"ನನ್ನ ಶಿಷ್ಯ ಅಂತ ಯಾರನ್ನು ಬಿಗ್‌ಬಾಸ್ ಮನೆಗೆ ಕಳಿಸಿಲ್ಲ"; ಕಿಚ್ಚ ತಿರುಗೇಟು ಕೊಟ್ಟಿದ್ದು ಯಾರಿಗೆ ಗೊತ್ತಾಯ್ತಾ?
ಬಿಗ್‌ಬಾಸ್ ಶೋ ಬಗ್ಗೆ ಎಷ್ಟು ಪಾಟಿಸಿವ್ ಟಾಕ್ ಇದ್ಯೋ ಅದೇ ರೀತಿ ಕೊಂಚ ನೆಗೆಟಿವ್ ಕಾಮೆಂಟ್ಸ್ ಕೂಡ ಬರ್ತಿರುತ್ತೆ. ಮೊದಲ ಸೀಸನ್‌ನಿಂದ 12 ಸೀಸನ್‌ವರೆಗೆ ಸುದೀಪ್ ನಿರೂಪಣೆ ಮಾಡ್ತಾ ಬರ್ತಿದ್ದಾರೆ. ಸಾಕಷ್ಟು ವಿವಾದಗಳಿಂದ ಕೂಡ ಶೋ ಸುದ್ದಿ ಆಗಿದ್ದು ಇದೆ. ಇತ್ತೀಚೆಗೆ ಕಿಚ್ಚ ಸುದೀಪ್ ತಮ್ಮ ಮೇಲಿನ ಆರೋಪಕ್ಕೆ ವೇದಿಕೆಯಲ್ಲೇ ಸ್ಪಷ್ಟನೆ ಕೊಟ್ಟಿದ್ದರು.
ಕಳೆದ ಶನಿವಾರ(ಡಿಸೆಂಬರ್ 6) ಧ್ರುವಂತ್ ನನ್ನನ್ನು ಮನೆಯಿಂದ ಹೊರಗೆ ಕಳಿಸಿ ಎಂದು ಸುದೀಪ್ ಬಳಿ ಮನವಿ ಮಾಡಿದ್ದರು. ಆಗ ಸುದೀಪ್ ಆ ಅಧಿಕಾರ ನನಗಿಲ್ಲ. ನೀವು ಒಳಗೆ ಹೋಗುವಾಗ ನನ್ನನ್ನು ಕೇಳಿಕೊಂಡು ಹೋಗಿದ್ರಾ? ನಿಮಗೆ ಮಾತ್ರವಲ್ಲ ಇನ್ನೂ ಕೆಲವರಿಗೆ ತಪ್ಪು ಅಭಿಪ್ರಾಯ ಇರುತ್ತವೆ ಎಂದು ಸುದೀಪ್ ಆ ಟಾಪಿಕ್ ತೆಗೆದಿದ್ದರು. ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳನ್ನು ಹೇಗೆ ಆಯ್ಕೆ ಮಾಡ್ತಾರೆ? ಯಾರಾದರೂ ಲಾಬಿ ಮಾಡ್ತಾರಾ? ಎನ್ನುವ ಅನುಮಾನಕ್ಕೆ ಸುದೀಪ್ ತೆರೆ ಎಳೆದಿದ್ದರು.

ಸುದೀಪ್ ಮಾತನಾಡಿ "ಕೆಲವರು ಹೊರಗೆ ಕೂತು ಉದ್ದುದ್ದ ಮಾತನಾಡುವವರು ಇದ್ದಾರೆ. ಅವರಿಗೆಲ್ಲ ಸೇರಿ ಹೇಳುತ್ತೀನಿ. ನನ್ನ ಹುಡುಗ್ರು, ನನ್ನ ಶಿಷ್ಯ ಎಂದು ಇಷ್ಟು ಸೀಸನ್‌ಗಳಲ್ಲಿ ಅಲ್ಲಿ ಒಬ್ಬೇ ಒಬ್ಬ ಸ್ಪರ್ಧಿಯನ್ನು ನಾನು ಬಿಗ್‌ಬಾಸ್‌ಗೆ ಕಳಿಸಿಲ್ಲ. ಮೇಕಪ್ ಹಾಕುವ ಈ ವೇದಿಕೆ ಮೇಲೆ ನಿಂತು ಈ ಮಾತನ್ನು ಹೇಳುತ್ತಿದ್ದೀನಿ. ಬಹಳ ಪ್ರಾಮಾಣಿಕವಾಗಿ ಶೋ ನಡೆಯುತ್ತದೆ. ಗ್ರ್ಯಾಂಡ್ ಓಪನಿಂಗ್ ವೇಳೆ ಪ್ರತಿಯೊಬ್ಬರು ಈ ವೇದಿಕೆಗೆ ನಡೆದು ಬರುವವರೆಗೆ ಅವ್ರು ಯಾರು ಎನ್ನುವುದು ನನಗೆ ಗೊತ್ತಿರಲ್ಲ. ನಿಮ್ಮನ್ನು ಒಳಗೆ ಕಳಿಸುವವನು ನಾನಲ್ಲ, ಹೊರಗೆ ಕರೆಸುವ ಅಧಿಕಾರ ಕೂಡ ನನಗಿಲ್ಲ" ಎಂದು ಸುದೀಪ್ ಖಡಕ್ ಆಗಿ ಹೇಳಿದ್ದರು.
