For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡ ವಾಹಿನಿಯಲ್ಲಿ ಶುರು ಆಗಲಿದೆ 'ಸುಬ್ಬಲಕ್ಷ್ಮಿ ಸಂಸಾರ'

  By Harshitha
  |

  ಹಳ್ಳಿ ಸೊಗಡಿನ ಮುಗ್ಧ ಹೆಣ್ಣು ಮಗಳ ಸಂಸಾರದ ಸುತ್ತ ಸಾಗುವ ಕಥೆ 'ಸುಬ್ಬಲಕ್ಷ್ಮಿ ಸಂಸಾರ'. ಪತಿಯೇ ಪರದೈವ ಎಂದು ಪ್ರೀತಿಸುವಾಗ, ಪತಿ ಮತ್ತೊಬ್ಬಳ ಮೋಹದ ಪಾಶಕ್ಕೆ ಬಿದ್ದು ದಾಸನಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರುವಳೇ.?

  ಸಂಸಾರವೇ ಸರ್ವಸ್ವವೆಂದುಕೊಂಡಾಗ ಗೂಡಿನಂತ ಸಂಸಾರವ ಮತ್ತೊಬ್ಬಳು ಕೆಡವುವಳೇ.? ಮುಗ್ಧತೆಯ ಮುದ್ದುತನದ ಸುಬ್ಬಲಕ್ಷ್ಮಿ ಇದೆಲ್ಲವನ್ನು ಎದುರಿಸಿ ನಿಲ್ಲುವಳೇ, ಗೆಲ್ಲುವಳೇ.? ಎಂಬ ಕುತೂಹಲದ ಕಥಾಹಂದರದೊಂದಿಗೆ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿದೆ ಹೊಸ ಧಾರಾವಾಹಿ 'ಸುಬ್ಬಲಕ್ಷ್ಮಿ ಸಂಸಾರ'.

  'ಸುಬ್ಬಲಕ್ಷ್ಮಿ'ಯಾಗಿ ದೀಪಾ ಭಾಸ್ಕರ್

  'ಸುಬ್ಬಲಕ್ಷ್ಮಿ'ಯಾಗಿ ದೀಪಾ ಭಾಸ್ಕರ್

  ಈ ಧಾರಾವಾಹಿಯಲ್ಲಿ ಸುಬ್ಬಲಕ್ಷ್ಮಿ ಆಗಿ ರಂಗಭೂಮಿ ಹಿನ್ನಲೆಯುಳ್ಳ, ಕಂಠದಾನ ಕಲಾವಿದೆಯಾಗಿ ಜನಪ್ರಿಯರಾಗಿರುವ ದೀಪಾ ಭಾಸ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸುಬ್ಬಲಕ್ಷ್ಮಿಯ ಗಂಡನಾಗಿ ಭವಾನಿ ಸಿಂಗ್ ಅಭಿನಯಿಸುತ್ತಿದ್ದಾರೆ.

  ಮುಖ್ಯಭೂಮಿಕೆಯಲ್ಲಿ ಯಾರೆಲ್ಲಾ ಇದ್ದಾರೆ.?

  ಮುಖ್ಯಭೂಮಿಕೆಯಲ್ಲಿ ಯಾರೆಲ್ಲಾ ಇದ್ದಾರೆ.?

  ಇನ್ನೂ ಮುಖ್ಯ ಭೂಮಿಕೆಯಲ್ಲಿ ಮುಖ್ಯಮಂತ್ರಿ ಚಂದ್ರು, ರಮೇಶ್ ಭಟ್, ಗಿರಿಜಾ ಲೋಕೇಶ್, ಸಮೀಕ್ಷಾ ಇದ್ದಾರೆ.

  ಮಹಿಳಾ ನಿರ್ದೇಶಕರು

  ಮಹಿಳಾ ನಿರ್ದೇಶಕರು

  ಈಗಾಗಲೇ ಐನೂರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದ 'ಗೃಹಲಕ್ಷ್ಮಿ' ಹಾಗೂ ಐನೂರು ಸಂಚಿಕೆಗಳತ್ತ ದಾಪುಗಾಲು ಹಾಕುತ್ತಿರುವ 'ಗಂಗಾ' ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿರುವ ಸ್ವಪ್ನಾಕೃಷ್ಣ 'ಸುಬ್ಬುಲಕ್ಷ್ಮಿ ಸಂಸಾರ' ಸೀರಿಯಲ್ ನ ಡೈರೆಕ್ಟರ್.

  RRR ಪ್ರೊಡಕ್ಷನ್ಸ್ ರವರ ಹ್ಯಾಟ್ರಿಕ್ ನಿರ್ಮಾಣ

  RRR ಪ್ರೊಡಕ್ಷನ್ಸ್ ರವರ ಹ್ಯಾಟ್ರಿಕ್ ನಿರ್ಮಾಣ

  ಈಗಾಗಲೇ ಎರಡು ಯಶಸ್ವಿ ಧಾರಾವಾಹಿಗಳನ್ನು ಕೊಟ್ಟಿರುವ RRR ಪ್ರೊಡಕ್ಷನ್ಸ್ ನಿರ್ಮಾಣದ ಮತ್ತೊಂದು ಕನಸಿನ ಕೂಸು 'ಸುಬ್ಬಲಕ್ಷ್ಮಿ ಸಂಸಾರ'.

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  ಜೂನ್ 12 ರಿಂದ ಸಂಜೆ 6.30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ 'ಸುಬ್ಬಲಕ್ಷ್ಮಿ ಸಂಸಾರ' ಪ್ರಸಾರ ಆಗಲಿದೆ.

  English summary
  'Subbalakshmi Samsara', A new Serial will be talecasted in Zee Kannada Channel from June 12th at 6.30 PM

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X