Don't Miss!
- News
ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ನಿಂದ ಗುಣಮುಖ: ಜಿಲ್ಲಾ ಪ್ರವಾಸ ಆರಂಭ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಶಾಲಿನಿ ಸೀರೆಯಲ್ಲಿ ಹಳ್ಳಿ ಚಿತ್ತಾರ.. ಬ್ಲೌಸ್‌ನಲ್ಲಿ ಅರಳಿದ ತಾವರೆ ಹೂವು!
ಶಾಲಿನಿ ಅಂದ್ರೆ ಗೊತ್ತಲ್ಲ, ವೆರೈಟಿ ವೆರೈಟಿ ಬ್ಲೌಸ್ ಗಳಿಗೆ ಖ್ಯಾತಿ ಪಡೆದವರು. ಇಷ್ಡು ದಿನ ನಾವೂ ನೀವೆಲ್ಲಾ ನೋಡೊದ ಡಿಸೈನರಿ ಬ್ಲೌಸ್ ಗಳು ಒಂದು ರೀತಿಯದ್ದಾದರೆ ಶಾಲಿನಿ ಹಾಕುವ ಬ್ಲೌಸ್ ಎಲ್ಲಿ ಹುಡುಕಿದರೂ ಸಿಗುವುದೇ ಇಲ್ಲ. ಅಂತ ಡಿಫ್ರೆಂಟ್ ಡಿಸೈನರಿ ಬ್ಲೌಸ್‌ಗಳನ್ನು ಶಾಲಿನಿ ಹಾಕುತ್ತಾರೆ. ಅದರ ಅಡ್ವಾಂಟೇಜ್ ಏನೆಂದರೆ, ಆ ಡಿಸೈನ್ ಇಷ್ಟವಾದರೆ ಬ್ಲೌಸ್‌ನಲ್ಲಿ ಇಟ್ಟಿಕೊಳ್ಳಬಹುದು, ಬೇಡವಾದರೆ ತೆಗೆಯಲುಬಹುದು. ಸದ್ಯ ವರಮಹಾಲಕ್ಷ್ಮೀಯ ವಿಶೇಷತೆಗಾಗಿ ಒಂದು ವಿಭಿನ್ನ ಬ್ಲೌಸ್ ಹಾಕಿದ್ದಾರೆ. ಆ ಬ್ಲೌಸ್ ಹೇಗೆಲ್ಲಾ ರೆಡಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ವರಮಹಾಲಕ್ಷ್ಮೀ ಹಬ್ಬದ ಎಲ್ಲೆಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇತ್ತೀಚೆಗೆ ಹಬ್ಬಗಳ ಗ್ರ್ಯಾಂಡ್ ಸೆಲೆಬ್ರೇಷನ್ ಸೀರಿಯಲ್ ಸೆಟ್ ನಲ್ಲೂ ಆರಂಭವಾಗಿದೆ. ಅದೇ ರೀತಿ ಸ್ಟಾರ್ ಸುವರ್ಣದ ಎಲ್ಲಾ ಧಾರಾವಾಹಿಗಳಲ್ಲೂ ಹಬ್ಬದ ಆಚರಣೆಯನ್ನು ಮಾಡಲಾಗಿದೆ. ಆದರೆ ಶಾಲಿನಿ ನಡೆಸಿಕೊಡುವ 'ಸೂಪರ್ ಸ್ಟಾರ್' ವೇದಿಕೆಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಜೋರಾಗಿ ಆಚರಣೆ ಮಾಡಲಾಗಿದೆ.
ಪಾರು:
ಅತ್ತೆಯ
ಮುಂದೇನೆ
ರಾಣಾನ
ಕಪಾಳಕ್ಕೆ
ಬಾರಿಸಿದ
ಪಾರು..!

ಶಾಲಿನಿ ಬ್ಲೌಸ್ ನೋಡಿದ್ರೆ ಶಾಕ್
ಮೊದಲೇ ಹೇಳಿದ ಹಾಗೇ ಶಾಲಿನಿ ನಡೆಸಿಕೊಡುವ ಸೂಪರ್ ಸ್ಟಾರ್ ಶೋನಲ್ಲಿ ಹೆಚ್ಚು ಗಮನ ಸೆಳೆಯುವುದು ಅವರು ಹಾಕುವ ಬ್ಲೌಸ್. ಒಂದೊಂದು ಶೋಗೂ ಒಂದೊಂದು ವಿಭಿನ್ನ ರೀತಿಯ ಬ್ಲೌಸ್ ಹಾಕಿಕೊಂಡು ಬರುತ್ತಾರೆ. ಅದು ಬರೀ ಬ್ಲೌಸ್ ಆಗಿರುವುದಿಲ್ಲ. ಅದರಲ್ಲೊಂದಷ್ಟು ಮಾಹಿತಿಯೂ ಇರುತ್ತದೆ. ಒಂದಷ್ಟು ಸಂದೇಶವೂ ಇರುತ್ತದೆ. ಆ ರೀತಿಯ ಬ್ಲೌಸ್‌ಗಳನ್ನೇ ಹಾಕುತ್ತಾರೆ. ಹೀಗೆ ವೆರೈಟಿ ಬ್ಲೌಸ್ ಹಾಕುವ ಶಾಲಿನಿ ಹಬ್ಬಕ್ಕೆ ಯಾವ ರೀತಿ ರೆಡಿಯಾಗುತ್ತಾರೆ ಎಂಬ ಕುತೂಹಲ ಇದ್ದಿದ್ದೆ. ಅದಕ್ಕೆ ಉತ್ತರವೂ ಸಿಕ್ಕಿದೆ. ಅವರ ಬ್ಲೌಸ್ ಊಹೆಗೂ ಮೀರಿ ವಿಭಿನ್ನವಾಗಿದೆ.

