Achar & Co: 'ಆಚಾರ್ & ಕೋ' ಮಿಸ್ ಮಾಡ್ಕೊಂಡ್ರಾ..? ದಸರಾ ಸಂಭ್ರಮದಲ್ಲಿ ಕಿರುತೆರೆಗೆ ಲಗ್ಗೆ ಇಡ್ತಿದೆ ಈ ಸಿನಿಮಾ!

By ಅನಿತಾ ಬನಾರಿ

ಕನ್ನಡ ಕಿರುತೆರೆ ವೀಕ್ಷಕರಿಗೆ ಇದೆಯೊಂದು ಸಿಹಿ ಸುದ್ದಿ! ವಿಭಿನ್ನ ರೀತಿಯ ಧಾರಾವಾಹಿಗಳ ಜೊತೆಗೆ ವಿನೂತನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಸಿನಿಮಾದ ಮೂಲಕ ವೀಕ್ಷಕರನ್ನು ರಂಜಿಸಲು ತಯಾರಾಗಿದೆ. ಹೌದು, ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ 'ಆಚಾರ್​ &​ ಕೋ' ಸಿನಿಮಾವನ್ನು ಇದೇ ವಾರಾಂತ್ಯದಂದು ಪ್ರಸಾರ ಮಾಡುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪಿಆರ್‌​ಕೆ ಪ್ರೊಡಕ್ಷನ್ಸ್​' ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡಿರುವ 'ಆಚಾರ್ & ಕೋ' ಸಿನಿಮಾ ಇದೇ ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಪ್ರಸಾರಗೊಳ್ಳಲಿದೆ. ಇದೊಂದು ರೆಟ್ರೋ ಕಾಲದ ಸಿನಿಮಾವಾಗಿದ್ದು, 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ.

Star Suvarna telecastinng Achar & Co this festival weekend

ಅದೊಂದು ಅವಿಭಕ್ತ ಕುಟುಂಬ. ಆ ಕುಟುಂಬದ ತುಂಬ ಮಕ್ಕಳು. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ, ಮನೆಯ ಜವಾಬ್ದಾರಿ ಹೊತ್ತುಕೊಂಡಿರುವ ತಂದೆ ಏಕಾಏಕಿ ನಿಧನರಾಗುತ್ತಾರೆ. ಕುಟುಂಬಕ್ಕೆ ಆಧಾರ ಆಗಿರುವ ತಂದೆ ನಿಧನರಾದಾಗ ಮನೆಯ ಪರಿಸ್ಥಿತಿ ಹೇಗೆ ಬದಲಾಗುತ್ತದೆ? ಕುಟುಂಬದಲ್ಲಿ ಏನೆಲ್ಲ ವ್ಯತ್ಯಾಸವಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ.

ಹಾಸ್ಯಮಯವಾಗಿರುವ ಸನ್ನಿವೇಶಗಳನ್ನು ಒಳಗೊಂಡಿರುವ 'ಆಚಾರ್ & ಕೋ' ಸಿನಿಮಾದಲ್ಲಿರುವ ಎಮೋಶನಲ್ ದೃಶ್ಯಗಳು ಸಿನಿಮಾ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ. ಅಂದ ಹಾಗೇ 'ಆಚಾರ್ & ಕೋ' ಸಿನಿಮಾದಲ್ಲಿ ಒಂದು ವಿಶೇಷತೆಯಿದೆ. ಅದೇನಂತೀರಾ? ಈ ಸಿನಿಮಾದಲ್ಲಿ ನಿರ್ಮಾಪಕರುಗಳಾಗಿ, ನಿರ್ದೇಶಕರುಗಳಾಗಿ, ಸಂಗೀತ ನಿರ್ದೇಶಕರುಗಳಾಗಿ, ಮುಖ್ಯ ಪಾತ್ರಧಾರಿಗಳಾಗಿ, ಸೌಂಡ್ ಇಂಜಿನಿಯರ್‌ಗಳಾಗಿ, ವಸ್ತ್ರ ವಿನ್ಯಾಸಕರುಗಳಾಗಿ ಮಹಿಳೆಯರೇ ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಹಾಗೂ ಸುಧಾ ಬೆಳವಾಡಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಆಚಾರ್ & ಕೋ' ಸಿನಿಮಾದ ಮುಖ್ಯ ಆಕರ್ಷಣೆ ಎಂದರೆ ಅದು ಹಾಡು. ಅದರಲ್ಲೂ ಇದರಲ್ಲಿನ 'ಉಪ್ಪಿನಕಾಯಿ' ಹಾಡಂತೂ ತುಂಬಾನೇ ಸದ್ದು ಮಾಡಿತ್ತು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡಿತ್ತು. ಕೌಟುಂಬಿಕ ಕಥಾಹಂದರವನ್ನು ಹೊಂದಿರುವ 'ಆಚಾರ್ & ಕೋ' ಸಿನಿಮಾ ಥಿಯೇಟರ್‌ನಲ್ಲಿ ಪ್ರಸಾರವಾದಾಗ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು. ಇದರ ಜೊತೆಗೆ ಅಮೆಜಾನ್ ಪ್ರೈಮ್‌ನಲ್ಲೂ ಕೂಡಾ ಇದು ಸದ್ದು ಮಾಡಿತ್ತು.

Star Suvarna telecastinng Achar & Co this festival weekend

ಇದೀಗ ಕಿರುತೆರೆ ವೀಕ್ಷಕರಿಗೆ ಈ ಸಿನಿಮಾ ನೋಡಿ ಕಣ್ತುಂಬಿಸಿಕೊಳ್ಳುವ 'ಸುವರ್ಣ' ಅವಕಾಶವನ್ನು ಸುವರ್ಣ ವಾಹಿನಿ ನೀಡುತ್ತಿದೆ. ಮತ್ತ್ಯಾಕೆ ತಡ, ಕುಟಂಬ ಸಮೇತ ಕುಳಿತು ಕೌಟುಂಬಿಕ ಕಥೆಯನ್ನೊಳಗೊಂಡ ಸಿನಿಮಾ ನೋಡಿ, ವಾರಾಂತ್ಯವನ್ನು ಸಂತಸದಿಂದ ಕಳೆಯಿರಿ.

More from Filmibeat

English summary
Star Suvarna telecastinng Achar & Co this festival weekend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X