ಅಭಿಮಾನಿಗಳ 'ಆಸೆ'ಗೆ ತಣ್ಣೀರೆರಚಿದ ಕುಲವಧು ಅಮೃತಾ ರಾಮಮೂರ್ತಿ
ಬೆಳ್ಳಿತೆರೆ ಇರಲಿ .. ಕಿರುತೆರೆ ಇರಲಿ .. ಕೆಲ ಒಮ್ಮೆ ಕೆಲವರು ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುತ್ತಾರೆ. ಆ ಪಾತ್ರದಲ್ಲಿ ಅವರನ್ನಲ್ಲದೇ ಬೇರೆ ಯಾರನ್ನು ಕೂಡ ಕಲ್ಪನೆ ಮಾಡಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ಪ್ರೇಕ್ಷಕರಿಗೆ ಕನೆಕ್ಟ್ ಆಗಿರುತ್ತೆ. ಆದರೆ ಕೆಲ ಒಮ್ಮೆ ಪ್ರೇಕ್ಷಕರ ಜೊತೆಗಿನ ಈ ಭಾವನಾತ್ಮಕ ಪಾತ್ರದ...
ಸಂಪರ್ಕದ ಕೊಂಡಿ ಅನಿವಾರ್ಯವಾಗಿ ಕಳಚಿ ಬೀಳುತ್ತೆ. ಬದುಕಿನಲ್ಲಿ ಎದುರಾದ ಮತ್ಯಾವುದೋ ತಿರುವು ಆ ಚಿತ್ರದ ಜೊತೆ ಅಥವಾ ಧಾರಾವಾಹಿಯ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕುತ್ತೆ. ಆಗ ಹೊರ ನಡೆಯದೇ ಬೇರೆ ದಾರಿ ಇರುವುದಿಲ್ಲ. ಸದ್ಯಕ್ಕೆ ಅಮೃತಾ ರಾಮಮೂರ್ತಿ ಅವರ ವಿಚಾರದಲ್ಲಿ ಕೂಡ ಇದೇ ಆದಂತೆ ಇದೆ.

ಹೌದು, ಅಮೃತಾ ರಾಮಮೂರ್ತಿ. ''ಕುಲವಧು'' .. ''ಕಸ್ತೂರಿ ನಿವಾಸ'' .. ಧಾರಾವಾಹಿಗಳ ಮೂಲಕ ಮನೆ ಮಾತಾದ ಚೆಲುವೆ. ''ಮಿಸ್ಟರ್ & ಮಿಸೆಸ್ ರಂಗೇಗೌಡ'' .. ''ಮೇಘ ಮಯೂರಿ''.. ಧಾರಾವಾಹಿಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ.
ಇಂಥಾ ಅಮೃತಾ ರಾಮಮೂರ್ತಿ ಸದ್ಯ ''ಸ್ಟಾರ್ ಸುವರ್ಣ'' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ''ಆಸೆ'' ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದರು. ರೋಹಿಣಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ತಮ್ಮ ಈ ಪಾತ್ರದ ಮೂಲಕ ಹಲವರ ಹೃದಯವನ್ನು ಕೂಡ ಗೆದ್ದರು.
ಆದರೆ ಇದೀಗ ಇದೇ ಅಮೃತಾ ತಮ್ಮ ಅಭಿಮಾನಿಗಳಿಗೆ ಹಾರ್ಟ್ ಬ್ರೇಕ್ ಮಾಡಿದ್ದಾರೆ. ಧಾರಾವಾಹಿಯಿಂದ ಏಕಾಏಕಿ ಹೊರ ನಡೆದಿದ್ದಾರೆ. ಈ ಕುರಿತು ಖುದ್ದು ಮಾಹಿತಿಯನ್ನು ಕೂಡ ಹಂಚಿಕೊಂಡಿರುವ ಅಮೃತಾ ರಾಮಮೂರ್ತಿ ನಮಸ್ಕಾರ ಎಲ್ಲರಿಗೂ ನಿಮಗೆ ಒಂದು ವಿಷಯ ತಿಳಿಸೋಣ ಅಂತ ಈ ವಿಡಿಯೋವನ್ನ ಮಾಡ್ತಾ ಇದ್ದೀನಿ ಎಂದು ತಮ್ಮ ಮಾತು ಶುರು ಮಾಡಿದ್ದಾರೆ.
ನಾನು ''ಆಸೆ'' ಸೀರಿಯಲ್‌ನಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತಿದೆ. ಸಾಕಷ್ಟು ಕಾರಣಗಳಿಂದ ನಾನು ಈ ಧಾರಾವಾಹಿಯಿಂದ ಹೊರನಡೆಯುತ್ತಿದ್ದೇನೆ ಎಂದು ಹೇಳಿರುವ ಅಮೃತಾ ರಾಮಮೂರ್ತಿ ನೀವೆಲ್ಲರೂ ಆಸೆ ಸೀರಿಯಲ್ ಮೇಲೆ ತುಂಬಾ ಪ್ರೀತಿ ತೋರಿಸಿದ್ದೀರಿ. ಹಾಗೇ ನನ್ನ ಮೇಲೂ ತುಂಬಾ ಪ್ರೀತಿ ತೋರಿಸಿದ್ದೀರ, ಈ ಪ್ರೀತಿ ಸದಾ ಹೀಗೇ ಇರಲಿ ಎಂದು ಹೇಳಿದ್ದಾರೆ. ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತೇನೆ, ಒಂದು ಚಿಕ್ಕ ಬ್ರೇಕ್ ಪಡೆದು ಮತ್ತೆ ಮರಳಿ ಬರುತ್ತೇನೆ, ಅಲ್ಲಿವರೆಗೂ ನನಗೆ ಇಷ್ಟೆಲ್ಲ ಸಪೋರ್ಟ್ ಮಾಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು ಎಂದು ಅಮೃತಾ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

