Neenadenaa: ಅಳಿಯನ ಪರ ವಾದ ಮಂಡಿಸಲು ಬಂದ ಮಾವ, ತಂದೆಯನ್ನು ನೋಡಿದ ವೇದಾ ಶಾಕ್

By Poorva

ನೀನಾದೆ ನಾ ಧಾರಾವಾಹಿಯಲ್ಲಿ ಇತ್ತೀಚಿನ ದಿನಗಳಲ್ಲಿ ವೇದಾ ಹಲವು ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಾ ಇದ್ದಾಳೆ. ತನ್ನ ಗಂಡನನ್ನು ಹೇಗಾದರೂ ಮಾಡಿ ದುಷ್ಟರ ಕೈಯಿಂದ ಕಾಪಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಮನೆಯಲ್ಲಿ ತನ್ನ ಮಾವನನ್ನು ಬಿಟ್ಟರೆ ಬೇರೆ ಯಾರಿಗೆ ಕೂಡ ಈ ವಿಚಾರ ತಿಳಿಯದೇ ವೇದಾಗೆ ಮಾತ್ರ ಬಹಳ ಮಾನಸಿಕವಾಗಿ ಶಿಕ್ಷೆ ನೀಡುತ್ತಾ ಇದ್ದಾರೆ.

ಯಾರಿಗೂ ಏನೂ ಹೇಳದ ವೇದಾ ಬಹಳ ಅಳುತ್ತಾಳೆ. ವೇದಾಗೆ ಆಕೆಯ ಅತ್ತೆ ಜಯ ಎಲ್ಲಾದರೂ ವಿಕ್ರಂ ಜೈಲು ಪಾಲಾದರೆ ನಾನು ಮಾತ್ರ ಸುಮ್ಮನೆ ಇರುವುದಿಲ್ಲ. ನೀನು ಈ ಮನೆಯಲ್ಲಿ ಇರಕೂಡದು ಎಂದು ತಾಕೀತು ಮಾಡುತ್ತಾಳೆ. ಶೈಲೂ ಕೂಡ ಅದನ್ನೇ ಯೋಚನೆ ಮಾಡುತ್ತಾ ಇರುತ್ತಾಳೆ.

Star Suvarnas Kannada serial Neenadenaa written updated on 22th October

ವೇದಾಳನ್ನು ಮನೆಯಿಂದ ಓಡಿಸಿ ಬಿಟ್ಟರೆ ಎಲ್ಲವೂ ಸರಿಯಾಗುತ್ತದೆ. ಈ ಮನೆ ಮುಂಚಿನ ಹಾಗೆ ಇರುತ್ತದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಆ ಕಾರಣದಿಂದ ವೇದಾ ಮೇಲೆ ಕತ್ತಿ ಮಸೆಯುತ್ತಾ ಇರುತ್ತಾಳೆ. ಇನ್ನೂ ವೇದಾ ಮಾತ್ರ ತನ್ನ ಗಂಡನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದು ಅಳುತ್ತಾ ಇರುತ್ತಾಳೆ.

ವಿಕ್ರಂ ಕುಟುಂಬದ ಮೇಲೆ ಮಿನಿಸ್ಟರ್ ಕಣ್ಣು

ಇತ್ತ, ವಿಕ್ರಂ ಕುಟುಂಬದ ಮೇಲೆ ಮಿನಿಸ್ಟರ್ ಗೂಂಡಾಗಳ ಕಣ್ಣು ಬಿದ್ದಿದ್ದು ಪೆಟ್ರೋಲ್ ಬಾಂಬ್ ಹಾಕಲು ಎಲ್ಲಾ ಯೋಜನೆ ಮಾಡುತ್ತಾ ಇರುತ್ತಾರೆ. ಈ ಯೋಜನೆ ಪೊಲೀಸರಿಗೆ ತಿಳಿಯುತ್ತದೆ. ವಿಕ್ರಂ ಕುಟುಂಬಸ್ಥರನ್ನು ರಕ್ಷಣೆ ಮಾಡಲು ಧಾವಿಸಿ ಬರುತ್ತಾರೆ. ಇನ್ನೂ ವಿಕ್ರಂ ಮಾತ್ರ ಜೈಲಿನಲ್ಲಿ ಮುದ್ದೆ ಮುರಿಯುತ್ತ ಇರುತ್ತಾನೆ. ವೇದಾ ಯಾಕೆ ಹೀಗೆ ಮಾಡುತ್ತಾ ಇದ್ದಾಳೆ ಎನ್ನುವ ಅನುಮಾನ ಕೂಡ ಕಾಡುತ್ತಿದೆ.