ಬಿಗ್‌ಬಾಸ್ ಶೋ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಹಾಕುತ್ತಾರೆ. ಸ್ಪರ್ಧಿಗಳ ವಿಚಾರದಲ್ಲಿ ಸುದೀಪ್ ಶಿಷ್ಯ ಎನ್ನುವ ಕಾರಣಕ್ಕೆ ಒಳಗೆ ಹೋಗಿದ್ದಾರೆ ಎನ್ನುವ ಕಾಮೆಂಟ್ಸ್ ಕೂಡ ಬಂದಿದೆ. ಇದು ಸ್ಕ್ರಿಪ್ಟೆಡ್ ಶೋ ಎನ್ನುವವರು ಇದ್ದಾರೆ. ಆದರೆ ಬಹಿರಂಗವಾಗಿ ಯಾರೂ ಈ ಮಾತನ್ನು ಹೇಳಿಲ್ಲ. ಅಷ್ಟಕ್ಕೂ ಸುದೀಪ್ ಯಾರಿಗೆ ಈ ರೀತಿ ಕೌಂಟರ್ ಕೊಟ್ಟರು ಎನ್ನುವುದು ಕೆಲವರಿಗೆ ಗೊತ್ತಾಗಲಿಲ್ಲ.
ಬಿಗ್‌ಬಾಸ್ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಮಾಧ್ಯಮದ ಮುಂದೆ ಮಾತನಾಡುತ್ತಾ ಈ ರೀತಿ ಹೇಳಿದ್ದರು. ಬೇಕಾದರವರನ್ನು ಬಿಗ್‌ಬಾಸ್ ಮನೆ ಒಳಗೆ ಸೇರಿಸಿಕೊಳ್ತಾರೆ, ತ್ರಿವಿಕ್ರಮ್, ಮಂಜ, ರಂಜಿತ್ ಮೂವರು ಸುದೀಪ್ ಅವ್ರ ಶಿಷ್ಯಂದಿರು. ಅದಕ್ಕೆ ಒಳಗೆ ಕಳುಹಿಸಿದ್ದಾರೆ. ಮೂವರು ಅವ್ರ ಶಿಷ್ಯಂದಿರು ಅಲ್ವೇ ಎಂದು ಹೇಳಿದ್ದರು. ಇದೇ ವಿಚಾರದ ಬಗ್ಗೆ ಸುದೀಪ್ ಹೀಗೆ ಖಾರವಾಗಿ ಮಾತನಾಡಿರುವಂತೆ ಕಾಣ್ತಿದೆ. ಎರಡೂ ವಿಡಿಯೋ ಸೇರಿಸಿ ಎಡಿಟ್ ಮಾಡಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ.
ಕಳೆದ ಸೀಸನ್‌ನಲ್ಲಿ ಲಾಯರ್ ಜಗದೀಶ್ ಕೂಡ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಪ್ರವೇಶಿಸಿದ್ದರು. ಆದರೆ 17 ದಿನಕ್ಕೆ ಎಲಿಮಿನೇಟ್ ಆಗುವಂತಾಗಿತ್ತು. ರಂಜಿತ್ ಜೊತೆ ಜಗಳ ಮಾಡಿದ್ದರು. ಅಷ್ಟೇ ಅಲ್ಲ ಮಹಿಳಾ ಸ್ಪರ್ಧಿ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಕ್ಕಾಗಿ ಅವರಿಗೆ ಮನೆಯಿಂದ ಹೊರ ಬರುವ ಶಿಕ್ಷೆ ನೀಡಲಾಗಿತ್ತು. ತಮ್ಮ ನೇರಾನೇರ ಮಾತುಗಳಿಂದ ಜಗದೀಶ್ ಎಲ್ಲರ ಗಮನ ಸೆಳೆಯುತ್ತಾರೆ.
ಬಿಗ್‌ಬಾಸ್ ಮನೆಯಲ್ಲಿ ಕೂಡ ಮೊದಲ ಎರಡು ವಾರ ಜಗದೀಶ್ ಚೆನ್ನಾಗಿ ಆಡಿದ್ದರು. ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದಿದ್ದರು. ಫಿನಾಲೆವರೆಗೂ ಉಳಿದುಕೊಳ್ಳುವ ಸುಳಿವು ಕೊಟ್ಟಿದ್ದರು. ಆದರೆ ಬಹಳ ಬೇಗ ಮನೆಯಿಂದ ಹೊರಬಂದು ವೀಕ್ಷಕರಿಗೆ ನಿರಾಸೆ ಮೂಡಿಸಿದ್ದರು.


Click it and Unblock the Notifications