ಸದ್ಯ ಅಮೃತಾ ರಾಮಮೂರ್ತಿ ಅವರ ಈ ವಿಡಿಯೋಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾಕೆ ನಮಗೆ ಇಂತಹ ಶಾಕ್ ಕೊಟ್ರಿ, ಎಷ್ಟು ಅಚ್ಚುಕಟ್ಟಾಗಿ ಪಾತ್ರದಲ್ಲಿ ನಟಿಸುತ್ತಿದ್ರಿ ನಿಜಕ್ಕೂ ನಮಗೆ 'ಆಸೆ' ವೀಕ್ಷಕರಿಗೆ ನಿರಾಸೆ ಆಯ್ತು ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ರೋಹಿಣಿ ಎಂಬ ಪಾತ್ರಕ್ಕೆ ಇಷ್ಟು ದಿನ ಜೀವ ತುಂಬಿ ಅಭಿನಯಿಸಿದ್ದೀರಿ, ನಿಮ್ಮ ಅಭಿನಯ ತುಂಬಾ ಅದ್ಭುತವಾಗಿತ್ತು.. ಆ ಪಾತ್ರಕ್ಕೆ ನಿಮ್ಮ ರೀತಿ ಜೀವ ತುಂಬಲು ಯಾರಿಂದಲೂ ಸಾಧ್ಯವಿಲ್ಲ.. ನಿಮ್ಮ ನಿರ್ಧಾರವನ್ನು ಗೌರವಿಸುವತ್ತೇವೆ, ನಿಮಗೆ ಒಳ್ಳೆಯದಾಗಲಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನಮಸ್ತೆ ಅಮೃತಾ ಮೇಡಂ, ''ಆಸೆ'' ಧಾರಾವಾಹಿಯ ರೋಹಿಣಿ ಪಾತ್ರದ ಮೂಲಕ ನಮ್ಮೆಲ್ಲರನ್ನು ಮನರಂಜಿಸಿದ್ದೀರಾ,ಇವಾಗ ಧಾರವಾಹಿಯಲ್ಲಿ ನಿಮ್ಮ ಪಾತ್ರದಿಂದ ನೀವು ಹೊರ ಬಂದಿರುವುದು ಬೇಜಾರಾಯಿತು.ಆದರೆ ನಿಮ್ಮ ಮೇಲಿರುವ ಅಭಿಮಾನ ಯಾವತ್ತೂ ಕಡಿಮೆ ಆಗೋದಿಲ್ಲ ನಿಮ್ಮ ಮುಂದಿನ ಪ್ರಾಜೆಕ್ಟ್ ಗೆ ಒಳ್ಳೆಯದಾಗಲಿ ಮೇಡಂ ಎಂದು ಇನ್ನೊಬ್ಬರು ಶುಭ ಹಾರೈಸಿದ್ದಾರೆ.


Click it and Unblock the Notifications











