ನಾಗಾರ್ಜುನ ಮನೆ ಮುಂದೆ ಹೈ ಡ್ರಾಮಾ: ಬಿಗ್ ಬಾಸ್ ಆರಂಭ ಅನುಮಾನ.!

ತೆಲುಗು ಬಿಗ್ ಬಾಸ್ ಮೂರನೇ ಆವೃತ್ತಿ ಇದೇ ಜುಲೈ 21ರಿಂದ ಆರಂಭವಾಗುತ್ತಿದೆ. ಆರಂಭಕ್ಕೂ ಮುನ್ನಾ ಬರಿ ವಿವಾದಗಳಿಂದಲೇ ಭಾರಿ ಸುದ್ದಿ ಮಾಡುತ್ತಿರುವ ಬಿಗ್ ಬಾಸ್ ಟೆಲಿಕಾಸ್ಟ್ ಆಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಬಿಗ್ ಬಾಸ್ ವಿರುದ್ಧ ದಿನೇ ದಿನೇ ಒಂದಲ್ಲ ಒಂದು ವಿರೋಧ ವ್ಯಕ್ತವಾಗುತ್ತಲೇ ಇದೆ.

ಟಿವಿ ನಿರೂಪಕಿ ಶ್ವೇತಾ ರೆಡ್ಡಿ ಬಿಗ್ ಬಾಸ್ ಆಯೋಜಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅದೇ ರೀತಿ ನಟಿ ಗಾಯಿತ್ರಿ ಗುಪ್ತಾ ಕೂಡ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಈ ಶೋ ಕೆಟ್ಟ ಪರಿಣಾಮ ಬೀರಿದೆ ಎಂದು ಹಲವರು ವಿರೋಧಿಸುತ್ತಿದ್ದಾರೆ.

ಚೊಚ್ಚಲ ಬಾರಿಗೆ ಬಿಗ್ ಬಾಸ್ ನಿರೂಪಣೆ ಮಾಡಲಿರುವ ನಾಗಾರ್ಜುನ ಅವರಿಗೆ ಈ ಬಿಸಿ ತಟ್ಟಿದೆ. ಯಾವುದೇ ಕಾರಣಕ್ಕೂ ಬಿಗ್ ಬಾಸ್ ಪ್ರಾರಂಭಿಸಬಾರದು, ಈ ಶೋನಿಂದ ನಾಗಾರ್ಜುನ ಅವರು ಹೊರಬರಬೇಕು ಎಂದು ಅವರ ಮನೆ ಮುಂದೆ ಪ್ರತಿಭಟನೆ ಮಾಡಿದ ಘಟನೆ ಕೂಡ ನಡೆದಿದೆ. ಏನಿದು ವಿವಾದ? ಮುಂದೆ ಓದಿ....

ವಿದ್ಯಾರ್ಥಿಗಳು ಪ್ರತಿಭಟನೆ

ವಿದ್ಯಾರ್ಥಿಗಳು ಪ್ರತಿಭಟನೆ

ಬಿಗ್ ಬಾಸ್ ಶೋ ವಿರೋಧಿಸಿ ಯೂನಿವರ್ಸಿಟಿ ವಿದ್ಯಾರ್ಥಿ ಸಮೂಹವೂ ನಾಗಾರ್ಜುನ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ನಾಗಾರ್ಜುನ ಅವರು ಬಿಗ್ ಬಾಸ್ ಶೋ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

ನಾಗಾರ್ಜುನ ಮಾತನಾಡಬೇಕು

ನಾಗಾರ್ಜುನ ಮಾತನಾಡಬೇಕು

ಬಿಗ್ ಬಾಸ್ ತೆಲುಗು ಆವೃತ್ತಿಯಲ್ಲಿ ಇಷ್ಟೆಲ್ಲಾ ವಿವಾದಗಳು ಆಗುತ್ತಿದ್ದರೂ ನಾಗಾರ್ಜುನ ಅವರು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಅವರಿಗೂ ಜವಾಬ್ದಾರಿ ಇದೆ, ಅವರ ನಿರ್ಣಯವೂ ಮುಖ್ಯವಾಗಿದೆ. ಹಾಗಾಗಿ, ನಾಗಾರ್ಜುನ ಅವರು ಮಾತನಾಡಲೇ ಬೇಕು, ಈ ಶೋನಿಂದ ಹೊರಬರುವುದಾಗಿ ಹೇಳಲೇಬೇಕು ಎಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದಾರೆ.

