂ ವಾದ ಮಾಡಬಹುದು. ಆದರೆ ಹೂವಿ ವಿಚಾರದಲ್ಲಿ ಅದು ಸುಳ್ಳಾಗಲೂ ಬಹುದು. ಹೀಗೆ ಹೂವಿ ಸೋಶಿಯಲ್ ಮೀಡಿಯಾಗೆ ಒಮ್ಮೆ ವಿಸಿಟ್ ಕೊಟ್ಟು ನೋಡಿ. ಆಗ ನಿಮಗೂ ಈ ಅನುಮಾನ ಕಾಡದೆ ಇರಲು ಸಾಧ್ಯವಿಲ್ಲ ಅನ್ನೋದು ಕನ್ಫರ್ಮ್ ಆಗುತ್ತೆ. ಹೂವಿ ಪಾತ್ರದ ಫೋಟೊಗೂ ಹೂವಿಯ ರಿಯಲ್ ಫೋಟೊಗೂ ಹೊಂದಾಣಿಕೆ ಮಾಡಿ ಸಾಕಷ್ಟು ಸಲ ನೋಡಿರ್ತೀರಿ.

ಹೂವಿ ರಿಯಲ್ ಹೆಸರೇನು?

ಹೂವಿ ರಿಯಲ್ ಹೆಸರೇನು?

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ 'ಬೆಟ್ಟದ ಹೂ' ಕೂಡ ಎಲ್ಲರ ಮನಸ್ಸು ಗೆದ್ದಿರುವ ಧಾರಾವಾಹಿ. ಅದರಲ್ಲಿ ಹೂವಿಯ ಪಾತ್ರ ಸಾಕಷ್ಟು ಜನರನ್ನು ಅಟ್ರ್ಯಾಕ್ಟ್ ಮಾಡಿದೆ. ಹೂವಿಯ ಮುಂದಿನ ನಡೆಯೇನು, ಗಂಡ ಇನ್ನೊಬ್ಬಳ ಜೊತೆ ಸಂಸಾರ ಮಾಡುವುದನ್ನು ಹೇಗೆ ಸಹಿಸಿಕೊಳ್ಳುತ್ತಾಳೆ. ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕತ್ತಲೆ ಆ ಧಾರಾವಾಹಿ ಪ್ರಿಯರಾಗಿದ್ದಾರೆ. ಇಷ್ಟೆಲ್ಲಾ ಇಷ್ಟಪಡುವ ಹೂವಿಯ ನಿಜವಾದ ಹೆಸರು ಶ್ರೀವಿದ್ಯಾ ಶಾಸ್ತ್ರಿ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆಕ್ಟೀವ್ ಆಗಿದ್ದಾರೆ.

ಹೂವಿ ಹಿನ್ನೆಲೆ ಏನು..?

ಹೂವಿ ಹಿನ್ನೆಲೆ ಏನು..?

ಹೂವಿ ಅಲಿಯಾಸ್ ಶ್ರೀವಿದ್ಯಾ ಮೂಲತಃ ಶೃಂಗೇರಿಯವರು. ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ. ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀವಿದ್ಯಾ, ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಶ್ರೀವಿದ್ಯಾಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಶೃಂಗೇರಿಯಾದರೂ ಪಕ್ಕಾ ಹಳ್ಳಿ ಹುಡುಗಿಯಂತೆ ಅಭಿನಯಿಸುತ್ತಾರೆ. ಅವರ ಮುಗ್ಧ ಅಭಿನಯಕ್ಕೆ ಸಾಕಷ್ಟು ಜನ ಬೋಲ್ಡ್ ಆಗಿರುವುದಂತು ಸುಳ್ಳಲ್ಲ.

