Mothers Day: ಸ್ಟಾರ್ ಸುವರ್ಣದಲ್ಲಿ ಅಮ್ಮಂದಿರಿಗಾಗಿ 'ಅಮ್ಮ' ಕಾರ್ಯಕ್ರಮ: ತಾರೆಯರ ಸಂಭ್ರಮ!

By ಎಸ್ ಸುಮಂತ್

ಒಂದು ಹೆಣ್ಣಿಗೆ ತಾಯಿಯ ಕಷ್ಟ ಗೊತ್ತಾಗಬೇಕು ಎಂದರೆ ಆಕೆ ತಾಯಿಯಾಗಬೇಕು. ಆಗ ತನ್ನ ಹೆತ್ತ ತಾಯಿಯ ಕಷ್ಟ ಏನು ಎಂಬುದು ಗೊತ್ತಾಗುತ್ತೆ ಎಂಬುದು ಗ್ರಾಮೀಣ ಭಾಗದಲ್ಲಿ ಸರ್ವೇ ಸಾಮಾನ್ಯವಾಗಿ ಬಳಕೆ ಮಾಡುವ ಮಾತು. ಯಾಕಂದ್ರೆ, ಹೆತ್ತ ತಾಯಿ ಮಕ್ಕಳಿಗೆ ಯಾವುದೇ ಕಷ್ಟ ಬಾರದ ಹಾಗೇ ಬೆಳೆಸುತ್ತಾಳೆ. ತನ್ನೊಡಲು ಬೆಂದರು ಮಕ್ಕಳ ಒಡಲನ್ನು ತುಂಬಿಸುತ್ತಾಳೆ. ಸುಖದ ನೆರಳಲ್ಲಿ ಬೆಳೆದ ಮಕ್ಕಳಿಗೆ ತಾಯಿಯ ಬಿಸಿಲ ಬೇಗೆ ಅಷ್ಟಾಗಿ ತಿಳಿಯುವುದೇ ಇಲ್ಲ. ಅದರಲ್ಲೂ ತಾಯಿಯನ್ನು ಕಾಡುವ ಹೆಣ್ಣು ಮಕ್ಕಳಿಗೆ ಈ ಮಾತನ್ನು ಹೇಳುತ್ತಾರೆ. ತಾಯಂದಿರ ದಿನ ಹತ್ತಿರವಾಗುತ್ತಿದೆ. ಹೆತ್ತವಳಿಗಾಗಿ ಆ ದಿನ ಮೀಸಲಿಡುವುದು ಆಕೆಗೆ ಕೊಡುವ ದೊಡ್ಡ ಉಡುಗೊರೆ, ಗೌರವ. ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿ ಒಂದಷ್ಟು ವಿಶೇಷ ಕಾರ್ಯಕ್ರಮಗಳನ್ನು ತಂದಿದೆ.

'ಅಮ್ಮ' ಎಂದರೆ ಏನೋ ಹರುಷವೂ.. ಈ ಮಾತು ಸದಾ ಕಾಲಕ್ಕೂ ಸಲ್ಲುತ್ತದೆ. ಪ್ರತಿ ದಿನವೂ ತಾಯಂದಿರ ದಿನವೇ. ತಾಯಂದಿರಿಗಾಗಿ ಬದುಕುವ ದಿನವೇ. ಆದರೂ, ಮೇ 8 ರಂದು ಮಾತ್ರ ತಾಯಂದಿರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಕ್ಕಳು ಅಂದು ತಾಯಂದಿರಿಗಾಗಿ ವಿಶೇಷ ಗಿಫ್ಟ್ ಕೊಟ್ಟು ಶುಭಕೋರುತ್ತಾರೆ. ಇಂಥ ಒಂದು ದಿನಕ್ಕೆ ಸ್ಟಾರ್ ಸುವರ್ಣ ವೇದಿಕೆ ಸ್ಪೆಷಲ್ ಆಗಿ ಸಿದ್ಧತೆ ನಡೆಸಿದೆ. ಅದರ ಝಲಕ್ ಈಗಾಗಲೇ ಓಡಾಡುತ್ತಿದೆ.

