ವೀಳ್ಯದೆಲೆ, ಬನಾನ, ನವಿಲು: ಅಬ್ಬಬ್ಬಾ ಶಾಲಿನಿ ಬಳಿ ಇರುವ ಬ್ಲೌಸ್ ಒಂದೊಂದ್ ಅಲ್ಲ..!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಸ್ಟಾರ್ ರಿಯಾಲಿಟಿ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಅಲ್ಲಿ ಒಂದಷ್ಟು ಮನರಂಜನೆ, ಒಂದಷ್ಟು ನೋವು, ಒಂದಷ್ಟು ಖುಷಿ, ಒಂದಷ್ಟು ಕಾಮಿಡಿ ಹೀಗೆ ನಗುವಿನ ಅಲೆಯಲ್ಲಿ ತೇಲಾಡುವ ವಿಚಾರಗಳು ಇರುತ್ತವೆ. ಮನದಲ್ಲಿಯೇ ತುಂಬಿದ ನೋವನ್ನು ಮರೆಸುವ ವೇದಿಕೆಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಕಾರ್ಯಕ್ರಮವನ್ನು ಶಾಲಿನಿ ನಿರೂಪಣೆ ಮಾಡುತ್ತಾರೆ. ಆದರೆ ಈಗ ನಾವು ಹೇಳೋದಕ್ಕೆ ಹೊರಟಿರುವುದು ನಿರೂಪಣೆ ಬಗ್ಗೆಯಲ್ಲ. ಬದಲಿಗೆ ಶಾಲಿನಿ ಅವರ ಬಳಿ ಇರುವ ಬ್ಲೌಸ್‌ಗಳ ಬಗ್ಗೆ.

ಎಸ್, ವಾರಕ್ಕೆ ಎರಡು ಎಪಿಸೋಡ್‌ಗಳು ಪ್ರಸಾರವಾಗುತ್ತವೆ. ಹಾಗೆಲ್ಲಾ ಹೆಚ್ಚು ಗಮನ ಸೆಳೆಯುವುದು ಇದೆ ಶಾಲಿನಿ. ನಾವೂ ನೀವೆಲ್ಲಾ ಮದುವೆ, ಸಭೆ, ಸಮಾರಂಭವೆಂದರೆ ಒಂದಷ್ಟು ಡಿಸೈನರಿ ಬ್ಲೌಸ್‌ಗಳನ್ನು ಸ್ಟಿಚ್ ಮಾಡಿಸುವುದನ್ನು ನೋಡಿದ್ದೇವೆ. ಆದರೆ ಶಾಲಿನಿ ಹಾಕುವ ಬ್ಲೌಸ್ ನಮ್ಮೆಲ್ಲರ ಆಲೋಚನೆಯನ್ನು ಮೀರಿದ್ದಾಗಿದೆ. ಆ ಡಿಸೈನ್ ಬೇಡವೆಂದರೆ ಅರೆ ಕ್ಷಣದಲ್ಲಿಯೇ ಬದಲಾಯಿಸಲು ಬಹುದು. ನೋ ಡ್ಯಾಮೇಜ್ ಕೂಡ. ಅವರೆಲ್ಲಾ ಡಿಸೈನರಿ ಬ್ಲೌಸ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಬಾಳೆಗೊನೆಯಲ್ಲೂ ಬ್ಲೌಸ್ ಮಾಡಬಹುದು

ಹೆಡ್ಲೈನ್ ನೋಡಿ ಒಂದು ಕ್ಷಣ ಶಾಕ್ ಆಗಿರುತ್ತೀರಿ ಎಂಬುದು ಕನ್ಫರ್ಮ್ ಆಗಿದೆ. ಬಾಳೆಗೊನೆ ಬ್ಲೌಸ್ ಹಾಕಿಕೊಳ್ಳಬೇಕು ಅಂತ ತೋಟದ ಕಡೆಗೆ ಹೋಗಿ ಬಾಳೆಗೊನೆ ಕಿತ್ತು ತಂದಿರಾ..? ಅದಕ್ಕೂ ಮುನ್ನ ಸ್ಟೋರಿಯನ್ನೊಮ್ಮೆ ಓದಿ ಬಿಡಿ. ಶಾಲಿನಿ ಅವರು ಈ ವಾರದ ಸೂಪರ್ ಸ್ಟಾರ್ ಸಂಚಿಕೆಯಲ್ಲಿ ಬನಾನ ಬ್ಲೌಸ್ ಎಂದರೆ ಬಾಳೆಗೊನೆ ಬ್ಲೌಸ್ ತೊಟ್ಟಿದ್ದರು. ಅದು ವಿಭಿನ್ನತೆಯಿಂದ ಕೂಡಿತ್ತು. ಬ್ಲೌಸ್ ಪೀಸ್ ನಲ್ಲಿಯೇ ಸ್ಟೆಪ್ ಬೈ ಸ್ಟೆಪ್ ಆ ಬ್ಲೌಸ್ ಡಿಸೈನ್ ಮಾಡಲಾಗಿದೆ. ಒಂದು ವೇಳೆ ಆ ಡಿಸೈನ್ ಬೋರ್ ಹೊಡೆದರೆ ಮತ್ತೆ ಅದನ್ನ ತೆಗೆದು ನಾರ್ಮಾಲ್ ಆಗಿ ಕೂಡ ಬ್ಲೌಸ್ ಹಾಕಿಕೊಳ್ಳಬಹುದು. ಆದರೆ ಸಿಂಪಲ್ ಸೀರೆಗಳಿಗೆ ಈ ರೀತಿಯ ಬ್ಲೌಸ್ ಗ್ರ್ಯಾಂಡ್ ಲುಕ್ ಅಂತು ನೀಡುತ್ತೆ.

