ಚಂದನ್ ಶೆಟ್ಟಿ-ನಿವೇದಿತಾ ಎಂಗೇಜ್ ಬಗ್ಗೆ ಸುದೀಪ್ ಹೇಳಿದ್ದೇನು?

Recommended Video

ದಯವಿಟ್ಟು ನನ್ನನ್ನು ಕ್ಷಮಿಸಿ ಎಂದ ಚಂದನ್ ಶೆಟ್ಟಿ. | Chandan Shetty

ಗಾಯಕ ಚಂದನ್ ಶೆಟ್ಟಿ ಅವರು ಯುವದಸರಾ ವೇದಿಕೆಯಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿದ್ದರು. ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದು ಭಾರಿ ವಿರೋಧಕ್ಕೆ ಗುರಿಯಾಗಿತ್ತು.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಬಿಗ್ ಮನೆಯಲ್ಲಿ ಇಬ್ಬರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಬಿಗ್ ಬಾಸ್ ಮುಗಿದ ಮೇಲೂ ತಮ್ಮ ಫ್ರೆಂಡ್ ಷಿಪ್ ಮುಂದುವರಿಸಿದ್ದರು.

Sudeep React About Chandan Chetty And Niveditha Gowda Engage

ಈ ಸ್ನೇಹ ಈಗ ಪ್ರೀತಿಯಾಗಿ, ದಾಂಪತ್ಯಕ್ಕೆ ಸಜ್ಜಾಗಿದೆ. ಈ ವಿಷಯದ ಬಗ್ಗೆ ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ''ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪ್ರೀತಿ ಅವರಿಗೆ ಸಂಬಂಧಪಟ್ಟಿದ್ದು. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಬಿಗ್ ಬಾಸ್ ಸಾಧ್ಯವಾಗಿದ್ದು ಎಂದು ಹೇಳಲ್ಲ. ಬಿಗ್ ಬಾಸ್ ಬಳಿಕ ಆಗಿರುವ ಬೆಳವಣಿಗೆ. ಆ ಬಗ್ಗೆ ಸಂತೋಷವಿದೆ'' ಎಂದಿದ್ದಾರೆ.

ಬಿಗ್ ಬಾಸ್ ಮುಗಿಸಿದ ಮೇಲೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅನೇಕ ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಬರ್ತಡೇ, ಪಾರ್ಟಿ ಎಂದು ಸೆಲೆಬ್ರೇಟ್ ಮಾಡಿದ್ದರು. ಇದನ್ನೆಲ್ಲ ಗಮನಿಸಿದ ಜನಸಾಮಾನ್ಯರು ಇವರಿಬ್ಬರ ಮಧ್ಯೆ ಲವ್ ಇದೆ ಎಂದು ಹೇಳುತ್ತಿದ್ದರು.

ಅಂತಿಮವಾಗಿ, ಆ ಅಂತೆ-ಕಂತೆಗಳಿಗೆ ಚಂದನ್ ಶೆಟ್ಟಿ ಯುವ ದಸರಾ ವೇದಿಕೆಯಲ್ಲಿ ತೆರೆ ಎಳೆದಿದ್ದರು. ಈಗ ಅಧಿಕೃತವಾಗಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದು, ಎರಡು ಮನೆಯವರು ಮದುವೆಗೆ ಸಮ್ಮತಿಸಿದ್ದಾರಂತೆ. ಸದ್ಯದಲ್ಲೇ ಮದುವೆಯಾಗುವ ಪ್ಲಾನ್ ಕೂಡ ಮಾಡಿಕೊಂಡಿದ್ದಾರಂತೆ.

More from Filmibeat

English summary
Bigg Boss Kannada Host Kiccha Sudeep has react about chandan shetty and niveditha gowda engage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X