Namma Lacchi: 'ನಮ್ಮ ಲಚ್ಚಿ'ಗೆ 100ರ ಸಂಭ್ರಮ.. ಗುರುವಿನ ಕಣ್ಣೀರಿಗೆ ಕರಗುತ್ತಾಳಾ ಲಚ್ಚಿ?

By ಎಸ್ ಸುಮಂತ್

ರಿಯಾ ಈಗ ಅದ್ಭುತ ಗಾಯಕಿ ಎಂದೇ ಖ್ಯಾತಿ ಪಡೆಯುತ್ತಿದ್ದಾಳೆ. ಮ್ಯೂಸಿಕ್ ಕಂಪನಿಯವರು ಕೂಡ ರಿಯಾಳ ಮನೆ ಬಾಗಿಲಿಗೆ ಬರುತ್ತಿದ್ದಾರೆ. ರಿಯಾಳನ್ನು ದೊಡ್ಡ ಸಿಂಗರ್ ಮಾಡುತ್ತೀನಿ ಎಂದು ಹೇಳಿದ್ದಾರೆ. ದೀಪಿಕಾಗೆ ಬೇಕಾಗಿದ್ದದ್ದು ಅದೇ. ಮಗಳು ಸಿಂಗರ್ ಆಗಬೇಕೆಂಬ ಆಸೆ ಈಗ ಈಡೇರುತ್ತಿದೆ. ಆದರೆ ಸಂಗಮ್ ಸತ್ಯಾಂಶವನ್ನು ಬಾಯಿ ಬಿಡಿಸಿದ್ದಾನೆ.

ದೀಪಿಕಾ ಯಾರದ್ದೋ ವಾಯ್ಸ್ ಇಟ್ಟುಕೊಂಡು ರಿಯಾಳನ್ನು ಫೇಮಸ್ ಮಾಡುತ್ತಿದ್ದಾಳೆ ಎಂಬುದು ಸಂಗಮ್‌ಗೆ ಗೊತ್ತಾದ ಮೇಲೆ ದೀಪಿಕಾಳ ಹಿಂದೆ ಬೀಳುವುದಕ್ಕೆ ಶುರು ಮಾಡಿದ. ಅದಕ್ಕೆ ತಕ್ಕ ಹಾಗೇ ದೀಪಿಕಾ ತಗಲಾಕಿಕೊಳ್ಳುತ್ತಾ ಹೋದಳು. ಈಗ ಹಲವು ಸಾಕ್ಷಿಗಳಿಂದ ದೀಪಿಕಾಳ ಸತ್ಯ ಬಯಲಾಗಿದೆ. ಲಚ್ಚಿಯ ಟ್ಯಾಲೆಂಟ್ ಗೊತ್ತಾಗಿದೆ.

Star Suvarna serial Vijay Surya Namma Lacchi Completed 100th Episode

100ರ ಸಂಭ್ರಮದಲ್ಲಿ ನಮ್ಮ ಲಚ್ಚಿ

ಒಂದು ಧಾರಾವಾಹಿ ಜನರ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ನಮ್ಮ ಲಚ್ಚಿ ಧಾರಾವಾಹಿ ಎಲ್ಲರ ಮನಸ್ಸನ್ನು ಗೆದ್ದಿದೆ. ಯಾಕಂದ್ರೆ, ಆ ಕಥೆಯಲ್ಲಿ ಅಷ್ಟೊಂದು ಗಟ್ಟಿತನವಿದೆ. ಇದೇ ಧಾರಾವಾಹಿಯಿಂದ ವಿಜಯ್ ಸೂರ್ಯ ಕಮ್ ಬ್ಯಾಕ್ ಆಗಿದ್ದಾರೆ. ನೇಹಾ ಗೌಡ ಕೂಡ ಕಮ್ ಬ್ಯಾಕ್ ಆಗಿದ್ದಾರೆ. ನೇಹಾ ಗೌಡ ಹಾಗೂ ವಿಜಯ್ ಸೂರ್ಯ ಪ್ರೀತಿ ಜೊತೆಗೆ ಅವರ ಮುದ್ದು ಮಗಳ ಮೇಲೆಯೇ ಕಥೆ ಸಾಗುವುದು. ಹಳ್ಳಿಯಿಂದ ಕಥೆ ಸಂಗಮ್ ಮನೆಗೆ ಶಿಫ್ಟ್ ಆಗಿದೆ. ಇತ್ತೀಚೆಗೆ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕುತ್ತಿದೆ.