ಆಂಕರ್ ಶ್ವೇತಾ ರೆಡ್ಡಿ ಆರೋಪವೇನು?

ಆಂಕರ್ ಶ್ವೇತಾ ರೆಡ್ಡಿ ಆರೋಪವೇನು?

ಬಿಗ್ ಬಾಸ್ ಶೋಗೆ ಆಯ್ಕೆ ಮಾಡುವ ವೇಳೆ ಆಯೋಜಕರ ತಂಡದ ಕೆಲವರು ಶ್ವೇತಾ ರೆಡ್ಡಿ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ. 'ನಿಮ್ಮನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಿದ್ರೆ, ನೀವು ಬಿಗ್ ಬಾಸ್ ಸಂತೃಪ್ತಿ ಪಡಿಸುತ್ತೀರಾ' ಅಂತ ಕೇಳುವ ಮೂಲಕ ಪರೋಕ್ಷವಾಗಿ ಕಮಿಟ್ ಮೆಂಟ್ ಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಗಾಯಿತ್ರಿ ಗುಪ್ತಾ ಅದೇ ಆರೋಪ

ಗಾಯಿತ್ರಿ ಗುಪ್ತಾ ಅದೇ ಆರೋಪ

ಆಂಕರ್ ಶ್ವೇತಾ ರೆಡ್ಡಿ ಮಾಡಿದ ಆರೋಪಕ್ಕೆ ಬೆಂಬಲ ನೀಡಿದ ಗಾಯಿತ್ರಿ ಗುಪ್ತಾ ಅವರು ಕೂಡ ಆ ಆರೋಪವನ್ನ ಸಮರ್ಥಿಸಿಕೊಂಡಿದ್ದಾರೆ. ತನಗೂ ಅಂತಹ ಅನುಭವ ಆಗಿದೆ ಎಂದಿದ್ದಾರೆ. 'ಬಿಗ್ ಬಾಸ್ ಮನೆಯಲ್ಲಿ ನೀವು ನೂರು ದಿನ ಲೈಂಗಿಕತೆ ಇಲ್ಲದೇ ಇರಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ ಅಂತ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ಇಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಗ್ ಬಾಸ್ ಆರಂಭವಾಗುತ್ತಾ?

ಬಿಗ್ ಬಾಸ್ ಆರಂಭವಾಗುತ್ತಾ?

ಇಷ್ಟೆಲ್ಲಾ ಬೆಳವಣಿಗೆ, ವಿವಾದಗಳ ನಡುವೆ ತೆಲುಗು ಬಿಗ್ ಬಾಸ್ ಶೋ ಆರಂಭವಾಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಯಾಕಂದ್ರೆ, ಇಬ್ಬರು ಯುವತಿಯರು ಬಹಿರಂಗವಾಗಿ ಬಿಗ್ ಬಾಸ್ ಆಯೋಜಕರ ಮೇಲೆ ಆರೋಪ ಮಾಡಿದ್ದು, ಇದು ಅಸಭ್ಯ ಶೋ ಎನ್ನುತ್ತಿದ್ದಾರೆ. ಈ ಶೋ ಪ್ರಸಾರ ಮಾಡಿದ್ರೆ ಜನಸಾಮನ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಜುಲೈ 21ರಂದು ಶನಿವಾರ ಬಿಗ್ ಬಾಸ್ ಶೋ ಅಧಿಕೃತವಾಗಿ ಪ್ರಸಾರವಾಗಲಿದೆ.

More from Filmibeat

English summary
Telugu superstar akkineni nagarjuna hosting bigg boss session 3. anchor swetha reddy and actress gayatri gupta allegation on bigg boss. because of this controversy Students opposing bigg boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X