ಕನ್ಯಾಪರೀಕ್ಷೆ ಬಗ್ಗೆ ಕಿಚಾಯಿಸಿದ ಕಿಚ್ಚ ಸುದೀಪ್
ಇದ್ದದ್ದನ್ನು ಇದ್ದಹಾಗೆ ತೋರಿಸುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಎಂಬ ಮಾತುಗಳಿಗೆ ಈ ಬಾರಿ ಹೆಚ್ಚು ಅರ್ಥಬಂದಂತಿದೆ ಕಂಡುಬಂತು. ಮನೆಯ ಸದಸ್ಯರ ಕಣ್ಣು ತೇವ ಮಾಡಿದ ಬಳಿಕ ಸುದೀಪ್ ಒಂಚೂರು ಹಾಸ್ಯಕ್ಕೆ ಹೊರಳಿ ಸದಸ್ಯರ ಮುಖದಲ್ಲಿ ನಗೆ ಚಿಮ್ಮಿಸಿದರು.
ಚಂದ್ರಿಕಾ ಅವರು ಸಂತೈಸು, ಸಮಾಧಾನಪಡಿಸು ಎಂಬ ಪದ ಬಳಸಲು ಹೋಗಿ "ಸಂತಾನ" ಎಂಬ ಪದ ಬಳಕೆ ಮಾಡಿದ್ದನ್ನು ನೆನಪಿಸಿದರು. ಇದಕ್ಕೆ ವಿವರಣೆ ನೀಡಲು ಅರುಣ್ ಸಾಗರ್ ಮುಂದಾದರಾದರೂ, ಅರ್ಧದಲ್ಲೇ ತಡೆದ ಸುದೀಪ್, ಅಯ್ಯೋ ಅವರ ಮನಸ್ಸಿನಲ್ಲಿದ್ದ ಮಾತು ಹೊರಗೆ ಬಂತು ಬಿಡ್ರಿ. ಅವರಿಗೆ ಇನ್ನೊಂದು ಮಗು ಬೇಕಾಗಿತ್ತು ಅಂತ ಕಾಣಿಸುತ್ತದೆ ಎಂದು ಹೇಳಿ ಕಿಚ್ಚ ಸುದೀಪ್ ಕಿಚಾಯಿಸಿದರು. ಎಲ್ಲರೂ ಎದ್ದುಬಿದ್ದು ನಗುವಂತಾಯಿತು.

ಇದೇ ಸಂದರ್ಭದಲ್ಲಿ ಅರುಣ್ ಸಾಗರ್ ಅವರು ತಮ್ಮ ಲವ್ ಮ್ಯಾರೇಜ್ ಬಗ್ಗೆ ಹೇಳಿಕೊಂಡರು. ತಾವು ರಂಗಾಯಣದಲ್ಲಿದ್ದಾಗ ಒಂದು ದಿನ ಹೊರಗೆ ಗೆಳೆಯನ ಜೊತೆ ಕಾಫಿ ಕುಡಿಯುತ್ತಿದ್ದೆ. ಉದ್ದ ಜಡೆಯ ಹುಡುಗಿಯೊಬ್ಬಳು ನಡೆದುಹೋಗುತ್ತಿದ್ದಳು. ಮದುವೆಯಾದರೆ ಈ ರೀತಿ ಹುಡುಗಿಯನ್ನೇ ಆಗಬೇಕು ಎಂದು ಅವನೊಂದಿಗೆ ಹೇಳಿದೆ.


Click it and Unblock the Notifications











