Old Monk Movie: ಯುಗಾದಿ ಹಬ್ಬಕ್ಕೆ ʻಓಲ್ಡ್ ಮಾಂಕ್ʼ ಕಾಮಿಡಿ ಕಿಕ್

By ಎಸ್ ಸುಮಂತ್

ನಟ, ನಿರ್ದೇಶಕ ಶ್ರೀನಿ ಕೈಚಳ ಎಂತದ್ದು ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಶ್ರೀನಿವಾಸ ಕಲ್ಯಾಣ ಮತ್ತು ಬೀರ್ ಬಲ್ ಅನ್ನೋ ಸಿನಿಮಾ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಈಗ ಓಲ್ಡ್ ಮಾಂಕ್ ಅನ್ನೋ ಸಿನಿಮಾ ನೀಡಿ ಮತ್ತೆ ನಕ್ಕು ನಗಿಸಿದ್ದಾರೆ. ಟ್ರೈಲರ್ ಮೂಲಕವೇ ಒಂದಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ 'ಓಲ್ಡ್ ಮಾಂಕ್' ಸಿನಿಮಾ ರಿಲೀಸ್ ಆದಾಗ ಆ ನಿರೀಕ್ಷೆಯನ್ನು ಫುಲ್‌ಫಿಲ್ ಮಾಡಿತ್ತು. ಇದೀಗ ಬೆಳ್ಳಿತೆರೆಯಲ್ಲಿ ನಕ್ಕು ನಗಿಸಿದ್ದಲ್ಲದೆ ಈಗ ಕಿರುತೆರೆಗೂ ಬರುತ್ತಿದೆ.

ಸಿನಿಮಾದಲ್ಲಿ ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಅನೇಕ ಅಂಶಗಳಿವೆ. ನಕ್ಕು ಹಗುರಾಗಲು ಹಲವು ಹಾಸ್ಯದ ಸನ್ನಿವೇಶಗಳಿವೆ. ತಂದೆ-ತಾಯಿ ಬಗ್ಗೆ ಇನ್ನಷ್ಟು ಗೌರವ ಮೂಡಿಸುವಂತಹ ಸೆಂಟಿಮೆಂಟಲ್ ದೃಶ್ಯಗಳಿವೆ. ಓಲ್ಡ್ ಮಾಂಕ್ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಕಚಗುಳಿ ಇಡುವಂತಹ ಸಂಭಾಷಣೆಗಳಿಗೆ ಪ್ರೇಕ್ಷಕರು ಈಗಾಗಲೇ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಕಾಮಿಡಿ ಟಾನಿಕ್ ನೀಡೊ 'ಓಲ್ಡ್ ಮಾಂಕ್'

ಕಾಮಿಡಿ ಟಾನಿಕ್ ನೀಡೊ 'ಓಲ್ಡ್ ಮಾಂಕ್'

ಈಗಾಗಲೇ ಸಾಕಷ್ಟು ಜನ 'ಓಲ್ಡ್ ಮಾಂಕ್' ಅನ್ನು ಥಿಯೇಟರ್‌ನಲ್ಲಿಯೇ ಹೋಗಿ ಟೇಸ್ಟ್ ಮಾಡಿ ಬಂದಿದ್ದಾರೆ. ಆದರೆ ಕೆಲವರಿಗೆ ಅದು ಸಾಧ್ಯವಾಗಿರಲಿಲ್ಲ. ಅಂತವರಿಗೂ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಮನೆಯಲ್ಲಿ ಕೂತು ಹೊಟ್ಟೆ ಉಣ್ಣಾಗಿಸಿಕೊಳ್ಳಬಹುದಾಗಿದೆ. ಅದು ಹೊಸ ವರ್ಷವನ್ನು ಸ್ವಾಗತಿಸುವ ಜೊತೆ ಜೊತೆಗೆ.

ಯುಗಾದಿ ಸಂಭ್ರಮದಲ್ಲಿ ಮತ್ತೇರಿಸಲಿದೆ 'ಓಲ್ಡ್ ಮಾಂಕ್'..!

ಯುಗಾದಿ ಸಂಭ್ರಮದಲ್ಲಿ ಮತ್ತೇರಿಸಲಿದೆ 'ಓಲ್ಡ್ ಮಾಂಕ್'..!

ಯುಗಾದಿ ಹಬ್ಬವನ್ನು ಎರಡು ದಿನವಾಗಿ ಆಚರಿಸುತ್ತೇವೆ. ಯುಗಾದಿ ಹಬ್ಬ ಅಂದ್ರೆ ಅದು ಹೊಸ ವರ್ಷವನ್ನು ಬರ ಮಾಡಿಕೊಂಡಂತೆ. ಹೀಗಾಗಿ ಮೊದಲ ದಿನ ಸಿಹಿ ತಿಂದರೆ ಎರಡನೇ ದಿನ ತುಂಬಾ ಮುಖ್ಯವಾದ ದಿನ. ಅದು ಹೊಸ ತಡುಕು ಮಾಡಿದ ದಿನ. ಹಳ್ಳಿಗಳಲ್ಲಿ ಈ ದಿನ ಭರ್ಜರಿ ಅಡುಗೆ ಮಾಡಿ ಮನೆ ಮಂದಿಯೆಲ್ಲಾ ಹರಟೆ ಹೊಡೆಯುತ್ತಾ ಊಟ ಮಾಡುತ್ತಾರೆ. ಆ ಮಜವೇ ಬೇರೆ. ಇದೇ ಸಮಯದಲ್ಲಿ ಕೆಲವೊಂದಿಷ್ಟು ಮಂದಿ ಅಂದರೆ ಮದ್ಯ ಪ್ರಿಯರು ಇದ್ದರೆ ಅವತ್ತು ಫುಲ್ ಪಾರ್ಟಿ ಮಾಡುತ್ತಾರೆ. ಈ ಪಾರ್ಟಿಯಲ್ಲಿ ʻಓಲ್ಡ್ ಮಾಂಕ್ʼ ಸಖತ್ ಕಾಮಿಡಿ ಕಿಕ್ ಕೊಡಲಿದೆ.