ವೇದಾಗೆ ಸಮಾಧಾನ ಮಾಡಿದ ಮಾವ

ಇನ್ನೂ ವೇದಾಗೆ ಮಾತ್ರ ಆಕೆಯ ಮಾವ ಸಮಾಧಾನದ ಮಾತುಗಳನ್ನು ಆಡುತ್ತಾ ಇರುತ್ತಾರೆ. ಏನು ಆಗುವುದು ಇಲ್ಲ ವೇದಾ ಆ ಬಗ್ಗೆ ನೀನು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದೆಲ್ಲ ಹೇಳಿ ವೇದಾ ಮನಸಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಾನೆ. ಇನ್ನೂ ವೇದಾ ಮಾತ್ರ ಅಳುತ್ತಾ ಇರುತ್ತಾಳೆ. ತನ್ನ ಗಂಡನನ್ನು ಉಳಿಸಿಕೊಳ್ಳುವ ಸಲುವಾಗಿ ಇಷ್ಟೆಲ್ಲ ಮಾಡುತ್ತಿದ್ದೇನೆ .ಇದ್ಯಾವುದೂ ಮನೆಯವರಿಗೆ ಅರ್ಥ ಆಗುತ್ತಾ ಇಲ್ಲವಲ್ಲ ಎಂದು ಕಂಬನಿ ಮಿಡಿಯುತ್ತಾಳೆ.

Star Suvarnas Kannada serial Neenadenaa written updated on 22th October

ಕೋರ್ಟ್‌ನತ್ತ ಧಾವಿಸಿ ಬಂದ ವೇದಾ

ಇನ್ನೂ ಮಾವನ ಬಳಿ ಹೇಳಿ ಕೋರ್ಟ್‌ನತ್ತ ಸಾಕ್ಷಿ ಹೇಳಲು ಹೊರಟು ಹೋಗುತ್ತಾಳೆ. ಇನ್ನೂ ವೇದಾ ಸತ್ಯ ಮೂರ್ತಿ ಮಗಳು ಆ ಕಾರಣದಿಂದ ಆಗಿ ಸತ್ಯ ಮೂರ್ತಿಗಳು ನ್ಯಾಯ ಕೊಡಿಸಲು ತಾನೇ ವಕೀಲರಾಗಿ ಬರಬೇಕು ಅಂದುಕೊಂಡು ಇರುತ್ತಾರೆ. ಆ ಕಾರಣದಿಂದ ಜಡ್ಜ್ ಸ್ಥಾನದಿಂದ ಕೆಳಗೆ ಇಳಿದಿದ್ದರು. ಈ ವಿಚಾರ ವೇದಾ ಗೆ ಕೋರ್ಟ್ ಗೆ ಬಂದ ಬಳಿಕ ತಿಳಿಯುತ್ತದೆ.

ಇನ್ನೂ ಬೇರೆಯೊಬ್ಬ ಜಡ್ಜ್ ಸಾಹೇಬರು ಹೇಳುತ್ತಾರೆ. ವಿಕ್ರಂ ನಿಮ್ಮ ಕಡೆ ಯಾರಾದರೂ ಲಾಯರ್ ಇದ್ದಾರೆ ವಾದ ಮಂಡಿಸಲು ಎಂದಾಗ ವಿಕ್ರಂ ಗೆ ಎನು ಹೇಳಬೇಕು ತಿಳಿಯದೇ ಮೌನಕ್ಕೆ ಶರಣು ಆಗುತ್ತಾನೆ. ಅಷ್ಟರಲ್ಲಿ ವೇದಾ ತಂದೆ ನಾನೇ ಇದ್ದೇನೆ ಬಂದೆ ಜಡ್ಜ್ ಸಾಹೇಬರೇ ಎಂದು ಹೇಳುತ್ತಾರೆ. ಇನ್ನೂ ವೇದಾಗೆ ತನ್ನ ಗಂಡನ ಪರ ತಂದೆ ವಾದ ಮಂಡಿಸುತ್ತಾರೆ ಎಂದು ತಿಳಿದು ಶಾಕ್. ಆದರೆ ಜಯ ಮಾತ್ರ ತನ್ನ ಮಗ ಜೈಲಿನಿಂದ ಬಿಡುಗಡೆಯಾಗಿ ಬಂದೆ ಬರುತ್ತಾನೆ ಎಂದು ಕಾಯುತ್ತಿದ್ದಾರೆ.

More from Filmibeat

English summary
Neenadenaa serial written updated on 22th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X