'ಬಿಗ್ ಬಾಸ್' ಸೀಸನ್ 6ರ ತುಂಬ ಕಹಿ ಅನುಭವವನ್ನೇ ಕಂಡ ಸುದೀಪ್
Recommended Video
'ಬಿಗ್ ಬಾಸ್' ಕಾರ್ಯಕ್ರಮದ ಆರು ಸೀಸನ್ ಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಸುದೀಪ್ ಬರುತ್ತಿದ್ದಾರೆ. ಆದರೆ, ಕಳೆದ ಸೀಸನ್ ನಲ್ಲಿ ಸುದೀಪ್ ಕಹಿ ಹಾಗೂ ನೋವಿನ ಘಟನೆಗಳನ್ನೇ ಹೆಚ್ಚಾಗಿ ನೋಡಿದರಂತೆ.
ನಟ ಅಂಬರೀಶ್ ನಿಧನದ ಸುದ್ದಿ, ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ಇದ್ದಾಗ ಬಂತು. ಆ ಕ್ಷಣಕ್ಕೆ ಏನು ಮಾಡಬೇಕು ತಿಳಿಯದ ಸುದೀಪ್ ಹೇಗೋ ಅಂದಿನ ಕಾರ್ಯಕ್ರಮ ಮುಗಿಸಿದರು. ಸುದೀಪ್ ಗೆ ಆ ನೋವಿನಿಂದ ಆಚೆ ಬರಲು ಅನೇಕ ದಿನ ಬೇಕಾಯಿತು. ಒಂದು ಭಾನುವಾರ ಚಿತ್ರೀಕರಣ ಮಾಡಲು ಸುದೀಪ್ ರಿಂದ ಆಗಲೇ ಇಲ್ಲ. ಆ ಸಮಯದಲ್ಲಿ ಕಾರ್ಯಕ್ರಮದ ಆಯೋಜಕರು ಹೇಗೋ ನಿಭಾಯಿಸಿದರು.
ಅಂಬರೀಶ್ ನಿಧನ ಒಂದು ಕಡೆ ಆದ್ರೆ, ಮತ್ತೊಂದು ಕಡೆ ತಮ್ಮ ದೇಹ ಸ್ಥಿತಿ ಕೂಡ ಸರಿ ಇರಲಿಲ್ಲ. ಎಷ್ಟೋ ಬಾರಿ ವೇದಿಕೆ ಮೇಲೆ ನಿಲ್ಲಲು ಸಹ ಆಗುತ್ತಿರಲಿಲ್ಲ. ಆದರೂ, ಸುದೀಪ್ ತಮಗೆ ನೀಡಿದ ಕೆಲಸವನ್ನು ಪೂರ್ಣ ಮಾಡಿದರು.

ಇವುಗಳ ಜೊತೆಗೆ ಆರನೇ ಅವೃತ್ತಿಯಲ್ಲಿ ಬಂದ ಕೆಲವು ಸ್ಪರ್ಧಿಗಳ ವರ್ತನೆ ಸುದೀಪ್ ರಿಗೆ ಇಷ್ಟ ಆಗಲಿಲ್ಲ. ಗೆಲ್ಲಬೇಕು ಎಂಬ ಕಾರಣಕ್ಕೆ ಹಳೆಯ ಸೀಸನ್ ಸ್ಪರ್ಧಿಗಳ ಅನುಕರಣೆ ಮಾಡುವುದು ಸುದೀಪ್ ಬೇಸರಕ್ಕೆ ಕಾರಣವಾಯ್ತು. ಕಳೆದ ಬಾರಿ ಕಟೆಂಟ್ ಅಷ್ಟೊಂದು ಚೆನ್ನಾಗಿ ಇರಲಿಲ್ಲ ಎಂದು ಸ್ವತಃ ಸುದೀಪ್ ಹೇಳಿದ್ದಾರೆ.
ಸುದೀಪ್ ರಿಗೆ ಇಷ್ಟು ವರ್ಷದ ಬಿಗ್ ಬಾಸ್ ಜರ್ನಿಯಲ್ಲಿ ಮೊದಲ ಸೀಸನ್ ತುಂಬ ಮೆಚ್ಚಿಗೆ ಆಗಿದೆ. ''ಮೊದಲ ಸೀಸನ್ ಸ್ಪರ್ಧಿಗಳಿಗೆ ಬಿಗ್ ಬಾಸ್ ಅನ್ನೋದು ಏನು ಅಂತಲೇ ಗೊತ್ತಿರಲಿಲ್ಲ. ಹೇಗೆ ನಡೆಯುತ್ತೆ ಅನ್ನೋದು ತಿಳಿದಿರಲಿಲ್ಲ. ಆದ್ರೆ ಮುಂದೆ ಬಂದೋರು ಗೆಲ್ಲುವುದಕೋಸ್ಕರ ಏನೇನು ಮಾಡ್ಬೇಕೋ ಅದೆಲ್ಲ ಮಾಡಿದ್ರು. ಆದ್ದರಿಂದ ಫಸ್ಟ್ ಸೀಸನ್ ಸ್ಪರ್ಧಿಗಳು ನನಗಿಷ್ಟ.'' ಎಂದು ಸುದೀಪ್ ಮಾತನಾಡಿದ್ದಾರೆ.


Click it and Unblock the Notifications