ಶಾಲಿನಿಯ ಬಾವಲಿ ಇಲ್ಲಿದೆ

ಬಾವಲಿ ಬಗ್ಗೆ ನಿಮಗೆಲ್ಲಾ ತಿಳಿದೆ ಇರುತ್ತೆ. ಆ ಕಡೆ ಈ ಕಡೆ ರೆಕ್ಕೆ ಬಿಚ್ಚಿ ಬಡಿದಾಡುತ್ತಿರುತ್ತದೆ. ಇದನ್ನು ನೋಡುವುದಕ್ಕೆ ಒಂದು ರೀತಿ ಚೆಂದ. ಆದರೆ ಇದರಲ್ಲಿ ಬ್ಲೌಸ್ ಕೂಡ ಮಾಡಬಹುದು ಎಂದರೆ ನೀವೂ ನಂಬುವೀರಾ..? ನಂಬಲೇಬೇಕಾಗುತ್ತದೆ. ಏನೋ ಡಿಫ್ರೆಂಟ್ ಆಗಿದೆ ಎಂದು ನೀವೂ ಬಾವಲಿ ಹುಡುಕಿಕೊಂಡು ಹೊರಡಬೇಡಿ ಆಮೇಲೆ. ಒಮ್ಮೆ ವಿಡಿಯೋ ನೋಡಿದರೆ ಆ ಬ್ಲೌಸ್ ನ ಎಷ್ಟು ಸಿಂಪಲ್ ಆಗಿ ಸ್ಟಿಚ್ ಮಾಡಿ, ರಾಯಲ್ ಆಗಿ ಕಾಣುವಂತೆ ಮಾಡಿಸಬಹುದು ಎಂಬ ಐಡಿಯಾ ಖಂಡಿತ ಮೂಡದೆ ಇರದು.

ವೀಳ್ಯದೆಲೆಯಲ್ಲೂ ಬ್ಲೌಸ್ ಮಾಡಬಹುದು

ವೀಳ್ಯದೆಲೆಯನ್ನು ಅಚ್ಚುಕಟ್ಟಾಗಿ ಜೋಡಿಸಿ ಇಟ್ಟರೆ ವಾವ್ ಅದನ್ನ ನೋಡುವುದಕ್ಕೆ ಖುಷಿಯಾಗುತ್ತೆ. ಅದರಲ್ಲಿ ಬ್ಲೌಸ್ ಹೆಣೆಯಬಹುದು ಎಂದರೆ ಖುಷಿ ಇರದೆ ಇರುತ್ತದೆಯೇ. ಅದರಲ್ಲೂ ಶಾಲಿನಿ ಬ್ಲೌಸ್ ಮಾಡಿಸಿಕೊಂಡು ಹಾಕಿಕೊಂಡಿದ್ದಾರೆ. ಸೇಮ್ ಟು ಸೇಮ್ ಬುಟ್ಟಿಯಲ್ಲಿ ವೀಳ್ಯದೆಲೆಯನ್ನು ಜೋಡಿಸಿದ ರೀತಿಯಲ್ಲಿಯೇ ಈ ಬ್ಲೌಸ್ ಕಾಣಿಸುತ್ತಿದೆ. ಅದರಲ್ಲೂ ಕಲರ್ ಕಾಂಬಿನೇಷನ್ ಅಂತು ಇನ್ನಷ್ಟು ಕಣ್ಣಿಗೆ ಕಟ್ಟುವಂತಿದೆ. ಅಷ್ಟೇ ಅಲ್ಲ ಒಮ್ಮೆ ಈ ಬ್ಲೌಸ್‌ನ ಟ್ರೈ ಮಾಡಬಹುದು ಎಂಬಷ್ಟು ಖುಷಿ ಕೊಡುತ್ತಿದೆ.

ಬ್ಲೌಸ್ ಪರಿಚಯಿಸುವ ರೀತಿಯೇ ವಿಭಿನ್ನ

ಬ್ಲೌಸ್ ಪರಿಚಯಿಸುವ ರೀತಿಯೇ ವಿಭಿನ್ನ

ಶಾಲಿನಿ ಹಾಕುವ ಒಂದೊಂದು ಬ್ಲೌಸ್‌ಗಳು ಕೂಡ ವಿಭಿನ್ನವಾಗಿರುತ್ತದೆ. ಅದನ್ನು ಧರಿಸಿದ ಮೇಲೆ ಆ ಬಗ್ಗೆ ಪರಿಚಯ ಮಾಡಿಕೊಡುವ ರೀತಿ ಇನ್ನು ವಿಶಿಷ್ಠವಾಗಿದೆ. ಶಾಲಿನಿ ಜೊತೆ ಮೂವರ ಸಂಘವೊಂದಿದೆ. ಹೇಳಿ ಕೇಳಿ ಶಾಲಿನಿ ಸಖತ್ ಕಾಮಿಡಿ ಮಾಡುತ್ತಾರೆ. ಇದೀಗ ಬ್ಲೌಸ್ ವಿಚಾರಕ್ಕೂ ಅಷ್ಟೇ, ಕಾಮಿಡಿ ಮೂಲಕ ಆ ಬ್ಲೌಸ್‌ನ ವಿಶೇಷತೆಯನ್ನು ತಿಳಿಸುತ್ತಿದ್ದಾರೆ. ಈ ಎಲ್ಲಾ ಬ್ಲೌಸ್ ಡಿಸೈನ್ ಮಾಡುವವರು ಶಾಲಿನಿ ಜೊತೆಗೆ ಇರುವ ಮೋನಿಶ್ ಅವರೇ.

More from Filmibeat

English summary
Star Suvarna Super Star Reality Show Written Update On Shalini Special. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X