ಅಮ್ಮಂದಿರ ದಿನಕ್ಕೆ ವಾರದ ಮೊದಲೇ ಸಿದ್ಧತೆ

ಅಮ್ಮಂದಿರ ದಿನಕ್ಕೆ ವಾರದ ಮೊದಲೇ ಸಿದ್ಧತೆ

ವಾರಪೂರ್ತಿ ಧಾರಾವಾಹಿ, ರಿಯಾಲಿಟಿ ಶೋ, ಸಿನಿಮಾ ಅಂತ ಮನರಂಜನೆ ನೀಡುವ ತಾಣ ಸ್ಟಾರ್ ಸುವರ್ಣ ವಾಹಿನಿ. ಆದರೆ ಆಗಾಗ ಬರುವ ಸ್ಪೆಷಲ್ ದಿನಗಳಿಗೂ ಒಂದಷ್ಟು ಹೆಚ್ಚು ಮನರಂಜನೆ ನೀಡುವಲ್ಲಿ ಹಿಂದೆ ಸರಿಯುವುದಿಲ್ಲ. ಹಬ್ಬ, ದಿನಾಚರಣೆಗಳಿಗೆ ಸಮಯವನ್ನು ಹೆಚ್ಚಾಗಿಯೇ ಮೀಸಲಿಡುತ್ತಾರೆ. ಅದರಂತೆ ಮನರಂಜನೆಯ ಮಹಾಪೂರವನ್ನು ನೀಡುತ್ತದೆ. ತಾಯಂದಿರ ದಿನ ಬರುತ್ತಿದೆ ಎಂದಾಗಲೇ ಸ್ಟಾರ್ ಸುವರ್ಣ ವೇದಿಕೆ ಕಾರ್ಯಕ್ರಮಕ್ಕೆ ಸಜ್ಜಾಗಿತ್ತು. ಹಾಗಂತ ಇದು ಒಂದು ದಿನದ ಸಂಭ್ರಮವಲ್ಲ. ಸತತ ಏಳು ದಿನಗಳ ಕಾಲ ಮನರಂಜನೆಯನ್ನು ನೀಡಿದೆ. ನಾನಾ ಕ್ಷೇತ್ರದಲ್ಲಿನ ಕುಟುಂಬವನ್ನು ವೇದಿಕೆಗೆ ಕರೆತಂದಿದೆ. ಅವರ ಮಕ್ಕಳನ್ನು ಕರೆತಂದಿದೆ. ಸೂಪರ್ ಸ್ಟಾರ್ ವೇದಿಕೆಯಲ್ಲಿ 2ರಿಂದ 7ರ ತನಕ ವಿಶೇಷ ದಿನವನ್ನಾಗಿ ಆಚರಣೆ ಮಾಡಿದ್ದಾರೆ‌.