ಕೊಳದಲ್ಲಿ ಬಿಟ್ಟ ಕಮಲ ಹೊತ್ತ ಶಾಲಿನಿ
ಇಂದು ವರಮಹಾಲಕ್ಷ್ಮೀ ಹಬ್ಬ. ಈ ಹಬ್ಬದಂದು ಎಲ್ಲಾ ಹೆಣ್ಣು ಮಕ್ಕಳು ಲಕ್ಷ್ಮೀ ಪೂಜೆ ಆಚರಿಸುತ್ತಾರೆ. ಇನ್ನು ಹೊಸ ಬಟ್ಟೆ ತೆಗೆದುಕೊಳ್ಳುವುದು ಸಾಮಾನ್ಯ. ಆ ಹೊಸ ಬಟ್ಟೆಯಲ್ಲೂ ವಿಭಿನ್ನ ಬಟ್ಟೆ ತೆಗೆದುಕೊಳ್ಳುವುದಿದೆಯಲ್ಲ ಅದು ಸ್ಪೆಷಲ್. ಅಂತ ಸ್ಪೆಷಾಲಿಟಿಯಲ್ಲಿ ಒಬ್ಬರು ಶಾಲಿನಿ. ಇವತ್ತು ಸೂಪರ್ ಸ್ಟಾರ್ ಶೋಗೆ ಹಾಕಿರುವ ಸೀರೆಯಲ್ಲಿ ಹಳ್ಳಿ, ಹಳ್ಳಿಯ ಬದುಕು ಪ್ರಿಂಟ್ ಆಗಿದೆ. ವಿಶೇಷತೆ ಇದಲ್ಲ. ಅವರ ಬ್ಲೌಸ್ ಡಿಸೈನಲ್‌ನಲ್ಲಿರೋದು ವಿಶೇಷತೆ. ಅವರ ಬ್ಲೌಸ್‌ನಲ್ಲಿ ಕೊಳವೊಂದಿದೆ. ಆ ಕೊಳದಲ್ಲಿ ಕಮಲ ಹೂ ಕೂಡ ಅರಳಿದೆ.

ಮೌನಿಶನ ಕೈಚಳಕದಿಂದ ಅರಳಿದ ಕಮಲ
ನಿಮಗೆಲ್ಲಾ ಈಗಾಗಲೇ ತಿಳಿದಿದೆ ಶಾಲಿನಿ ಕಾಸ್ಟ್ಯೂಮ್ ಡಿಸೈನರ್ ಮೌನಿಶಾ. ಈ ರೀತಿಯ ವಿಭಿನ್ನ ತಲೆ ಓಡಿಸುವುದರಲ್ಲಿ ನಂಬರ್ ಒನ್. ಶಾಲಿನಿಗೆ ಹಾಗೋ ಹೀಗೋ ಕನ್ವೆನ್ಸ್ ಮಾಡಿಸಿ, ತಾವೂ ಮಾಡಿರುವ ಎಕ್ಸ್ ಪಿರಿಮೆಂಟ್ ಬ್ಲೌಸ್‌ಗಳನ್ನು ಹಾಕಿಸಿ ಬಿಡುತ್ತಾರೆ. ಅವರು ಡಿಸೈನ್ ಮಾಡಿದ ಬ್ಲೌಸ್‌ಗೆ ಅವರುಗಳೇ ಅದ್ಭುತ ಸ್ಕಿಟ್ ಅನ್ನು ರೆಡಿ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಹೀಗಾಗಿ ಮೌನಿಶಾ ಇನ್ನು ಚೆನ್ನಾಗಿಯೇ ಪರಿಚಯ ಇರುತ್ತಾರೆ. ಈಗ ಕೊಳದೊಳಗೆ ತಾವರೆ ಹೂವಿನ ಬ್ಲೌಸ್ ಅನ್ನು ಹಾಕಿಸಿದ್ದಾರೆ. ಆದರೆ ಈಗ ಶಾಲಿನಿಯೇ ಸಿಟ್ಟುಮಾಡಿಕೊಂಡು ಹೊರಟೆ ಹೋಗಿದ್ದಾರೆ.

ವರಮಹಾಲಕ್ಷ್ಮೀ ಸ್ಪೆಷಲ್ ಸೂಪರ್ ಸ್ಟಾರ್
ಸೂಪರ್ ಸ್ಟಾರ್ ಮಹಿಳಾ ಮಣಿಯರ ಫೇವರಿಟ್ ಶೋ. ಈ ಶೋನಲ್ಲಿ ಮಹಿಳಾ ಮಣಿಗಳನ್ನು ಕರೆಸಿ, ಒಂದಷ್ಟು ಗೇಮ್ ಆಡಿಸುವ ಮೂಲಕ ಮನರಂಜನೆ ನೀಡುತ್ತಾರೆ. ಇದೀಗ ವರಮಹಾಲಕ್ಷ್ಮೀ ಸ್ಪೆಷಲ್ ಅಂತ ಮೂವರು ಮಹಿಳಾ ಮಣಿಯರನ್ನು ಕರೆಸಿದ್ದಾರೆ. ಇಸ್ಮಾರ್ಟ್ ಜೋಡಿಗಳನ್ನು ಕರೆಸಿ ಅದ್ಭುತ ಆಟವಾಡಿಸಿ, ಸಖತ್ ಮನರಂಜನೆ ನೀಡಲಿದ್ದಾರೆ.