Ramachari: ಒಂದು ಕಡೆ ರಾಮಾಚಾರಿ ಸೇಫ್.. ಮತ್ತೊಂದು ಕಡೆ ಸಂಕಟ ತಂದಿಟ್ಟ ಚಾರು

By ಶೃತಿ ಹರೀಶ್ ಗೌಡ

'ರಾಮಾಚಾರಿ' ಈಗ ಪೀಕಲಾಟಕ್ಕೆ ಸಿಲುಕಿದ್ದಾನೆ. ಪೊಲೀಸರು ಬಂದು ರಾಮಾಚಾರಿಯನ್ನು ಆಸ್ಪತ್ರೆಯ ಬಳಿ ಕರೆದುಕೊಂಡು ಹೋಗಿದ್ದಾರೆ. ನಾರಾಯಣ ಆಚಾರ್ಯರಿಗೆ ಜಾನಕಿ ವಿಷಯವನ್ನು ತಿಳಿಸಿ ಎಲ್ಲರೂ ಸಹ ಆಸ್ಪತ್ರೆಯಲ್ಲಿ ಸೇರಿದ್ದಾರೆ. ನಾರಾಯಣ ಆಚಾರ್ಯರಿಗೆ ರಾಮಾಚಾರ್ಯ ಮೇಲೆ ಅಪಾರವಾದ ನಂಬಿಕೆ ಇದ್ದು, ನನ್ನ ಮಗ ಈ ರೀತಿ ಮಾಡುವುದಿಲ್ಲ ಎಂದು ಪೊಲೀಸರ ಬಳಿ ಹೇಳುತ್ತಿದ್ದಾರೆ.

ಸದ್ಯಕ್ಕೆ ಚಾರು "ರಾಮಾಚಾರ್ಯ ಬಳಿ ಮಾತನಾಡಿ ಪ್ರಾಮಿಸ್ ಮಾಡಿಸಿಕೊಂಡು ನಾನೇ ಎಲ್ಲವನ್ನು ಮ್ಯಾನೇಜ್ ಮಾಡುತ್ತೇನೆ. ನೀನು ನಾರಾಯಣ ಆಚಾರ್ಯರನ್ನು ಒಳಗೆ ಕಳುಹಿಸು" ಎಂದು ಹೇಳಿದ್ದಾಳೆ. ನಂತರ ನಾರಾಯಣ ಆಚಾರ್ಯರು, ಚಾರು ಇರುವ ರೂಮ್‌ಗೆ ಹೋಗಿದ್ದಾರೆ. ಅಲ್ಲಿ ಚಾರು ಬದಲು ಬೇರೆ ಯಾರೋ ಮಲಗಿದ್ದಾರೆ. ಅವಳ ಬಳಿ ಹಲವಾರು ಪ್ರಶ್ನೆಯನ್ನು ನಾರಾಯಣ ಆಚಾರ್ಯರು ಕೇಳಿದ್ದಾರೆ.

Sudan starving situation becomes horrible after violence continues

ರಾಮಾಚಾರಿಯ ಹೆಸರನ್ನು ಉಳಿಸುವುದಕ್ಕಾಗಿ ಅಲ್ಲೇ ಇದ್ದ ನರ್ಸ್ ಚಾರುಗೆ ಸಹಾಯವನ್ನು ಮಾಡಿದ್ದಾರೆ. "ನಾನು ಬೇಕು ಎಂದು ವಿಷವನ್ನು ಕುಡಿಯಲಿಲ್ಲ. ಸಂಸಾರದಲ್ಲಿ ನಾನು ಜಿಗುಪ್ಸೆಯನ್ನು ಹೊಂದಿ ಈ ರೀತಿ ಮಾಡಿದೆ. ರಾಮಾಚಾರಿ ಅಣ್ಣ ತುಂಬ ಒಳ್ಳೆಯವರೆಂದು" ಅಭಿಪ್ರಾಯ ತಿಳಿಸಿದ್ದಾರೆ. ‌ತುಂಬಾ ಒಳ್ಳೆಯ ಮಗನಿಗೆ ಜನ್ಮವನ್ನು ನೀಡಿದ್ದೀರಾ ಎಂದು ಹೇಳಿ ನಾರಾಯಣ ಆಚಾರ್ಯರ ಮನಸು ಖುಷಿ ಪಡುವ ರೀತಿಯಲ್ಲಿ ನರ್ಸ್ ಮಾಡಿದ್ದಾರೆ.

