11 ವರ್ಷಗಳ ದಾಂಪತ್ಯದಲ್ಲಿ ಬಿರುಕು? ದೂರವಾಗುತ್ತಾ ಖ್ಯಾತ ಕಿರುತೆರೆ ಜೋಡಿ? ಡಿವೋರ್ಸ್ ವದಂತಿಗೆ ಖಡಕ್ ಉತ್ತರ ನೀಡಿದ ನಟಿ

ಬಣ್ಣದ ಲೋಕದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ. ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಾರೆ.

ಮತ್ತೂ ಕೆಲವರು ತಮ್ಮ ಕುರಿತ ಈ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕುರಿತು ಸುಳ್ಳು ಸುದ್ದಿ ಹಬ್ಬಿಸುವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಉದಾಹರಣೆಗೆ ಅಂಕಿತಾ ಭಾರ್ಗವ್ ಅವರನ್ನೇ ತೆಗೆದುಕೊಳ್ಳಿ.

Stop The Nonsense Ankita Bhargava Destroys 11-Year Divorce Rumors With Karan Patel

ಹೌದು, ಅಂಕಿತಾ ಭಾರ್ಗವ್.. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ''ದೇಕೋ ಮಗರ್ ಪ್ಯಾರ್ ಸೆ''..''ಕೇಸರ್''.. ''ಕಸೌತಿ ಜಿಂದಗಿ ಕೆ''.. ''ಏಕ್ ರಿಶ್ತಾ ಐಸಾ ಭಿ'' ಹೀಗೆ ಹಲವಾರು ಧಾರಾವಾಹಿಯಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿರುವ ಅಂಕಿತಾ ಭಾರ್ಗವ್, ಸೋನಾಕ್ಷಿ ಸಿನ್ಹಾ ಅಭಿನಯದ ''ಅಕಿರಾ''ದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.

ಇನ್ನು ಇವರ ಗಂಡ ಕರಣ್ ಪಟೇಲ್ ಅವರದ್ದು ಕೂಡ ಕಿರುತೆರೆಯ ಖ್ಯಾತ ಹೆಸರು. ಹಲವರು ಇವರನ್ನು ಕಿರುತೆರೆಯ ಶಾರುಖ್ ಖಾನ್ ಎಂದು ಕೂಡ ಕರೆಯುತ್ತಾರೆ. ''ಯೆ ಹೈ ಮೊಹಬ್ಬತೆ'' ಮತ್ತು ''ಕಸೌತಿ ಜಿಂದಗಿ ಕೆ'' ಇವರ ಪ್ರಖ್ಯಾತ ಧಾರಾವಾಹಿಗಳು. ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿ ಕೂಡ ಕರಣ್ ಮಿಂಚಿದ್ದಾರೆ.

ಹೀಗೆ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಹಣ ಕೀರ್ತಿ ಯಶಸ್ಸು ಗಳಿಸಿದ ಇಬ್ಬರು ಪರಸ್ಪರ ಮೆಚ್ಚಿ ಮದುವೆಯಾಗಿ ಹನ್ನೊಂದು ವರ್ಷಗಳಾಗಿವೆ. ಇಬ್ಬರ ಪ್ರೇಮದ ಸಂಕೇತವಾಗಿ ಮಗಳು ಕೂಡ ಇದ್ದಾಳೆ. ಇಂಥಾ ಕರಣ್ ಪಟೇಲ್ ಮತ್ತು ಅಂಕಿತಾ ಭಾರ್ಗವ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ಇಬ್ಬರೂ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಕೂಡಾ ಗುಲ್ಲಾಗಿದೆ.ತಮ್ಮ ಬಗ್ಗೆ ಹಬ್ಬಿರುವ ಇದೇ ಸುದ್ದಿಯ ಕುರಿತು ಈಗ ಅಂಕಿತಾ ಮಾತನಾಡಿದ್ದಾರೆ. ಕಿಡಿ ಕಾರಿದ್ದಾರೆ.

