twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಕಿಡ್ನಿ ಸಿಂಗಾಪುರದಲ್ಲಿ ಮಾರಾಟ !

    |

    tv9
    ಹೌದು. ಇಡೀ ಕರ್ನಾಟಕವೇ ನಿಬ್ಬೆರಗಾಗುವಂತ ವರದಿಯನ್ನು ಟಿವಿ9 ವರದಿ ಮಾಡಿದೆ. ಕನ್ನಡಿಗರ ಕಿಡ್ನಿಯನ್ನು ದೂರದ ಸಿಂಗಾಪುರ ನಗರಕ್ಕೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡುವ ಮಹಾನ್ ಕಿಡ್ನಿ ಕಳ್ಳರನ್ನು ತನ್ನ ಗುಪ್ತ ಕ್ಯಾಮೆರಾ ಕಾರ್ಯಾಚರಣೆಯ ಮೂಲಕ ವಾಹಿನಿ ಹೊರ ಹಾಕಿದೆ. ವಾಹಿನಿ ಶುಕ್ರವಾರದ (ಅ 28) ತನ್ನ ಬುಲೆಟಿನ್ ನಲ್ಲಿ ಇದನ್ನು ಪ್ರಸಾರ ಮಾಡಿದೆ.

    ರಾಮನಗರ ಮೂಲದ ಅತ್ತ ಯುವಕನೂ ಅಲ್ಲದ ಇತ್ತ ಇಳಿ ವಯಸಿನವನೂ ಅಲ್ಲದ ವ್ಯಕ್ತಿ ಈ ತಂಡಕ್ಕೆ ಕ್ಯಾಪ್ಟನ್, ಈತನ ಹೆಸರು ಮಹಾದೇವಯ್ಯ. ಈತನಿಗೆ ಮೂರು ಜನ ಸಹಚರರು. ಕನ್ನಡ ಬಿಟ್ಟರೆ ಬೇರೆ ಭಾಷೆ ಬರಲೊಲ್ಲದು. ಈ ತಂಡ ತಮ್ಮ ವ್ಯವಹಾರಕ್ಕೆ ಹೆಚ್ಚಾಗಿ ನಂಬಿ ಕೊಂಡಿರುವುದು ಹಳ್ಳಿಯ ಮುಗ್ದ ಜನರನ್ನು. ಮುಗ್ದ ಜನರನ್ನು ಯಾವ ರೀತಿ ಯಾಮಾರಿಸ ಬಹುದು ಎನ್ನುವುದರ ಬಗ್ಗೆ ತಂಡದ ಕ್ಯಾಪ್ಟನ್ ಬೇಕಾದರೆ ಒಂದು ಸೆಮಿನಾರ್ ನಡೆಸಬಲ್ಲ. ಮೋಸ ಹೋಗುವವರು ಇದ್ದರೆ ಮೋಸ ಮಾಡುವವರು ಇದ್ದೇ ಇರುತ್ತಾರೆ, ಅದು ಬೇರೆ ಪ್ರಶ್ತ್ನೆ.

    ಬಡತನ ಮತ್ತು ಹಣಕ್ಕಾಗಿ ಹಾತೊರೆಯುತ್ತಿರುವ ಕುಟುಂಬ ಈ ತಂಡದ ಮೊದಲ ಟಾರ್ಗೆಟ್. ಒಂದು ಕಿಡ್ನಿ ಮಾರಿದರೆ ನೀವೇನು ಸತ್ತು ಹೋಗಲ್ಲಾ ಎಂದು ನಂಬಿಸಿ ಬೆಂಗಳೂರಿಗೆ ಇಂತಹ ಆಮಿಷಕ್ಕೆ ಒಳಗಾದವರನ್ನು ಕರೆದು ಕೊಂಡು ಬರುತ್ತಾರೆ.

    ವೈದ್ಯರು ಕೇಳಿದರೆ ಬೀಡಿ, ಸಿಗರೆಟ್, ಡ್ರಿಂಕ್ಸ್ ಅಂದ್ರೆ ಏನಂತಾನೆ ಗೊತ್ತಿಲ್ಲ. ನನಗೆ ಯಾವ ರೀತಿಯ ಹವ್ಯಾಸ ಕೂಡಾ ಇಲ್ಲ ಎನ್ನ ಬೇಕು. ಇಲ್ಲದಿದ್ದರೆ ನಿನ್ನ ಕಿಡ್ನಿ ಮಾರಾಟ ಆಗಲ್ಲಾ ಅಥವಾ ಕಡಿಮೆ ದುಡ್ಡಿಗೆ ಕೊಡಬೇಕಾಗುತ್ತೆ ಎಂದು ತಪಾಸಣೆಗೆ ಮೊದಲೇ ತಂಡ ಎಚ್ಚರಿಸುತ್ತೆ.

