»   » ಸ್ಟೈಲಿಶ್ ಲುಕ್ ನಲ್ಲಿ ಮಿಂಚಿರುವ 'ಸರಿಗಮಪ' ಸ್ಪರ್ಧಿ ಸುಹಾನಾ ಸೈಯದ್

ಸ್ಟೈಲಿಶ್ ಲುಕ್ ನಲ್ಲಿ ಮಿಂಚಿರುವ 'ಸರಿಗಮಪ' ಸ್ಪರ್ಧಿ ಸುಹಾನಾ ಸೈಯದ್

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳು ವೀಕ್ಷಕರಿಗೆ ಬಹಳ ಇಷ್ಟ ಆಗಿದ್ದರು. ಅದರಲ್ಲಿಯೂ ಸುಹಾನಾ ಸೈಯದ್ ಹಾಡು ಅಂದರೆ ಎಲ್ಲರಿಗೂ ಸಖತ್ ಫೇವರಿಟ್ ಆಗಿತ್ತು.

ಉತ್ತರ ಕರ್ನಾಟಕದ ಕಲಿ ಸುನೀಲ್ ಗೆಲುವಿಗೆ ಕಾರಣ ಕೊಟ್ಟ ಅರ್ಜುನ್ ಜನ್ಯ

ಸುಹಾನಾ ಸೈಯದ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಹುಡುಗಿ. ಇಷ್ಟು ದಿನ ತಮ್ಮ ಹಾಡಿನ ಮೂಲಕ ಮನೆ ಮಾತಾಗಿದ್ದ ಈ ಹುಡುಗಿ ಈಗ ತಮ್ಮ ಸ್ಟೈಲಿಶ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Stylish pics of Sarigamapa Singer Suhana Syed

ಸುಹಾನಾ ಸೈಯದ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿದವರು ವಾವ್... ಅಂತ ಹೊಗಳುತ್ತಿದ್ದಾರೆ. ಬೈಕ್ ಓಡಿಸುವ ಸುಹಾನಾ ಫೋಟೋ ನೋಡಿದವರಿಗಂತೂ ಇದು ನಿಜಕ್ಕೂ ಸರಿಗಮಪ ಸುಹಾನಾ ನಾ.? ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ.

ಸಂದರ್ಶನ: ಜೀವನ ಮತ್ತು ಸ್ಪರ್ಧೆ.. ಎರಡರಲ್ಲೂ ಗೆದ್ದ ಮೆಹಬೂಬ್ ಸಾಬ್

Stylish pics of Sarigamapa Singer Suhana Syed

ಸರಿಗಮಪ ಕಾರ್ಯಕ್ರಮದ ಮೂಲಕ ಸುಹಾನಾ ದೊಡ್ಡ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅವರು ಹಾಡಿದ 'ಮುಕುಂದ ಮುರಾರಿ' ಹಾಡನ್ನು ಮರೆಯುವುದಕ್ಕೆ ಆಗಲ್ಲ. ಸರಿಗಮಪ ಕಾರ್ಯಕ್ರಮ ಶುರುವಿನಲ್ಲಿ ಸಖತ್ ಸುದ್ದಿ ಮಾಡಿದ್ದ ಸುಹಾನಾ ಸೈಯದ್ ಸೆಮಿ ಫೈನಲ್ ನಲ್ಲಿ ಎಲಿಮಿನೇಟ್ ಆದರು.

English summary
Check out the Stylish pics of Zee Kannada channel's 'Sarigamapa Season 13' contestant Suhana Syed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada