'ಯಕ್ಷಗಾನ ಡಬ್ಬಾ' ವಿವಾದಕ್ಕೆ ತೆರೆ ಎಳೆದ ಸುದೀಪ್
ಇದಕ್ಕೆ ಪ್ರತಿಕ್ರಿಯಿಸಿದ ರಿಷಿಕಾ, ನಮ್ಮ ತಾಯಿ ಅವರದ್ದೂ ಮಂಗಳೂರು. ನನಗೆ ಮಂಗಳೂರಿನ ಮೇಲೆ ಎಲ್ಲಿಲ್ಲದ ಮಮಕಾರವಿದೆ. ಅದೇ ರೀತಿ ಎಲ್ಲ ಕಲೆಗಳನ್ನೂ ತಾನು ಗೌರವಿಸುತ್ತೇನೆ. ಆದರೆ ಅಂದು ಅರುಣ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ. ಆದರೆ ಅದನ್ನು ನಾನು ಇಲ್ಲಿ ಹೇಳುವಂತಿಲ್ಲ. ನನಗೆ ಬೇಸರವಾಗಿ ಅಚಾನಕ್ಕಾಗಿ ಆ ರೀತಿ ಮಾತನಾಡಿದೆ. ಈ ಬಗ್ಗೆ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಕ್ಷಮೆಯಾಚಿಸಿದರು.
ಮಂಗಳೂರಿನವರು ನಾವು ವಿಶಾಲಹೃದಯಿಗಳು. ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ ಎಂದು ಸುಗುಣ ಹೇಳಿದರು. ಬಳಿಕ ರಿಷಿಕಾ ಪರವಾಗಿ ನಾನೂ ಕ್ಷಮಾಪಣೆ ಕೇಳುತ್ತಿದ್ದೇನೆ ಎಂದರು ಸುದೀಪ್ ಕ್ಷಮೆಯಾಚಿಸಿದರು. ಅರುಣ್ ಕೈಯಲ್ಲಿ ಒಂದು ಯಕ್ಷಗಾನ ಪದವನ್ನೂ ಹಾಡಿಸಿದರು. ಅಲ್ಲಿಗೆ "ಯಕ್ಷಗಾನ ಡಬ್ಬ" ಎಂಬ ವಿವಾದಕ್ಕೆ ತೆರೆಬಿತ್ತು.

ನರೇಂದ್ರ ಬಾಬು ಶರ್ಮಾ ಅವರೇ ನೀವೇನೋ ಹೋಗ್ತೀನಿ ಹೋಗ್ತೀನಿ ಅಂತಿದ್ದೀರಿ. ಆದರೆ ಆಟ ಆಡಿಸೋನು ಬಿಗ್ ಬಾಸ್. ನೀವು ಸೇಫ್ ಎಂದು ಹೇಳಿ ಕಡೆಗೆ ಅನುಶ್ರೀ, ರೋಹನ್ ನಡುವೆ ಟೆನ್ಷನ್ ಇಟ್ಟು ಅನುಶ್ರೀ ಅವರೇ ಸೂಟ್ ಕೇಶ್ ರೆಡಿ ಮಾಡಿಕೊಳ್ಳಿ, ಐದು ನಿಮಿಷ ಟೈಮು ಎಂದು ಹೇಳಿ ಒಂದೈದು ನಿಮಿಷ ಅನುಶ್ರೀ ಅವರ ಕನಸು ನುಚ್ಚುನೂರಾಗುವಂತೆ ಮಾಡಿಬಿಟ್ಟಿದ್ದರು.
ಅಲ್ಲಿಗೆ ಬಿಗ್ ಬಾಸ್ ಮನೆಯ ಇನ್ನೊಂದು ಅಂಕ ಮುಗಿದಿದೆ. ಈ ಶನಿವಾರ (ಮೇ 18) ಬಿಗ್ ಬಾಸ್ ಮನೆಯಲ್ಲಿ ಕಡ್ಡಿಪುಡಿ ತಂಡ ಬರುತ್ತಿದೆ. ಒಂದಷ್ಟು ಪ್ರಮೋಷನ್ ಇನ್ನೊಂದಿಷ್ಟು ಮನರಂಜನೆ ಇದ್ದೇ ಇದೆ. ಬಿಗ್ ಬಾಸ್ ಮನೆಯಲ್ಲಿ ಯೋಗಿಗೆ ಹೊಸ ಯೋಗ ಸಿಕ್ಕಂತಾಗಿದೆ.


Click it and Unblock the Notifications