Lakshmibaramma: ಶ್ರೇಷ್ಠಾಳನ್ನು ಬಿಟ್ಟು ಕೀರ್ತಿ ಹಿಂದೆ ತಾಂಡವ್? ವಿಡಿಯೋಗೆ ಬಂದ ಕಮೆಂಟ್ ಏನ್ ಗೊತ್ತಾ?
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸಖತ್ ಟ್ವಿಸ್ಟ್ ಸಿಕ್ಕಿದೆ. ಕಾವೇರಿ ತನ್ನ ಕೋಪದ ಕೈಗೆ ಬುದ್ದಿ ಕೊಟ್ಟು, ಕೀರ್ತಿಯ ಪ್ರಟಣದ ಜೊತೆಗೆ ಆಟವಾಡಿದ್ದಾಳೆ. ಕಾಪಾಡಿ ಎಂದು ಕಿರುಚಿದರೂ ಕಟುಕಿಯಂತೆ ವರ್ತಿಸಿದ್ದಾಳೆ. ಈಗ ಅಲ್ಲಿಗೆ ಬಂದ ಲಕ್ಷ್ಮೀ- ವೈಷ್ಣವ್‌ಗೂ ಕಥೆ ಹೇಳುತ್ತಿದ್ದಾಳೆ. ಲಕ್ಷ್ಮೀ ಅಷ್ಟು ಸುಲಭದಲ್ಲಿ ಕಾವೇರಿಯ ಕಥೆಯನ್ನು ಕೇಳುವುದಿಲ್ಲ. ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಸುಸ್ತು ಮಾಡಿದ್ದಾಳೆ.
ಕಾವೇರಿ ಕಟ್ಟಿದ ಕಥೆಗೆ ಲಕ್ಷ್ಮೀ ಶಾಕ್ ಆಗಿದ್ದಾಳೆ. ವೈಷ್ಣವ್‌ನ ಮದುವೆಯಾಗುವುದಕ್ಕೆಂದೆ ಕೀರ್ತಿ ಪ್ಲ್ಯಾನ್ ಮಾಡಿದ್ದಳು ಎಂದಿದ್ದಾಳೆ. ನಾನು ಹೆದರಿಸಿದೆ ಓಡಿ ಹೋದಳು ಎಂದಿದ್ದಾಳೆ. ಆದರೆ ಇದೇ ವಿಚಾರಕ್ಕೆ ಲಕ್ಷ್ಮೀ ಕೇಳುವ ಪ್ರಶ್ನೆಗಳಿಗೆ ಉತ್ತರವಿಲ್ಲ. ನಾಟಕ ಶುರು ಮಾಡಿದ್ದಾಳೆ. ಅಷ್ಟರಲ್ಲಿ ಆ ಜಾಗಕ್ಕೆ ಎಲ್ಲಾ ಸತ್ಯವನ್ನು ಕಣ್ಣಾರೆ ಕಂಡ ವ್ಯಕ್ತಿ ಬಂದಿದ್ದಾನೆ.

ತನ್ವಿ ಡೆಡಿಕೇಷನ್ ಹೇಗಿದೆ ಗೊತ್ತಾ?
ಒಂದು ದೃಶ್ಯ ಚೆನ್ನಾಗಿ ಬರಬೇಕು ಅಂದ್ರೆ ಕಲಾವಿದರ ಎಫರ್ಟ್ ಕೂಡ ಹಾಗೇ ಇರಬೇಕು. ಆಗ ಮಾತ್ರ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಬರುವುದು. ಕೀರ್ತಿ ಬಂಡೆಗಲ್ಲಿನ ಮೇಲಿಂದ ಉರುಳುವುದನ್ನು ರಿಯಲ್ ಆಗಿನೇ ಮಾಡಿದ್ದಾರೆ. ಯಾವುದೇ ಡ್ಯೂಪ್ ಕೂಡ ಹಾಕಿಲ್ಲ. ಬಂಡೆ ಕಲ್ಲು ಏರಿಳಿತದ ಜೊತೆಗೆ ಒತ್ತುತ್ತದೆ. ಆದರೂ ಅದರ ಮೇಲೆಯೇ ಉರುಳಿಕೊಂಡು ಉರುಳಿಕೊಂಡು ಹೋಗಿದ್ದಾರೆ.
