»   » ಸುದೀಪ್ ಸ್ಟೈಲ್ ಅಂದ್ರೆ ನಟಿ ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಇಷ್ಟ.!

ಸುದೀಪ್ ಸ್ಟೈಲ್ ಅಂದ್ರೆ ನಟಿ ರಶ್ಮಿಕಾ ಮಂದಣ್ಣಗೆ ಸಿಕ್ಕಾಪಟ್ಟೆ ಇಷ್ಟ.!

Posted By:
Subscribe to Filmibeat Kannada

ಕೆಚ್ಚೆದೆಯ ಕಿಚ್ಚ.. ಅಭಿಮಾನಿಗಳ ನಲ್ಮೆಯ 'ನಲ್ಲ' ಸುದೀಪ್ ಗೆ ವಯಸ್ಸು ನಲವತ್ತು ದಾಟಿದೆ ಅಂದ್ರೆ ಯಾರಾದರೂ ನಂಬೋ ಮಾತಾ? ನಂಬಲಿಲ್ಲ ಅಂದರೂ ಅದೇ ವಾಸ್ತವ. ಇತ್ತೀಚೆಗಷ್ಟೇ ತಮ್ಮ 44ನೇ ಜನ್ಮದಿನವನ್ನ ಆಚರಿಸಿಕೊಂಡ ಸುದೀಪ್ ಈಗಲೂ ಹರೆಯದ ಹುಡುಗನಂತೆ ಎಲ್ಲರ ಕಣ್ಣು ಕುಕ್ಕುತ್ತಾರೆ.

ಸುದೀಪ್ ರವರ ಸ್ಟೈಲ್, ಮಾತನಾಡುವ ಶೈಲಿ, ನಡಿಗೆಯಲ್ಲಿ ಇರುವ ಗತ್ತು ಗಮ್ಮತ್ತು ನೋಡಿದ್ರೆ ಎಂಥವರಿಗೂ ಖುಷಿ ಆಗುತ್ತೆ. ಇದೇ ಕಾರಣಕ್ಕೆ ಸುದೀಪ್ ಲೆಕ್ಕವಿಲ್ಲದಷ್ಟು ಹುಡುಗಿಯರ ಪಾಲಿಗೆ ಡ್ರೀಮ್ ಬಾಯ್.

Sudeep is my style icon says Rashmika Mandanna

ನೀವು ಸುದೀಪ್ ಅಭಿಮಾನಿ: ಸುದೀಪ್ 'ಇವರಿಗೆ' ಅಭಿಮಾನಿ.! ಯಾರವರು.?

ಚಿತ್ರರಂಗದಲ್ಲಿ ಇರುವ ಅನೇಕ ನಾಯಕಿಯರಿಗೂ ಸುದೀಪ್ ಹಾಗೂ ಅವರ ಸ್ಟೈಲ್ ಅಂದ್ರೆ ಅಚ್ಚುಮೆಚ್ಚು. 'ಕಿರಿಕ್ ಪಾರ್ಟಿ' ಖ್ಯಾತಿಯ ರಶ್ಮಿಕಾ ಮಂದಣ್ಣ ರವರಿಗೂ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

''ಸುದೀಪ್ ಮಾತನಾಡುವ ಸ್ಟೈಲ್, ಓಡಾಡುವ ರೀತಿ ನೋಡಿದರೆ ತುಂಬಾ ಇಷ್ಟ ಆಗುತ್ತೆ'' ಅಂತ ಸ್ವತಃ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

''ನಿಮ್ಮ ಸ್ಟೈಲ್ ಐಕಾನ್ ಯಾರು.?'' ಎಂದು ಅಕುಲ್ ಬಾಲಾಜಿ ಕೇಳಿದಾಗ ನಟಿ ರಶ್ಮಿಕಾ ಮಂದಣ್ಣ ಥಟ್ ಅಂತ ನೀಡಿದ ಉತ್ತರ ''ಸುದೀಪ್''.

ನಟಿ ರಶ್ಮಿಕಾ ಮಂದಣ್ಣ ಹಾಗೆ ಹಲವು ನಟಿಯರು ಇದೇ ಕಾರ್ಯಕ್ರಮದಲ್ಲಿ ''ಸುದೀಪ್ ಗೆ ಸ್ಟೈಲಿಶ್ ಹೀರೋ, ಸ್ಟೈಲ್ ಐಕಾನ್'' ಅಂತ ಬಿರುದು ನೀಡಿದ್ದಾರೆ.

English summary
Kannada Actor Sudeep is my style icon says Rashmika Mandanna in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada