ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಟಾರ್ ಸುವರ್ಣ ಸ್ಪೆಷಲ್ ಧಮಾಕಾ!

By ಎಸ್ ಸುಮಂತ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ವಾರಪೂರ್ತಿ ಒಂದಲ್ಲ ಒಂದು ರೀತಿಯ ಮನರಂಜನೆ ಸಿಗುತ್ತಿದೆ. ವೀಕ್ ಡೇಸ್‌ನಲ್ಲಿ ಧಾರಾವಾಹಿಗಳ ಮೂಲಕ, ವೀಕೆಂಡ್‌ನಲ್ಲಿ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಅಷ್ಟೇ ಯಾಕೆ ಹಬ್ಬ-ಹರಿದಿನ, ವಿಶೇಷ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಇನ್ನಷ್ಟು ಮನರಂಜನೆ ಕೊಡುವಲ್ಲಿ ಸ್ಟಾರ್ ಸುವರ್ಣ ವಾಹಿನಿ ಮುಂದೆ ಇದೆ. ಇದೀಗ ವರಮಹಾಲಕ್ಷ್ಮೀ ಹಬ್ಬ ಬರ್ತಿದೆ. ಒಂದಷ್ಟು ಕ್ಯೂರಿಯಾಸಿಟಿಯೂ ಇರುತ್ತದೆ‌. ಹಬ್ಬಕ್ಕಾಗಿ ಯಾವ ರೀತಿಯ ಕಾರ್ಯಕ್ರಮ ಮಾಡಲಿದೆ ಎಂಬುದು. ಅದಕ್ಕೂ ತೆರೆ ಬಿದ್ದಿದ್ದು, ಪ್ರೋಮೊದಲ್ಲಿಯೇ ಕಿಕ್ಕೇರಿಸಿದೆ. ಇನ್ನೇನಿದ್ದರೂ ಪ್ರೋಗ್ರಾಂ ನೋಡುವ ಬಯಕೆ ಹೆಚ್ಚಾಗಿಯೇ ಉಳಿದುಕೊಂಡಿದೆ.

ಈಗಾಗಲೇ ವರಮಹಾಲಕ್ಷ್ಮೀ ಹಬ್ಬಕ್ಕೆಂದೇ ಸ್ಟಾರ್ ಸುವರ್ಣ ವಾಹಿನಿ ಅದ್ದೂರಿ ಕಾರ್ಯಕ್ರಮಗಳಿಗೆ ವೇದಿಕೆ ಸೃಷ್ಟಿಯಾಗಿದೆ. ಅದರಲ್ಲೂ ಮಹಿಳೆಯರಿಗಾಗಿಯೇ ಇರುವ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲೂ ಹಬ್ಬಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಹಬ್ಬದ ಸಂಭ್ರಮದ ಜೊತೆಗೆ ಸ್ಟಾರ್ ಸುವರ್ಣ ಮನರಂಜನೆಯನ್ನು ಸವಿಯಬಹುದಾಗಿದೆ.

ಹಬ್ಬಕ್ಕಾಗಿ ಸೂಪರ್ ಸ್ಟಾರ್‌ಗಳ ಮನರಂಜನೆ

ಹಬ್ಬಕ್ಕಾಗಿ ಸೂಪರ್ ಸ್ಟಾರ್‌ಗಳ ಮನರಂಜನೆ

ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸೂಪರ್ ಸ್ಟಾರ್' ಎಂಬ ರಿಯಾಲಿಟಿ ಶೋ ಎಲ್ಲರ ಅಚ್ಚುಮೆಚ್ಚಿನ ಶೋ ಆಗಿದೆ. ಅದು ಮಹಿಳೆಯರಿಗಾಗಿಯೇ ಇರುವಂತ ಶೋ. ಅದರಲ್ಲೂ ಶಾಲಿನಿ ಈ ಶೋ ನಡೆಸಿಕೊಡುವ ರೀತಿಗೆ ಒಂದಷ್ಟು ಜನ ಫ್ಯಾನ್ಸ್ ಆಗಿದ್ದಾರೆ. ವೆರೈಟಿ ವೆರೈಟಿ ಗೇಮ್ಸ್‌ ಅನ್ನು ಆಡಿಸುತ್ತಾ, ಸೂಪರ್ ಸ್ಟಾರ್ ವೇದಿಕೆಯಲ್ಲಿರುವವರಿಂದ ಮನರಂಜಿಸುವ ಕೆಲಸ ಮಾಡುತ್ತಾರೆ. ಅದರಲ್ಲೂ ಶಾಲಿನಿಯ ಕಾಸ್ಟ್ಯೂಮ್ ಮೇಲೂ ಎಲ್ಲರ ಗಮನ ಇದೆ. ಒಂದೊಂದು ಶೋಗೆ ಒಂದೊಂದು ರೀತಿಯ ಕಾಸ್ಟ್ಯೂಮ್ ಹಾಕುವುದರಿಂದ ಎಲ್ಲರ ಚಿತ್ತ ಅತ್ತ ಕಡೆ ನೆಟ್ಟಿದೆ. ಇದೀಗ ಈ ವಾರದ ಸೂಪರ್ ಸ್ಟಾರ್ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಸಂಚಿಕೆಯನ್ನು ಪ್ರಸ್ತುತ ಪಡಿಸುತ್ತಿದೆ. ಇಸ್ಮಾರ್ಟ್ ಜೋಡಿಯ ಮಹಿಳಾ‌ ಮಣಿಗಳನ್ನು ಕರೆಸಿದ್ದಾರೆ. ಪುನೀತ್ ಶ್ರೀರಾಮ್, ಇಂಪನ ಅಜಿತ್, ಮೌಲ್ಯ ಪ್ರತೀಕ್ ಮೂವರು ಮಹಿಳೆಯರು ಸೇರಿ ಎಂಜಾಯ್ ಮಾಡಿದ್ದಾರೆ. ಶಾಲಿನಿ ಆಡಿಸಿರುವ ಆಟಗಳ ಬಗ್ಗೆ ಕ್ಯೂರಿಯಾಸಿಟಿ ಇದೆ.