ಮಕ್ಕಳ ಮುಂದೆ ಪೋಷಕರ ಮಸ್ತಿ

ಮಕ್ಕಳ ಮುಂದೆ ಪೋಷಕರ ಮಸ್ತಿ

ಮಕ್ಕಳನ್ನು ಹೆಚ್ಚಾಗಿ ಪೋಷಿಸುವುದು ತಾಯಿ. ತಂದೆಗಿಂತ ಒಂದು ಹತ್ತು ಪಟ್ಟು ಹೆಚ್ಚಾಗಿರುವುದು ತಾಯಿಯದ್ದೆ ಪಾತ್ರ. ಹೀಗಾಗಿ ತಾಯಿಯೇ ಮಕ್ಕಳಿಗೆ ಮೊದಲ ಶಿಕ್ಷಕಿ. ತನ್ನ ಕನಸೆಲ್ಲವನ್ನು ಮಕ್ಕಳಲ್ಲಿ ಕಾಣುವ ಮಹಾತಾಯಿ ಹಾಡು, ಡ್ಯಾನ್ಸ್, ಪಾಠ ಎಲ್ಲವನ್ನು ಮನೆಯಲ್ಲಿ ಬೇಸಿಕ್ ಆಗಿ ಹೇಳಿಕೊಡುತ್ತಾಳೆ. ಆದರೆ ಆಕೆ ಎಲ್ಲರೆದುರು ಮನಸ್ಸು ಬಿಚ್ಚಿ ವೇದಿಕೆಯಲ್ಲಿ ಕುಣಿದಿರುತ್ತಾಳೋ ಇಲ್ಲವೋ. ಆದರೆ ತನ್ನ ಮಕ್ಕಳಿಂದ ದೊಡ್ಡ ವೇದಿಕೆಯಲ್ಲಿ ಗಂಡ ಹೆಂಡತಿ ಡ್ಯಾನ್ಸ್ ಮಾಡುವಂತ ಅದೃಷ್ಟ ತಂದಿದ್ದಾರೆ. ಆ ವೇದಿಕೆ ಕಲ್ಪಿಸಿಕೊಟ್ಟಿರುವುದು ಸ್ಟಾರ್ ಸುವರ್ಣ ವೇದಿಕೆ. ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ವಾರಪೂರ್ತಿ ಅಮ್ಮ-ಮಕ್ಕಳದ್ದೇ ಕಾರುಬಾರು. ಕುಣಿತ, ಹಾಡು, ನಲಿ ಇಷ್ಟೇ. ಮನರಂಜನೆಯ ಜೊತೆಗೆ ಒಂದಷ್ಟು ವಿಚಾರಗಳು ಸೆಳೆಯುತ್ತವೆ. ತನ್ನನ್ನು ತನ್ನ ತಾಯಿ ಹೇಗೆ ಸಾಕಿದಳು, ಆಕೆಗಿದ್ದ ಕಷ್ಟಗಳೇನು..? ಈಗ ತನ್ನ ಮಗಳನ್ನು ತಾಯಿಯಾಗಿ ಆ ಮಗಳು ಹೇಗೆ ಸಲಹುತ್ತಿದ್ದಾಳೆ ಎಂಬ ಕಥೆಗಳು ನೋಡುಗರನ್ನು ಕಣ್ಣೀರಾಗಿಸುತ್ತಿದೆ.

'ಅಮ್ಮ' ವೇದಿಕೆಯಲ್ಲಿ ಶರಣ್, ಭವ್ಯ

'ಅಮ್ಮ‌' ಎಂಬ ಹೆಸರಿನಲ್ಲಿಯೇ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಅದು ಮಾರ್ಚ್ 8 ರಂದು ಪ್ರಸಾರವಾಗಲಿದೆ. 2-7 ಸೂಪರ್ ಸ್ಟಾರ್‌ನಲ್ಲಿ ಅಮ್ಮಂದಿರ ಗುಣಗಾನವಾದರೆ ಮಾರ್ಚ್ 8 ಅಮ್ಮನ ಆಗಮನವಾಗುತ್ತದೆ. ಈ ಕಾರ್ಯಕ್ರಮಕ್ಕೆ ಭವ್ಯ, ಶರಣ್, ಸಿಂಪಲ್ ಸುನಿಯನ್ನು ಕರೆಸಿ, ಸಿನಿಮಾ ಪ್ರಮೋಷನ್ ಜೊತೆಗೆ ಒಂದಷ್ಟು ಫನ್ನಿ ಆಟ ಆಡಿಸಿದ್ದಾರೆ. ಸ್ಟಾರ್ ಸುವರ್ಣ ತಾರೆಯರ ಅಮ್ಮ‌ ಮಕ್ಕಳನ್ನು ಅದಲು ಬದಲು ಮಾಡಿಸಿ ಕಂಡು ಹಿಡಿಯಲು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಗ್ ಸ್ಕ್ರೀನ್ ಸ್ಟಾರ್ ಗಳು ತಮ್ಮ ಮಕ್ಕಳ ಜೊತೆ ಎಂಜಾಯ್ ಮಾಡಿದ್ದಾರೆ. ಅದರಲ್ಲೂ ದಿಯಾ ನಟಿ ಖುಷಿ ಮಗಳು, ಏನೇ ಕೇಳಿದರು ಐ ಯಾಮ್ ಎ ಬಾರ್ಬಿ ಡಾಲ್ ಅಂತಾರಲ್ಲ ಅದೇ ಡೈಲಾಗ್ ಹೊಡೆದು ಮಡಿಲು ತುಂಬಾ ಚಾಕಲೇಟ್ ತುಂಬಿಸಿಕೊಂಡಿದ್ದಾಳೆ. ಬರೀ ಮನೆಯಲ್ಲಿ ಅಮ್ಮಂದಿರುವ ಮಾತ್ರ ಕೇಳುತ್ತಿದ್ದ ಮಕ್ಕಳ ಮಾತನ್ನು ಇಡೀ ರಾಜ್ಯದ ಜನತೆ ಕೇಳಿ ಫುಲ್ ಖುಷಿಯಾಗಿದ್ದಾರೆ. ಇನ್ನು ಅನುಪ್ರಭಾಕರ್ ಮತ್ತು ಗಾಯತ್ರಿ ಪ್ರಭಾಕರ್ ಕೂಡ ವೇದಿಕೆಯಲ್ಲಿ ಆ ದಿನಗಳನ್ನು ನೆನೆದು ಕಣ್ಣೀರಾಗಿದ್ದಾರೆ.

