Super Star Shalini: "ಕಸ ಗುಡಿಸೋಕೆ, ಧೂಳ್ ಹೊಡೆಯೋಕೂ ಆಗುತ್ತೆ".. ಶಾಲಿನಿ ಬ್ಲೌಸ್ ನೋಡಿ ನೆಟ್ಟಿಗರ ಕಮೆಂಟ್

By ಎಸ್ ಸುಮಂತ್

ಶಾಲಿನಿ ಅಂದ್ರೆ ಬ್ಲೌಸ್.. ಬ್ಲೌಸ್ ಅಂದ್ರೆ ಶಾಲಿನಿ ಎಂಬಂತೆ ಆಗೋಗಿದೆ. ಸದ್ಯ ಶಾಲಿನಿ ಬ್ಲೌಸ್ ವಿಚಾರಕ್ಕೆ ಟ್ರೆಂಡಿಂಗ್‌ನಲ್ಲಿದ್ದಾರೆ. ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಶಾಲಿನಿ ನಡೆಸಿಕೊಡುತ್ತಿದ್ದಾರೆ. ಆ ಕಾರ್ಯಕ್ರಮ ಮಹಿಳೆಯರದ್ದೇ ಆದರೂ ಕೂಡ ಅದರಲ್ಲಿ ಸಿಕ್ಕಾಪಟ್ಟೆ ಹೈಲೈಟ್ ಆಗೋದು ಶಾಲಿನಿ ಅವರ ಡ್ರೆಸ್. ಅದರಲ್ಲೂ ಮುಖ್ಯವಾಗಿ ಶಾಲಿನಿ ಅವರ ಬ್ಲೌಸ್ ತುಂಬಾ ಗಮನ ಸೆಳೆಯುತ್ತೆ.

ಒಂದೊಂದು ದಿನ ಒಂದೊಂದು ರೀತಿಯ ಬ್ಲೌಸ್ ಧರಿಸುತ್ತಾರೆ. ದೇವರು, ದೇವಸ್ಥಾನ, ಪ್ರಕೃತಿ ಎಲ್ಲವೂ ಅವರ ಬ್ಲೌಸ್ ನಲ್ಲಿಯೇ ಬಂದು ಬಿಡುತ್ತೆ. ಅಷ್ಟು ಡಿಫ್ರೆಂಟ್ ಆಗಿ ಬ್ಲೌಸ್ ಗಳನ್ನು ಡಿಸೈನ್ ಮಾಡಲಾಗುತ್ತದೆ. ಅದರ ರೂವಾರಿ, ಶಾಲಿನಿ ಅವರ ಜೊತೆಗೇನೆ ಇರುವ ಮೌನೀಶ. ಇಬ್ಬರ ನಡುವೆ ಆಗಾಗ ಬ್ಲೌಸ್ ವಿಚಾರಕ್ಕೆ ಮಹಾ ಯುದ್ಧವೇ ನಡೆಯುತ್ತಿರುತ್ತದೆ.

Star Suvarna Super Star Reality Show Anchor Shalinis blouse design went viral

ಹೆಸರಿಡಲು ಕಷ್ಟವಾದ ಬ್ಲೌಸ್ ಇದು

ಶಾಲಿನಿ ಹಾಕುವ ಬ್ಲೌಸ್ ಗೆಲ್ಲಾ ಒಂದೊಂದು ಹೆಸರನ್ನಿಡಲಾಗುತ್ತಿತ್ತು. ಅದರ ವರ್ಣನೆಯೂ ಅದ್ಭುತವಾಗಿತ್ತು. ತೋರಣದ ಬ್ಲೌಸ್, ಟೆಂಪಲ್ ಬ್ಲೌಸ್ ಹೀಗೆ ವಿಶಿಷ್ಠ ಬ್ಲೌಸ್‌ಗಳಿಗೆ ವಿಭಿನ್ನ ಹೆಸರುಗಳನ್ನೇ ಇಡಲಾಗಿತ್ತು. ಆದರೆ, ಈ ಬಾರಿ ಶಾಲಿನಿ ಹಾಕಿರುವ ಬ್ಲೌಸ್‌ಗೆ ಏನೆಂದು ಹೆಸರಿಡಲಿ. ಈ ಚೆಂದ ಬ್ಲೌಸ್ ಗೆ ಎಂದು ಹಾಡು ಹೇಳಬೇಕು. ಆ ರೀತಿಯ ವಿಚಿತ್ರ ಬ್ಲೌಸ್ ತೊಟ್ಟು ಬಂದಿದ್ದಾರೆ.