ಮಗನ ಬಗ್ಗೆ ಹೆಮ್ಮೆಪಟ್ಟ ಆಚಾರ್ಯರು

ನಾರಾಯಣ ಆಚಾರ್ಯರು ವಿಷ ಕುಡಿದ ಹುಡುಗಿಯ ಬಳಿ ಮಾತನಾಡಿಕೊಂಡು ಹೋದಾಗ ಅಲ್ಲೇ ಇದ್ದ ಪೊಲೀಸರಿಗೆ ಕ್ಲಾಸನ್ನು ತೆಗೆದುಕೊಂಡಿದ್ದಾರೆ. ವಿಚಾರವನ್ನು ತಿಳಿದುಕೊಳ್ಳದೆ ಈ ರೀತಿ ನನ್ನ ಮಗನನ್ನು ಎಳೆದುಕೊಂಡು ಬಂದಿದ್ದು ತಪ್ಪು ಎಂದು ಹೇಳಿದ್ದಾರೆ. ನೀವು ನಿಮ್ಮ ಕರ್ತವ್ಯವನ್ನು ಮಾಡಿದ್ದೇನೆ ಎಂದು ಹೇಳುತ್ತೀರಾ. ಪೂರ್ವಾಪರವನ್ನು ವಿಚಾರ ಮಾಡದೆ ಏಕಾಏಕಿ ನಿಮ್ಮ ಮಗನನ್ನ ಎಳೆದುಕೊಂಡು ಬಂದದ್ದು ತಪ್ಪು.

Sudan starving situation becomes horrible after violence continues

ಗೌರವಸ್ಥರ ಮನೆಗೆ ಮಾಡಿದರೆ ನಮ್ಮ ಮರ್ಯಾದೆ ಏನಾಗಬೇಕು ಎಂದು ನಾರಾಯಣ ಆಚಾರ್ಯರು ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಪೊಲೀಸರು ಚಾರು ಬಳಿ ಹೋಗಿ ಹಲವಾರು ಪ್ರಶ್ನೆಯನ್ನ ಕೇಳಿ ಉತ್ತರಾ ಸಿಗದೇ ಕೋಪಗೊಂಡು ಆಸ್ಪತ್ರೆಯಿಂದ ಹೊರಗೆ ಹೋಗಿದ್ದಾರೆ. ನಾರಾಯಣ ಆಚಾರ್ಯರು ಇಲ್ಲಿ ಇರುವ ಸಮಸ್ಯೆಯನ್ನ ಬಗೆಹರಿಸಿ ಮನೆಗೆ ಬರುವಂತೆ ರಾಮಾಚಾರಿ ಹಾಗೂ ಮುರಾರಿಗೆ ಹೇಳಿದ್ದಾರೆ.

ಒಂದು ಕಡೆ ರಾಮಾಚಾರಿ ಸೇಫ್

ಒಂದು ಕಡೆ ರಾಮಾಚಾರಿ ಹೇಗೋ ಸೇಫ್ ಆಗಿ ಗುಟ್ಟಾಗಿ ಆಗಿದ್ದ ಮದುವೆಯ ಸಂಬಂಧವನ್ನು ಉಳಿಸಿಕೊಂಡಿದ್ದಾನೆ. ಆದರೆ, ಈಗ ಚಾರು ಮಾಡಿರುವ ಎಡವಟ್ಟಿನಿಂದ ರಾಮಾಚಾರಿ ತಲೆ ಕೊಡುವ ಪರಿಸ್ಥಿತಿ ಎದುರಾಗಿದೆ. ನಾರಾಯಣ ಆಚಾರ್ಯರು ಹಾಗೂ ಜಾನಕಿ ಆಸ್ಪತ್ರೆಯಿಂದ ಹೊರಗೆ ಹೋದ ಮೇಲೆ ಚಾರು ಆಸ್ಪತ್ರೆಯ ಹೊರಗೆ ಬಂದು ರಾಮಾಚಾರಿಗೆ ಶಾಕ್ ಆಗುವ ಸುದ್ದಿಯನ್ನು ಹೇಳಿದ್ದಾಳೆ.