    ಕಿಡ್ನಿ ತೆಗೆಯುವ ಸರ್ಜರಿಗೆ ನಿಮ್ಮನ್ನು ಸಿಂಗಾಪುರಿಗೆ ಕರ್ಕೊಂಡು ಹೋಗ್ತೀವಿ ಅಂದು ಬೆಂಗಳೂರಿನಲ್ಲೇ ಸಿಂಗಾಪುರ ತೋರಿಸುವ ಮಹಾನ್ ಕಿಲಾಡಿಗಳ ತಂಡ ಇದು. ಆಮಿಷಕ್ಕೆ ಒಳಗಾದವರು ಸ್ವಲ್ಪ ಹೆಬ್ಬೆಟ್ಟು ಗಳಾದರೆ ಇವರಿಗೆ ಭರ್ಜರಿ ಚಾನ್ಸ್. ನಿನ್ನ ಕಿಡ್ನಿ ಫೈಲ್ ಆಗಿದೆ ಎಂದು ನಂಬಿಸಿ ಸಾವಿರ ಲೆಕ್ಕಾಚಾರದಲ್ಲೇ ವ್ಯವಹಾರ ಮುಗಿಸಿ ಲಕ್ಷ ಲಕ್ಷ ಲಾಭ ಮಾಡ್ಕೊತಾರೆ.

    ನಿಮ್ಮ ಒಂದು ಕಿಡ್ನಿಯನ್ನು ಮಾರಾಟ ಮಾಡಿ ನಿಮ್ಮ ಕಷ್ಟವೂ ದೂರವಾಗುತ್ತೆ, ಕಿಡ್ನಿಯ ತುರ್ತು ಅವಶ್ಯಕತೆ ಇರುವವರಿಗೆ ಸಹಾಯನೂ ಆಗುತ್ತೆ, ನಿಮಗೆ ಮೂರು ಲಕ್ಷ ಕೊಡಿಸುತ್ತೇನೆ ಎಂದು ಸೆಂಟಿಮೆಂಟ್ ಡೈಲಾಗ್ ಹೊಡೆದು ಬೆಂಗಳೂರಿಗೆ ಕರೆದು ಕೊಂಡು ಬರುವ ಈ ತಂಡಕ್ಕೆ ಒಂದು ಕಿಡ್ನಿಯಿಂದ ಬರುವ ಕಮಿಷನ್ ಒಂದು ಲಕ್ಷ!!

    ಕಿಡ್ನಿಯನ್ನು ಸಿಂಗಾಪುರದಲ್ಲಿ ಯಾರಿಗೆ ಮಾರಾಟ ಮಾಡುತ್ತಿದ್ದಾರೆ.. ಇದರಲ್ಲಿ ಬೇರೆ ಯಾರ ಕೈವಾಡವಿದೆ ಎನ್ನುವ ಮಾಹಿತಿ ವಾಹಿನಿ ಕಲೆ ಹಾಕುವ ಸಮಯಕ್ಕೆ ಆ ಕಿಡ್ನಿ ಕಳ್ಳರಿಗೆ ಗುಪ್ತ ಕಾರ್ಯಾಚರಣೆಯ ಮಾಹಿತಿ ಸಿಗುತ್ತದೆ.. ತಮ್ಮ ಹೊಟ್ಟೆಯೊಳಗೆ ಕ್ಯಾಮೆರ ಇಟ್ಟುಕೊಂಡು ಈ ಗುಪ್ತ ಕಾರ್ಯಾಚರಣೆ ನಡೆಸಿದ ಟಿವಿ9 ತಂಡಕ್ಕೆ ಅಭಿನಂದನೆಗಳು.

    English summary
    Kidney tourism : Kannada tv channel TV9 sting operation expose deadly kidney racket in Karnataka. Organ thugs lure innocent people in the State only to steal kidneys which are later sold in Singapore.
    Saturday, October 29, 2011, 10:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X