Stop The Nonsense Ankita Bhargava Destroys 11-Year Divorce Rumors With Karan Patel

''ಟೆಲಿ ಮಸಾಲಾ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಂಕಿತಾ ಭಾರ್ಗವ್ ಅಂತೆ-ಕಂತೆಯ ಸುದ್ದಿಗಳಿಂದ ನಮ್ಮ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ನಾನು ಮತ್ತು ಕರಣ್ ಮದುವೆಯ ಬಂಧನಕ್ಕೊಳಗಾಗಿ ಹನ್ನೊಂದು ವರ್ಷಗಳಾಗಿವೆ. ಮದುವೆಯ ಮುನ್ನ ಕೂಡ ನಮ್ಮನ್ನು ಟ್ರೋಲ್ ಮಾಡಲಾಗಿತ್ತು ಎಂದು ಹೇಳಿರುವ ಅಂಕಿತಾ, ಕೊರೊನಾ ನಂತರ ನಮ್ಮ ಸುತ್ತ ಮುತ್ತ ಇರುವವರ ಸಂಖ್ಯೆ ಕಡಿಮೆಯಾಗಿದೆ. ನಾವು ಈಗ ಮೊದಲಿನಂತೆ ಪಾರ್ಟಿಗಳನ್ನು ಮಾಡುವುದಿಲ್ಲ, ಅದರರ್ಥ ನಮ್ಮ ಸಂಬಂಧದಲ್ಲಿ ಬಿರುಕು ಮೂಡಿದೆ ಎಂದಲ್ಲ ಎಂದು ಹೇಳಿದ್ದಾರೆ.

ನಾವು ಇಂದಿಗೂ ಒಂದಾಗಿದ್ದೇವೆ ಮತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿರುವ ಅಂಕಿತಾ, ಈ ಡಿಜಿಟಲ್ ಗದ್ದಲದಿಂದ ನಾವು ದೂರವಿರುವುದನ್ನು ಕಲಿತಿದ್ದೇವೆ ಎಂದು ಹೇಳಿದ್ದಾರೆ. ಪ್ರತಿಯೊಂದನ್ನೂ ಸಾರ್ವಜನಿಕವಾಗಿ ಪ್ರದರ್ಶಿಸುವುದಕ್ಕಿಂತ, ವೈಯಕ್ತಿಕ ಬದುಕಿನಲ್ಲಿ ನೆಮ್ಮದಿಯಿಂದ ಇರುವುದು ಮುಖ್ಯ ಎಂದು ಹೇಳಿದ್ದಾರೆ. ಬೇರೆಯವರು ಮಾತನಾಡ್ತಾರೆ, ಹಾಗಂಥ ನಾನು ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿ ನನ್ನ ಪಾಪಗನ್ನು ಹೆಚ್ಚಿಸಿಕೊಳ್ಳಬೇಕಾ ಎಂದು ಹೇಳಿದ್ದಾರೆ. ಈ ಮೂಲಕ ವಿಚ್ಚೇದನದ ವದಂತಿಗೆ ಫುಲ್ ಸ್ಟಾಫ್ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ.

ಅಂದ್ಹಾಗೇ ಕರಣ್ ಪಟೇಲ್ ಮತ್ತು ಅಂಕಿತಾ ಭಾರ್ಗವ ಅವರದ್ದು ಲವ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಎನ್ನುವುದು ವಿಶೇಷ. ಕರಣ್ ಅಭಿನಯದ ಖ್ಯಾತ ಧಾರಾವಾಹಿಗಳಲ್ಲಿ ಒಂದಾದ 'ಯೆ ಹೈ ಮೊಹಬ್ಬತೇಯಲ್ಲಿ ಅಂಕಿತಾ ಅವರ ತಂದೆ ಅಭಯ್ ಭಾರ್ಗವ ಕೂಡ ಇದ್ದರು. ಈ ಧಾರಾವಾಹಿಯಲ್ಲಿ ಇವರದ್ದು ಕರಣ್ ಅವರ ಮಾವನ ಪಾತ್ರವಾಗಿತ್ತು. ಈ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಕರಣ್ ವ್ಯಕ್ತಿತ್ವಕ್ಕೆ ಮಾರು ಹೋದ ಅಭಯ ಭಾರ್ಗವ ತಮ್ಮ ಮಗಳ ಜೊತೆ ಮದುವೆಯಾಗುವ ಪ್ರಸ್ತಾವನೆ ಇಟ್ಟಿದ್ದರು. ಈ ಮೂಲಕ ರೀಲ್ ಮಾವ ರಿಯಲ್‌ನಲ್ಲಿ ಕೂಡ ಮಾವ ಆದರು.

More from Filmibeat

English summary
"Stop the nonsense!" Ankita Bhargava slams reports of a split from husband Karan Patel after 11 years. From hiring divorce lawyers to living apart—Ankita shuts down every viral claim with a savage reality check. Read the full story!
Read more about: ಟಿವಿ rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X