ಮಕ್ಕಳ ಜೊತೆ ಕುಣಿದು ಕುಪ್ಪಳಿಸಿದ ಪೋಷಕರು

ಮಕ್ಕಳ ಜೊತೆ ಕುಣಿದು ಕುಪ್ಪಳಿಸಿದ ಪೋಷಕರು

ಇನ್ನು ತಾಯಂದಿರ ದಿನಕ್ಕಾಗಿ ಸ್ಟಾರ್ ಸುವರ್ಣದಲ್ಲಿ ಹಲವು ಮಕ್ಕಳು ಮತ್ತು ಪೋಷಕರನ್ನು ಕರೆಸಿದ್ದಾರೆ. ಮಕ್ಕಳ ತೊದಲು ನುಡಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ನಮ್ಮ ಮನೆಯ ಮಕ್ಕಳು ಮಾತ್ರವಲ್ಲ, ಯಾವುದೇ ಮಕ್ಕಳ ಮಾತಿರಲಿ ಅದು ಆನಂದವನ್ನು ಉಂಟು ಮಾಡುವುದು ಸಹಜ. ಇದೀಗ ಸ್ಟಾರ್ ಸುವರ್ಣದಲ್ಲಿಯೂ ಅಂತದ್ದೇ ಮನರಂಜನೆ ವಾರಪೂರ್ತಿ ಸಿಗುತ್ತಿದೆ. ಮಕ್ಕಳೇ ಈ ಡ್ಯಾನ್ಸ್‌ಗೆ ಜಡ್ಜ್‌ಗಳಾಗಿದ್ದಾರೆ.‌ ಮಕ್ಕಳ ಎದುರು ಅಮ್ಮ ಅಪ್ಪ ಡ್ಯಾನ್ಸ್ ಮಾಡಬೇಕು. ಆ ಒಂದು ಕಾಂಪಿಟೇಷನ್‌ನಲ್ಲಿ ಮಕ್ಕಳಿಗೆ ಕಲಿಸಿಕೊಡುವ ಅಪ್ಪ-ಅಮ್ಮ ಸಖತ್ ಆಗಿಯೇ ಕುಣಿದು ಕುಪ್ಪಳಿಸಿದ್ದಾರೆ. ಈ ಮನರಂಜನೆಯನ್ನು ಅಮ್ಮಂದಿರ ದಿನದಂದು ಅಮ್ಮಂದಿರ ಜೊತೆಗೆ ಕುಳಿತು ವೀಕ್ಷಿಸಬಹುದಾಗಿದೆ.

More from Filmibeat

English summary
Star Suvarna Written Update On Mothers Day Weekend Program. Here is the details about Mothers day special Amma and super star program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X