700 ಕ್ಕೂ ಹೆಚ್ಚು ಕಮೆಂಟ್‌ಗಳ ಸುರಿಮಳೆ

ಶಾಲಿನಿಗೆ ಫಾಲೋವರ್ಸ್ ಏನು ಕಡಿಮೆ ಇಲ್ಲ. ಅಬ್ಬಬ್ಬಾ ಹೊಸ ಬ್ಲೌಸ್ ಹಾಕಿದ ಕೂಡಲೇ ತಾನು ಮುಂದು, ನಾನು ಮುಂದು ಎಂಬಂತೆ ಓಡಿ ಬಂದು ಕಮೆಂಟ್ ಮೂಲಕ ಬ್ಲೌಸ್ ಬಗ್ಗೆ ಗುಣಗಾನ ಮಾಡಿದ್ದಾರೆ. ಗರಗರ ಅಂತ ತಿರುಗಿಸಿ ಹೊಡೆಯಬಹುದು ಅಂತ ಒಬ್ರು ಕಮೆಂಟ್ ಹಾಕಿದ್ರೆ, ಗುರು ಸ್ವಲ್ಪ ಯೋಚನೆ ಮಾಡಿದ್ರೆ ಅದ್ರಲ್ಲೇ ನೇಣು ಹಾಕಬಹುದು ಎಂದು ಉತ್ತರಿಸಿದ್ದಾರೆ.

Star Suvarna Super Star Reality Show Anchor Shalinis blouse design went viral

ಫಾಲೋವರ್ಸ್ ಬಳಿ ಸಲಹೆ ಕೇಳಿದ್ದ ಶಾಲಿನಿ

ಶಾಲಿನಿ ಯಾವುದೇ ಬ್ಲೌಸ್ ಹಾಕಿದರೂ ಮೌನೀಶ ಹಾಗೂ ಹೇರ್ ಸ್ಟೈಲ್ ಮಾಡುವವರ ಜೊತೆ ನಿಂತು ಒಂದು ಸ್ಕಿಟ್ ಅನ್ನೇ ಮಾಡಿ ಬಿಡ್ತಾ ಇದ್ರು. ಆದ್ರೆ ಈ ಬಾರಿ ಒಂದೆರೆಡು ಲೈನ್ ಹೇಳಿ ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ಈ ಬ್ಲೌಸ್‌ನ ಹಲವಾರು ಉಪಯೋಗಗಳು ಕೈ ನೆಟ್ಟಗೆ ಮಾಡಿದ್ರೆ ಸೊಳ್ಳೆ ಪರದೆ ಆಗುತ್ತೆ. ಹೂ ಗುಚ್ಛ ತರವೂ ಇಟ್ಟುಕೊಳ್ಳಬಹುದು. ನಿಮಗೇನಾದರೂ ತಿಳಿದರೆ ಕಮೆಂಟ್ ಮಾಡಿ ಎಂದು ಆಪ್ಶನ್ ಕೊಟ್ಟಿದ್ರು.

ಈ ಬ್ಲೌಸ್‌ನಲ್ಲಿ ಏನೆಲ್ಲಾ ಮಾಡಬಹುದು..?

ಈಗ ಈ ವಿಡಿಯೋಗೆ ಬಂದಿರೋದು ಒಂದೆರಡು ಕಮೆಂಟ್‌ಗಳಲ್ಲ. 750 ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ. ಅದರಲ್ಲಿ ಆಯ್ಕೆ‌ ಮಾಡಿಕೊಂಡ ಕಮೆಂಟ್‌ಗಳನ್ನು ಶಾಲಿನಿ ಹೇಳಿದ್ದಾರೆ. ಧನ್ಯವಾದಗಳನ್ನು ಹೇಳಿದ್ದಾರೆ. ಕಸ ಹೊಡೆಯಬಹುದು, ಧೂಳ್ ಹೊಡೆಯಬಹುದು, ಪೊರಕೆ ಥರ ಬಳಸಬಹುದು, ಪಾತ್ರೆ ಉಜ್ಜೋ ಗುಂಜು ಮಾಡಿಕೊಳ್ಳಬಹುದು, ಟೀ ಸೋಸ ಬಹುದು, ಮಕ್ಕಳಿಗೆ ಜೋಕಾಲಿ ಮಾಡಬಹುದು, ಸೊಳ್ಳೆ ಪರದೆ ಮಾಡಿಕೊಳ್ಳಬಹುದು, ಗಾಳಿ ಬಳಸಿಕೊಳ್ಳಬಹುದು ಅಷ್ಟೇ ಯಾಕೆ‌ ಇದರಲ್ಲಿ ಮೀನನ್ನು ಹಿಡಿಯಬಹುದು. ಇದು ಸದ್ಯಕ್ಕೆ ಬಂದಿರುವ ಕಮೆಂಟ್‌ಗಳು. ನಿಮಗೂ ಯಾವುದಾದರು ರೀತಿ‌ ಬಳಕೆ‌ ಮಾಡಿಕೊಳ್ಳಬಹುದು ಎಂದಾದರೇ ಆ ಬ್ಲೌಸ್‌ಗಾಗಿ ಶಾಲಿನಿ ಅವರನ್ನೇ ಕಾಂಟ್ಯಾಕ್ಟ್ ಮಾಡಿ.

More from Filmibeat

English summary
Star Suvarna Super Star Reality Show Anchor Shalini's blouse design went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X