ತನ್ವಿ ನಟನೆ, ಡೆಡಿಕೇಷನ್ ಗೆ ಮೆಚ್ಚುಗೆ
ಕೀರ್ತಿ ಪಾತ್ರದಲ್ಲಿ ಮಾಡಿರುವ ತನ್ವಿ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೀರ್ತಿಯ ನಟನೆ ಈ ಮೊದಲಿನಿಂದಾನೂ ಎಲ್ಲರಿಗೂ ಇಷ್ಟ. ಅವಳಿಗೆ ಅನ್ಯಾಯವಾಗಬಾರದು ಅಂತಾನೇ ಎಲ್ಲರೂ ಬಯಸೋದು. ಈ ಧಾರಾವಾಹಿಯಿಂದ ಅಭಿನೇತ್ರಿ ಸಿಕ್ಕಂತಾಯಿತು ಅಂತೆಲ್ಲ ಹೊಗಳುತ್ತಿದ್ದಾರೆ. ಕೀರ್ತಿಗೆ ಅನ್ಯಾಯವಾಗಬಾರದು, ಕಾವೇರಿಯ ಬಂಡವಾಳ ಬಯಲಾಗಬೇಕು ಅಂತಾನೇ ಬಯಸುತ್ತಿದ್ದಾರೆ. ಕೀರ್ತಿಯ ನಟನೆಗೆ ಮೆಚ್ಚುಗೆಯ ಸುರಿಮಳೆ ಸುರಿದಿದೆ.
ಶ್ರೇಷ್ಠಾ ನೋಡಿದ್ರೆ ಅಷ್ಟೇ ತಾಂಡವ್!
ಕೀರ್ತಿಯ ಈ ವಿಡಿಯೋ ನೋಡಿದ ತಾಂಡವ್ ಕಮೆಂಟ್ ಹಾಕಿದ್ದಾರೆ. 'ಈ ವರ್ಷದ ಖಳನಟಿ ಪ್ರಶಸ್ತಿ ತನ್ವಿಗೆ ಅಂತ ಹಾಕಿದ್ದಾರೆ. ಈ ಕಮೆಂಟ್ ನೋಡಿದ ಹಲವರು ತಾಂಡವ್ ಬೆಂಬಲಕ್ಕೆ ನಿಂತಿದ್ದಾರೆ. ಹೌದು.. ಹೌದು ಕೊಡಲೇಬೇಕು ಅಂತ ರಿಪ್ಲೇ ಮಾಡಿದ್ದಾರೆ. ಆದರೆ ಇನ್ನು ಕೆಲವೊಬ್ಬರು ವೈಷ್ಣವ್ ಲವ್ವರ್ ಕೀರ್ತಿ. ನೀವೂ ಮಾಡಿರುವ ಕಮೆಂಟ್ ಅನ್ನ ಶ್ರೇಷ್ಠಾ ನೋಡಿದರೆ ನಿಮ್ಮ ಕಥೆ ಅಷ್ಟೇ. ಮೊದಲೇ ಭಾಗ್ಯಾ ಕಂಡರೆ ಹೆದರುತ್ತೀರಾ ಎಂದು ಕಮೆಂಟ್ ಹಾಕಿದ್ದಾರೆ.
ವೈಷ್ಣವ್ ಗರ್ಲ್ ಫ್ರೆಂಡ್ ಕೀರ್ತಿ
ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಕ್ಕತಂಗಿಯರ ಕಥೆ ಅಕ್ಕಪಕ್ಕ ಎಂಬರ್ಥದಲ್ಲಿ ಸಾಗುತ್ತಿದೆ. ಕೀರ್ತಿ ವೈಷ್ಣವ್ ನ ಮಾಜಿ ಗೆಳತಿ. ತಾಂಡವ್ ಬಂದು ಭಾಗ್ಯಾ ಪತಿ, ಶ್ರೇಷ್ಠಾಳ ಗೆಳೆಯ. ಲಕ್ಷ್ಮೀ ಬಾರಮ್ಮದಲ್ಲಿ ತನ್ನ ಮುಗ್ಧತೆಯಿಂದ ಕಾವೇರಿಯ ಮೋಸಕ್ಕೆ ಕೀರ್ತಿ ಬಲಿಯಾಗಿದ್ದಾಳೆ. ಅವಳು ಹೇಳಿದ್ದೆಲ್ಲವನ್ನು ನಂಬಿ ಈಗ ಸಾವು ಬದುಕಿನ ದಾರಿ ಹಿಡಿದಿದ್ದಾಳೆ. ಇಷ್ಟಕ್ಕೆ ಹೀರೋಯಿನ್ ಪಾತ್ರ ಮುಗಿದು ಹೋಯ್ತಾ ಎಂಬ ಬೇಸರ ಜನರ ಮನಸ್ಸಲ್ಲಿ ಇದೆ. ಯಾವುದೇ ಕಾರಣಕ್ಕೂ ಕೀರ್ತಿಯ ಪಾತ್ರ ಮುಗಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