ವರಮಹಾಲಕ್ಷ್ಮೀ ಹಬ್ಬದಲ್ಲಿ ಬೊಂಬಾಟ್ ಭೋಜನ

ಹೊಸ ಹೊಸ ಅಡುಗೆ ಕಲಿಯುವುದಕ್ಕೆ ಸಿಹಿಕಹಿ ಚಂದ್ರು ಅವರ ಶೋ ನೋಡುವವರು ಹೆಚ್ಚಾಗಿಯೇ ಇದ್ದಾರೆ. ಪ್ರತಿ ದಿನ ಮಧ್ಯಾಹ್ನ ಬೊಂಬಾಟ್ ಬೋಜನಕ್ಕಾಗಿ ಎಲ್ಲರು ಕಾದು ಕುಳಿತಿರುತ್ತಾರೆ. ಇದೀಗ ಹಬ್ಬ ಬೇರೆ ಬರುತ್ತಾ ಇದೆ. ಚಂದ್ರು ಯಾವ ರೀತಿಯ ಅಡುಗೆ ಮಾಡುತ್ತಾರೆ ಎಂಬ ಕುತೂಹಲ. ಅದರ ಜೊತೆಗೆ ಸಿಹಿ ಕಹಿ ಚಂದ್ರು ಅವರ ಷಷ್ಟಿ ಪೂರ್ತಿ ಕೂಡ ಇದೆ. ಹೀಗಾಗಿ‌ ಬೊಂಬಾಟ್ ಭೋಜನದಲ್ಲಿ ನಳಮಹಾರಾಜ ಎಂದೇ ಖ್ಯಾತರಾಗಿರುವ ಸಿಹಿಕಹಿ ಚಂದ್ರು ಷಷ್ಟಿಪೂರ್ತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಆ ಕಾರ್ಯಕ್ರಮಕ್ಕೆ ಸೆಲೆಬ್ರೆಟಿಗಳು, ಆಪ್ತರೆಲ್ಲರು ಆಗಮಿಸುತ್ತಿದ್ದಾರೆ.

ಅರ್ಧಾಂಗಿಯಲ್ಲಿ ವರಮಹಾಲಕ್ಷ್ಮೀ ಸಂಭ್ರಮ

ಅರ್ಧಾಂಗಿಯಲ್ಲಿ ವರಮಹಾಲಕ್ಷ್ಮೀ ಸಂಭ್ರಮ

ಅರ್ಧಾಂಗಿ ಧಾರಾವಾಹಿ ಈಗಾಗಲೇ ಎಲ್ಲರ ಮನೆ ಮನ ತಲುಪಿದೆ. ಇದೀಗ ವರಮಹಾಲಕ್ಷ್ಮೀ ಸಂಭ್ರಮಕ್ಕೆಂದು ಧಾರಾವಾಹಿಯಲ್ಲಿ ವಾರಪೂರ್ತಿ ಸ್ಪೆಷಲ್ ಎಪಿಸೋಡ್ ಮಾಡಲಾಗುತ್ತಿದೆ. ವರಮಹಾಲಕ್ಷ್ಮೀಗಾಗಿ ಸ್ಪೆಷಲ್ ಸೆಟ್ ಹಾಕಿದ್ದು, ವಾರಪೂರ್ತಿ ಹಬ್ಬದ ಸಂಭ್ರಮ, ಸಡಗರವನ್ನು ನೀಡುತ್ತಿದ್ದಾರೆ. ಇಡೀ ಧಾರಾವಾಹಿ ತಂಡ ವರಮಹಾಲಕ್ಷ್ಮೀ ಸಂಭ್ರಮದಲ್ಲಿ ಇದ್ದಾರೆ.

ಸ್ಟಾರ್ ಸುವರ್ಣದಲ್ಲಿ ಅದ್ಧೂರಿ ವರಮಹಾಲಕ್ಷ್ಮೀ

ಸ್ಟಾರ್ ಸುವರ್ಣದಲ್ಲಿ ಅದ್ಧೂರಿ ವರಮಹಾಲಕ್ಷ್ಮೀ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಸೂಪರ್ ಮನರಂಜನೆಯ ಕಾರ್ಯಕ್ರಮಗಳ ಫ್ಯ್ಲಾನ್ ಮಾಡಿಕೊಂಡಿದೆ. ಪೂಜೆ ಮಾಡುವ ವಿಧಾನವನ್ನು ತಿಳಿಸಿ ಕೊಡಲಿದ್ದಾರೆ. ಗುರೂಜಿ ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮೀ ವ್ರತದ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಈ ಮೂಲಕ ಸ್ಟಾರ್ ಸುವರ್ಣ ವಾಹಿನಿಯಲ್ಲೂ ಅದ್ದೂರಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ನಡೆಯುತ್ತದೆ.

More from Filmibeat

English summary
Star Suvarna Varamahalakshmi Festival Special Program. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X