ಸುದೀಪ್ ತಾಯಿ ಬಿಗ್ ಬಾಸ್ ಈ ಸ್ಪರ್ಧಿಯ ಬಿಗ್ ಫ್ಯಾನ್ ಅಂತೆ
Recommended Video
ಬಿಗ್ ಬಾಸ್ ಸೀಸನ್-7ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೀಸನ್-7 ಸ್ಪರ್ಧಿಗಳನ್ನು ಅದ್ದೂರಿಯಾಗಿ ಸ್ವಾಗತ ಮಾಡಿ, ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸೆಲೆಬ್ರಿಟಿಗಳು ಮಾತ್ರ ಕಾಣಸಿಗಲಿದ್ದಾರೆ.
ಬಿಗ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳಲ್ಲಿ ಒಬ್ಬರು ಕಿಚ್ಚ ಸುದೀಪ್ ತಾಯಿಗೆ ತುಂಬ ಇಷ್ಟವಂತೆ. ಹೌದು, ರಾಧಾ ರಮಣ ಧಾರಾವಾಹಿಯ ವಿಲನ್ ಪಾತ್ರಧಾರಿ ಸಿತಾರದೇವಿ ಅಲಿಯಾಸ್ ಸುಜಾತಾ ಅಂದ್ರೆ ಸುದೀಪ್ ತಾಯಿಗೆ ತುಂಬ ಇಷ್ಟವಂತೆ. ಧಾರಾವಾಹಿಯನ್ನು ಸುದೀಪ್ ತಾಯಿ ತುಂಬ ಇಷ್ಟಪಟ್ಟು ನೋಡ್ತಾರಂತೆ.
ಈ ವಿಚಾರವನ್ನು ಸುಜಾತಾ ಬಿಗ್ ಬಾಸ್ ವೇದಿಕೆ ಮೇಲೆ ಸಂತಸದಿಂದ ಹೇಳಿಕೊಂಡರು. "ನಿಮ್ಮ ತಾಯಿ ತನ್ನ ಫ್ಯಾನ್ ಎನ್ನುವ ವಿಚಾರ ಗೊತ್ತಾಯಿತು. ತುಂಬ ಸಂತಸವಾಯಿತು" ಎಂದು ಹೇಳಿದ್ದಾರೆ. ಈ ಬಾರಿಯ ಬಿಗ್ ಬಾಸ್ ನ 13ನೇ ಸ್ಪರ್ಧಿಯಾಗಿ ಸುಜಾತಾ ಎಂಟ್ರಿ ಕೊಟ್ಟಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ಸಿತಾರಾ ಆಗಿ ಎಲ್ಲರನ್ನು ಕಾಡಿದ್ದ ಸುಜಾತಾ ಬಿಗ್ ಮನೆಯಲ್ಲಿ ಹೇಗಿರಲಿದ್ದಾರೆ ಎನ್ನುವುದು ಎಲ್ಲರ ಕುತೂಹಲ.

ಮೊದಲನೆ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ಕುರಿ ಪ್ರತಾಪ್ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಕುತೂಹಲ ಮೂಡಿಸಿರುವ ಬಿಗ್ ಬಾಸ್ ಸೀಸನ್-7ನಲ್ಲಿ ಇಂಟ್ರಸ್ಟಿಂಗ್ ಸ್ಪರ್ಧಿಗಳಿದ್ದಾರೆ. ನಾಳೆಯಿಂದ ಬಿಗ್ ಮನೆ ಹೇಗೆ ರಂಗೇರಲಿದೆ ಎನ್ನುವುದು ಪ್ರೇಕ್ಷಕರ ಸಧ್ಯದ ಕುತೂಹಲ.


Click it and Unblock the Notifications











