'ಬಿಗ್ ಬಾಸ್ ಸೀಸನ್-7' ಪ್ರಸಾರದ ದಿನಾಂಕ ಬಹಿರಂಗ
Recommended Video
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಸೀಸನ್-7ಗಾಗಿ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತೆ ಎನ್ನುವುದು ಅಭಿಮಾನಿಗಳ ಕುತೂಹಲ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್-7 ಪ್ರಸಾರದ ದಿನಾಂಕ ಬಹಿರಂಗ ಆಗಿದೆ. ಕಳೆದ ಆರು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಈಗ ಸಾಲು ಸಾಲು ಸಿನಿಮಾಗಳ ನಡುವೆಯೂ ಬಿಗ್ ಬಾಸ್ ಗೆ ತಯಾರಿ ನಡೆಸುತ್ತಿದ್ದಾರೆ. ಬಿಗ್ ಬಾಸ್ ಮತ್ತೆ ಯಾವಾಗ ಶುರುವಾಗುತ್ತೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕಿಚ್ಚ ಉತ್ತರಿಸಿದ್ದಾರೆ.
ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪೈಲ್ವಾನ್ ಸಿನಿಮಾದ ಬಗ್ಗೆ ಏನಾದರು ಪ್ರಶ್ನೆ ಕೇಳುವಂತೆ ಅಭಿಮಾನಿಗಳಿಗೆ ಹೇಳಿದ್ದರು. #ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಪೈಲ್ವಾನ್ ಸಿನಿಮಾದ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದ್ದರು.

#ಆಸ್ಕ್ ಪೈಲ್ವಾನ್ ನಲ್ಲಿ ಅಭಿಮಾನಿಯೊಬ್ಬ ಸುದೀಪ್ ಗೆ ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತೆ ಎಂದು ಪ್ರಶ್ನೆ ಹಾಕಿದ್ದರು. ಪೈಲ್ವಾನ್ ಗೆ ಸಂಭಂದಿಸಿದ ಕಾರ್ಯಕ್ರಮವಾದರೂ ಅಭಿಮಾನಿಯ ಪ್ರಶ್ನೆಗೆ ಅಭಿನಯ ಚಕ್ರವರ್ತಿ ಉತ್ತರಿಸಿದ್ದರು.
ಬಿಗ್ ಬಾಸ್ ಸೀಸನ್-7 ಅಕ್ಟೋಬರ್ ಎರಡನೆ ವಾರದಿಂದ ಪ್ರಾರಂಭವಾಗುತ್ತೆ ಎಂದು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಹಿಂದಿನ ಸೀಸನ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆದ್ರೆ ಈ ಬಾರಿ ಬಿಗ್ ಬಾಸ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