ಶಂಕರ್ ಅಶ್ವಥ್ ಪಿಜಿಯಲ್ಲಿ ಇದ್ರು ಹೂವಿ

ಶಂಕರ್ ಅಶ್ವಥ್ ಪಿಜಿಯಲ್ಲಿ ಇದ್ರು ಹೂವಿ

ಶಂಕರ್ ಅಶ್ವಥ್ ಕೂಡ ಹೂವಿ ಬಗ್ಗೆ ಹೊಗಳಿಕೆಯ ಮಾತನ್ನು ಹಾಡಿದ್ದಾರೆ. ಮೈಸೂರಿನಲ್ಲಿ ಶಂಕರ್ ಅಶ್ವಥ್ ನಡೆಸುತ್ತಿರುವ ಪಿಜಿಯಲ್ಲೇ ಶ್ರೀವಿದ್ಯಾ ಸ್ಟೇ ಆಗಿದ್ದರು. ಅಂದಿನ ದಿನಗಳನ್ನು ನೆನೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. "ನಮ್ಮ ಮನೆಯಲ್ಲಿ ಮೊಗ್ಗಾಗಿದ್ದ ಹೂ ಇಂದು ಬೆಟ್ಟದ ಹೂ ಆಗಿ ಅರಳಿತು!!. ನಾನು ಹೆಣ್ಣು ಮಗುವಿನ ತಂದೆ ಆಗಬೇಕೆಂಬ ಆಸೆಯನ್ನು ಭಗವಂತ ನನ್ನ ಮಡದಿ ಪಿ ಜಿ ಮಾಡಿದ ಮೂಲಕ ಈಡೇರಿಸುತ್ತಿದ್ದಾನೆ. ನಮ್ಮ ಪಿಜಿಗೆ ಯಾವುದೇ ಹೆಣ್ಣು ಮಕ್ಕಳು ಬಂದರೂ ನಾನು ನನ್ನ ಹೆಂಡತಿ ಮಕ್ಕಳಂತೆ ಕಾಣಲು ಇಚ್ಚಿಸುತ್ತೇವೆ. ಎರಡು ವರ್ಷಗಳ ಹಿಂದೆ ಈ ಹೆಣ್ಣುಮಗಳು ವ್ಯಾಸಂಗಕ್ಕೆ ಶೃಂಗೇರಿಯಿಂದ ಮೈಸೂರಿಗೆ ಬಂದು ನಮ್ಮೊಡನೆ ಮಗಳಂತೆಯೇ ಇದ್ದು ,ಹೆಸರಿಗೆ ತಕ್ಕಂತೆ ಶ್ರೀವಿದ್ಯಾ ಆದಳು. ಈಗ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಬೆಟ್ಟದ ಹೂ" ಧಾರಾವಾಹಿಯಲ್ಲಿ ನಮ್ಮ ಶ್ರೀವಿದ್ಯಾ ಹೂವಿಯೆಂಬ ಮುಖ್ಯ ಪಾತ್ರವಹಿಸಿ ಎಲ್ಲರ ಮನ ಗೆಲ್ಲುತ್ತಿದ್ದಾಳೆ. ಈ ಹೂ ಬೆಟ್ಟದಷ್ಟು ಬೃಹದಾಕಾರವಾಗಿ ಬೆಳೆಯಲೆಂದು ಆಶಿಸುತ್ತೇನೆ. ಈ ಹೆಣ್ಣು ಮಗುವಿಗೆ ನಿಮ್ಮೆಲ್ಲರ ಆಶೀರ್ವಾದಗಳಿರಲ್ಲಿ" ಎಂದು ಹಾರೈಸಿದ್ದಾರೆ.

ತರಕಾರಿ ಬೆಳೆಯೋದು ಅಂದ್ರೆ ಇಷ್ಟ

ತರಕಾರಿ ಬೆಳೆಯೋದು ಅಂದ್ರೆ ಇಷ್ಟ

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸಗಳಿರುತ್ತವೆ. ಆ ವಿಚಾರದಲ್ಲಿ ಶ್ರೀವಿದ್ಯಾಗೆ ಗಾರ್ಡೆನಿಂಗ್ ಅಂದ್ರೆ ಪಂಚಪ್ರಾಣ. ಮನೆಯಲ್ಲೇ ತರಕಾರಿ ಬೆಳೆಯೋದು ಇಷ್ಟ. ಅದಕ್ಕಾಗಿಯೇ ಬೀನ್ಸ್ ಬೆಳೆಯೋ ರೀತಿಯನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೃಷ್ಣಪ್ರಿಯೆ ಆಗಿರುವ ಕಾರಣ ತುಳಸಿ ಗಿಡವನ್ನು ಸಂಪಾಗಿ ಬೆಳೆಸಿದ್ದಾರೆ. ಸದ್ಯ ಹೂವಿಯಾಗಿ ಎಲ್ಲರ ಮನ ಕದ್ದಿರೋ ಶ್ರೀವಿದ್ಯಾ ಬಗ್ಗೆ ಇನ್ನಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಮುಂದೆ ಸಿಗಲಿವೆ.

More from Filmibeat

English summary
Star Suvarna Serial Sathya Written Update on Hoovi Life story. Here is the details about Hovie Artist Sri Vidhya Real Life
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X