ಸ್ಟಾರ್ ಸುವರ್ಣದಲ್ಲಿ ಯುಗಾದಿ ಸಂಭ್ರಮ

ಸ್ಟಾರ್ ಸುವರ್ಣದಲ್ಲಿ ಯುಗಾದಿ ಸಂಭ್ರಮ

ವಾರ ಪೂರ್ತಿ ಧಾರಾವಾಹಿ, ರಿಯಾಲಿಟಿ ಶೋ, ವಾರದಲ್ಲಿ ಎರಡು ದಿನ ಸಿನಿಮಾ ನೀಡುವ ಸ್ಟಾರ್ ಸುವರ್ಣ ಹಬ್ಬಗಳಿಗೆ ಹಬ್ಬದೂಟವನ್ನೇ ಕೊಡುತ್ತಿದೆ. ಹೊಸ ಹೊಸ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಲು ಬಯಸುತ್ತಿದೆ. ಬರೀ ಸಿನಿಮಾ ಅಂತ ಅಲ್ಲ, ಹಬ್ಬಗಳಿಗೆ ಸ್ಪೆಷಲ್ ಪ್ರೋಗ್ರಾಂಗಳನ್ನು ಪ್ಲ್ಯಾನ್ ಮಾಡಿದೆ. ಅದರ ಜೊತೆಗೆ ಥಿಯೇಟರ್‌ನಲ್ಲಿ ಮೆಚ್ಚುಗೆ ಗಳಿಸಿದ ಸಿನಿಮಾವನ್ನು ಕಿರುತೆರೆ ವೀಕ್ಷಕರಿಗೆ ತಲುಪಿಸಲು ಸ್ಟಾರ್ ಸುವರ್ಣ ಮುಂದಾಗಿದೆ. ಹೆಚ್ಚೆಚ್ಚು ಹೊಸ ಸಿನಿಮಾಗಳನ್ನು ಖರೀದಿಸಿದೆ. ಇದೀಗ 'ಓಲ್ಡ್ ಮಾಂಕ್' ಕೂಡ ಮೊದಲ ಖಾತೆಯನ್ನು ಸ್ಟಾರ್ ಸುವರ್ಣ ತೆರೆದಿದೆ. ಯುಗಾದಿ ಹಬ್ಬ ಅಂದರೆ ಏಪ್ರಿಲ್ 3 ರಂದು ಸ್ಟಾರ್ ಸುವರ್ಣದಲ್ಲಿ 'ಓಲ್ಡ್ ಮಾಂಕ್' ವರ್ಲ್ಡ್‌ ಪ್ರೀಮಿಯರ್ ಆಗಲಿದೆ.

ಮನೆಯಲ್ಲೇ ಮನರಂಜನೆಯ ಕಿಕ್ಕು..!

ಮನೆಯಲ್ಲೇ ಮನರಂಜನೆಯ ಕಿಕ್ಕು..!

ಕೆಲವೊಂದು ಸಿನಿಮಾಗಳು ರಿಲೀಸ್ ಗೂ ಮೊದಲೇ ಸೇಲ್ ಆದರೆ ಇನ್ನು ಕೆಲವೊಂದಿಷ್ಟು ಸಿನಿಮಾಗಳು ರಿಲೀಸ್ ಆದ ಮೇಲೆ ತಮ್ಮ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಳ್ಳುತ್ತವೆ. ಅದರಲ್ಲಿ 'ಓಲ್ಡ್ ಮಾಂಕ್' ಸಿನಿಮಾ ಕೂಡ ಒಂದು. ಪ್ರದೀಪ್ ಶರ್ಮಾ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸಂತೋಷ್ ನಂದಕುಮಾರ್, ಪ್ರಸನ್ನ ವಿ ಎಂ ಹಾಗೂ ಶ್ರೀನಿ ಕಥೆ ಬರೆದಿದ್ದಾರೆ. ಶ್ರೀಶಾ ಕುಡುವಳ್ಳಿ ಕ್ಯಾಮರಾ ವರ್ಕ್, ಸೌರಭ್ ವೈಭವ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿದೆ. ಶ್ರೀನಿ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. 'ಓಲ್ಡ್ ಮಾಂಕ್‌' ಸಿನಿಮಾ ಸ್ಟಾರ್ ಸುವರ್ಣದಲ್ಲಿ ಏಪ್ರಿಲ್ 3, ಭಾನುವಾರ ಮಧ್ಯಾಹ್ನ 12ಗಂಟೆಗೆ ಇಡಿ ಕುಟುಂಬಕ್ಕೆ ಕಾಮಿಡಿ ಕಚಗುಳಿಯಿಡಲು ಟಿವಿ ಪರದೆ ಮೇಲೆ ಬರಲಿದೆ.

More from Filmibeat

English summary
Star Suvarna world television show Kannada movie Old Monk. Here is the details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X