ಅದೇನಂದರೆ, ನಾನು ನಿಮ್ಮ ಮನೆಯಲ್ಲಿರುವ ನಿಮ್ಮ ಅಣ್ಣ ಹಾಗೂ ಶೃತಿಗೆ ನಾನು ಸಾಯುತ್ತಿರುವ ವಿಡಿಯೋವನ್ನು ಕಳಿಸಿದ್ದು, ಇದರಿಂದ ತಿಳಿಯುತ್ತದೆ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ರಾಮಾಚಾರಿಗೆ ದೊಡ್ಡ ಆಘಾತವಾಗಿದೆ. ಏನು ಹೇಳುತ್ತಿದ್ದೀರಾ ಎಂದು ಚಾರುವನ್ನು ಕೇಳಿದ್ದಾನೆ. ಸಾರಿ, ನಾನು ಸಾಯುವಾಗ ನಮ್ಮಿಬ್ಬರ ಮದುವೆ ವಿಚಾರ ಅವರಿಗೆ ಗೊತ್ತಾಗಲಿ ಎಂದು ಕಳಿಸಿದ್ದೇನೆ ಎಂದು ಹೇಳಿದ್ದಾಳೆ. ನಿನ್ನ ಸಾರಿ ತೆಗೆದುಕೊಂಡು ಹೋಗಿ ಎಂದು ರಾಮಾಚಾರಿ, ಚಾರು ಮೇಲೆ ಕೋಪಗೊಂಡು ಅಲ್ಲಿಂದ ಓಡಿ ಹೋಗಿದ್ದಾನೆ.

ಅಣ್ಣನ ಬಳಿ ಓಡೋಡಿ ಬಂದ ರಾಮಾಚಾರಿ

ಚಾರು ಹೇಳಿದ ವಿಷಯವನ್ನು ತಿಳಿದ ರಾಮಾಚಾರಿ ಹೇಗಾದರೂ ಮಾಡಿ ಅಣ್ಣನ ಮೊಬೈಲಿಗೆ ಬಂದಿರುವ ವಿಡಿಯೋವನ್ನು ಡಿಲೀಟ್ ಮಾಡಬೇಕು ಎಂದುಕೊಂಡು ಹೋಗುತ್ತಿದ್ದಾನೆ. ಕೋದಂಡ ರಸ್ತೆಯಲ್ಲಿ ಹೋಗಿತ್ತಿರುವುದು ಮುರಾರಿ ಹಾಗೂ ರಾಮಾಚಾರಿ ಕಣ್ಣಿಗೆ ಬಿದ್ದಿದೆ. ಅಣ್ಣನನ್ನು ನಿಲ್ಲಿಸಿದ ರಾಮಾಚಾರಿ ಫೋನನ್ನು ಕೇಳಿದ್ದಾನೆ.

ಇದಕ್ಕೆ ನಾನು ನನ್ನ ಫೋನನ್ನು ವೈಶಾಖಗೆ ಕೊಟ್ಟಿದ್ದೇನೆ ಎಂದು ಕೋದಂಡ ಹೇಳುತ್ತಾನೆ. ಕೋದಂಡ ಹೇಳಿದ ಮಾತಿಗೆ ರಾಮಾಚಾರಿಗೆ ದೊಡ್ಡ ಬೆಟ್ಟವೇ ತಲೆಯ ಮೇಲೆ ಬಂದು ಬಿದ್ದಂತೆ ಭಾಸವಾಗಿದೆ. ವೈಶಾಖ ಏನಾದರೂ ವಿಡಿಯೋವನ್ನು ನೋಡಿದರೆ ಮನೆಯಲ್ಲಿ ದೊಡ್ಡ ರಣರಂಗವೇ ಶುರುವಾಗಲಿದೆ.

More from Filmibeat

English summary
Colors Kannada serial Ramachari Written Update on may 15th episode. Here is the details about again Charu giving problem to Ramachari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X