ಬ್ರೇಕ್ ಗಳಲ್ಲೇ ದಂಗುಬಡಿಸಿದ ಕಿಚ್ಚ ಸುದೀಪ್
ಪ್ರತಿಯೊಬ್ಬರೂ ಒಂದಲ್ಲಾ ಒಂದು ಹಾಡಿಗೆ ಹೆಜ್ಜೆ ಹಾಕಿದರು. ನರ್ಸ್ ಜಯಲಕ್ಷ್ಮಿ, ಅಪರ್ಣಾ, ಶ್ವೇತಾ ಪಂಡಿತ್, ಅನುಶ್ರೀ, ವಿನಾಯಕ ಜೋಷಿ ಎಲ್ಲರೂ ಕುಣಿದದ್ದು ಇನ್ನೊಂದು ವಿಶೇಷ. ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಒಂದು ಹೆಜ್ಜೆ ಹಾಕಿದರು.
ಫೈನಲ್ ರೌಂಡ್ ನಲ್ಲಿದ್ದ ಸ್ಪರ್ಧಿಗಳ ಕಡೆಯಿಂದ ಎಲ್ಲರೂ ಬಂದಿದ್ದರು. ಆದರೆ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರ ಕಡೆಯಿಂದ ಯಾರೂ ಬಂದಿರಲಿಲ್ಲ. ಇದಕ್ಕೆ ಸುದೀಪ್ ನಿಮ್ಮ ಕಡೆಯಿಂದ ನಾವಿದ್ದೀವಿ ಗುರುಗಳೇ ಎಂದರು.

'ಬಿಗ್ ಬಾಸ್' ಮನೆಯಲ್ಲಿ ಕುಳಿತಿದ್ದ ನಾಲ್ಕು ಮಂದಿಗೆ ಒಂದೊಂದು ಕ್ಷಣವೂ ಒಂದೊಂದು ದಿನದಂತೆ ಭಾಸವಾಗುತ್ತಿತ್ತು. ಅವರಲ್ಲಿನ ಆತಂಕ, ಕುತೂಹಲ ಅವರ ಮುಖಗಳಲ್ಲಿ ಕಾಣುತ್ತಿತ್ತು. ಮೊದಲು ಮನೆಯಿಂದ ಬ್ರಹ್ಮಾಂಡ ಗುರುಗಳು ಹೊರಬಂದರು.
ಅದಾದ ಬಳಿಕ ನಿಕಿತಾ ಬಂದರು. ಕಡೆಗೆ ಉಳಿದಿದ್ದ ವಿಜಯ್ ರಾಘವೇಂದ್ರ ಹಾಗೂ ಅರುಣ್ ಸಾಗರ್ ಮಾತ್ರ. ಕೊನೆಯದಾಗಿ ನೀವಿಬ್ಬರೂ ಏನನ್ನು ಹೇಳಲು ಇಚ್ಛಿಸುತ್ತೀರಾ ಎಂದು ಬಿಗ್ ಬಾಸ್ ಕೇಳಿದಾಗ. ಬಿಗ್ ಬಾಸ್ ಮನೆಯ ಕ್ಯಾಮೆರಾಗೆ ಪ್ರೀತಿಯ ಚುಂಬನ ಕೊಟ್ಟು ಕ್ಯಾಮೆರಾ ಮುಂದೆ ಭಾಗಿ ಅದಕ್ಕೆ ನಮಸ್ಕರಿಸಿದರು. [ವಿಜಯ್ ರಾಘವೇಂದ್ರ ಬಿಗ್ ಬಾಸ್] [ಎಲ್ಲ ಫಿಕ್ಸಿಂಗ್ : ಟ್ವಿಟ್ಟರ್ ಲೋಕ] [ಬಕ್ವಾಸ್ ಎಂದ ಓದುಗರು]


Click it and Unblock the Notifications