ಲಚ್ಚಿಯೇ ಹೈಲೈಟ್

ಲಚ್ಚಿಗೆ ಅಪ್ಪ ಕಣ್ಣ ಮುಂದೆ ಇದ್ದರೂ ಕಾಣುತ್ತಿಲ್ಲ. ಅಪ್ಪ ಎಂದರೆ ಆಕಾಶದೆತ್ತರಕ್ಕೆ ಪ್ರೀತಿ ಮಾಡ್ತಾಳೆ. ಸಂಗಮ್‌ನನ್ನು ಅಪ್ಪನ ಸ್ಥಾನದಲ್ಲಿಯೇ ಇಟ್ಟು ಪೂಜಿಸುತ್ತಾಳೆ. ಆದರೆ ಅದೇ ಸಂಗಮ್ ತನ್ನ ಅಪ್ಪ ಎಂಬುದು ಮಾತ್ರ ಅವಳಿಗೆ ಅರಿವಿಲ್ಲ. ಸಿಕ್ಕಷ್ಟರಲ್ಲೇ ಖುಷಿ ಪಡ್ತಾಳೆ. ಬಯಸಿದ್ದು ಸಿಗದೆ ಹೋದರೂ ಬೇಸರ ಮಾಡಿಕೊಳ್ಳಲ್ಲ. ಚಿಕ್ಕ ವಯಸ್ಸಿನಿಂದ ಕಷ್ಟವನ್ನೇ ನೋಡಿಕೊಂಡು ಬಂದಿದ್ದಾಳೆ. ಹೀಗಾಗಿ ಅವಳಿಗೆ ಕಷ್ಟ ಎಂದರೆ ಏನು ಅನಿಸಲ್ಲ. ಆದರೆ ಯಾರಿಗೂ ನೋವಾಗಬಾರದು ಅಷ್ಟೇ. ಈಗ ರಿಯಾ ಕೂಡ ಜೊತೆಯಾಗಿದ್ದಾಳೆ. ಧಾರಾವಾಹಿ ಹೊರತು ಪಡಿಸಿದರೇ ಇಬ್ಬರು ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ನಗಿಸುತ್ತಾರೆ.

Star Suvarna serial Vijay Surya Namma Lacchi Completed 100th Episode

ಸಂಗಮ್‌ಗೆ ಮಗಳ ಸತ್ಯ ತಿಳಿಯೋದು ಯಾವಾಗ?

ಲಚ್ಚಿಗೆ ಸೇಮ್ ಅಪ್ಪನ ಕಂಠವೇ ಬಂದಿದೆ. ಆದರೆ ಸಂಗಮ್‌ಗೆ ಇವಳೇ ನನ್ನ ಮಗಳು ಎಂಬುದು ಗೊತ್ತಿಲ್ಲ. ಆದರೆ ತನ್ನ ಮಗಳಿಗೆ ಧ್ವನಿ ನೀಡ್ತಾ ಇರುವುದು ಇವಳೇ ಎಂಬ ಸತ್ಯ ಗೊತ್ತಾಗಿದೆ. ಏನೇ ಮಾಡಿದರೂ ಲಚ್ಚಿ ಮಾತ್ರ ಬಾಯಿ ಬಿಡ್ತಾ ಇಲ್ಲ. ಯಾಕಂದ್ರೆ, ದೀಪಿಕಾಳಿಗೆ ಮಾತು ಕೊಟ್ಟಿದ್ದಾಳೆ. ನಾನು ಎಲ್ಲಿಯೂ ಈ ಧ್ವನಿ ನನ್ನದೇ ಎಂದು ಹೇಳಲ್ಲ ಅಂತ. ಹೀಗಾಗಿ ಸಂಗಮ್ ಕಣ್ಣೀರು ಹಾಕಿದರು ಲಚ್ವಿ ಮಾತ್ರ ಸತ್ಯ ಒಪ್ಪಿಕೊಳ್ಳುತ್ತಿಲ್ಲ. ಸಂಗಮ್ ಕಣ್ಣೀರು ಹಾಕಿದ್ದಾನೆ. ಮಂಡಿಯೂರಿ ಕುಳಿತರು ಲಚ್ಚಿ ಮನಸ್ಸು ಕರಗುತ್ತಿಲ್ಲ.

ಆ ಒಂದು ಗಳಿಗೆಗೆ ಕಾಯುತ್ತಿರೋ ಪ್ರೇಕ್ಷಕರು

ಆದ್ರೆ, ಪ್ರೇಕ್ಷಕರಿಗೆ ಅದೊಂದು ಆಸೆ ಕುತೂಹಲವನ್ನು ಮೂಡಿಸುತ್ತಿದೆ. ಯಾವಾಗ ತಂದೆ ಮಗಳು ಒಂದಾಗುತ್ತಾರೆ ಎಂದು ಕಾಯುತ್ತಿದ್ದಾರೆ. ಸಂಗಮ್‌ಗೆ ಲಚ್ಚಿ ತನ್ನ ಮಗಳೆಂದು ತಿಳಿಯಲಿ ಎಂಬ ಹಂಬಲ ನೋಡುಗರದ್ದು. ಈಗ ಧ್ವನಿ ಗೊತ್ತಾಗಿದೆ. ಆದಷ್ಟು ಬೇಗ ಆ ಸತ್ಯವೂ ಹೊರಗೆ ಬರಲಿ ಎಂಬುದೇ ಪ್ರೇಕ್ಷಕರ ಒತ್ತಾಸೆಯಾಗಿದೆ.

More from Filmibeat

English summary
Star Suvarna serial Vijay Surya Namma Lacchi Completed 100th Episode, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X