'ಬಿಗ್ ಬಾಸ್'ಗೆ ಸ್ಪರ್ಧಿಯಾಗಿ ಮಾಡಬಹುದು ಎಂದು ಸುದೀಪ್ ಸೂಚಿಸಿದ್ದು ಈ ಒಬ್ಬರನ್ನು ಮಾತ್ರ

Recommended Video

ಬಿಗ್ ಬಾಸ್ ನಡೀತಿರೋದು ಯಾರಿಂದ ಗೊತ್ತಾ..? | FILMIBEAT KANNADA

'ಬಿಗ್ ಬಾಸ್' ಸ್ಪರ್ಧಿಗಳ ಆಯ್ಕೆ ವಿಚಾರದಲ್ಲಿ ನನ್ನ ಭಾಗವಹಿಸುವಿಕೆ ಇರುವುದಿಲ್ಲ ಎಂದು ನಟ ಸುದೀಪ್ ತಿಳಿಸಿದ್ದಾರೆ. ನಿನ್ನೆ (ಅಕ್ಟೋಬರ್ 10) ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಚಾರದ ಬಗ್ಗೆಯೂ ಕಿಚ್ಚ ಮಾತನಾಡಿದರು.

'ಬಿಗ್ ಬಾಸ್'ಗೆ ಹೋಗಬೇಕು ಎನ್ನುವ ಆಸೆ ಅನೇಕರಿಗೆ ಇರುತ್ತದೆ. ಇದು ಸುದೀಪ್ ಮೇಲೆಯೂ ಕೆಲವು ಬಾರಿ ಒತ್ತಡ ಆಗಿದೆ. ''ನಮ್ಮ ಹುಡುಗ ಒಬ್ಬ ಬಿಗ್ ಬಾಸ್ ಗೆ ಹೋಗಬೇಕು, ಸಹಾಯ ಮಾಡಿ'' ಎಂದು ಕೆಲ ರಾಜಕಾರಣಿಗಳು ಕೂಡ ಸುದೀಪ್ ಆಗಾಗ ಕರೆ ಮಾಡಿದ್ದಾರಂತೆ.

ಆದರೆ, ಸುದೀಪ್ ಈ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಸ್ಪರ್ಧಿಗಳ ಆಯ್ಕೆಯನ್ನು ಬಿಗ್ ಬಾಸ್ ಆಯೋಜಕರಿಗೆ ಬಿಡುತ್ತಾರೆ. ಆದರೆ, 'ಬಿಗ್ ಬಾಸ್' ಸೀಸನ್ 2 ರಲ್ಲಿ ಮಾತ್ರ ಸುದೀಪ್ ಕ್ರಿಕೆಟ್ ಆಟಗಾರ ಅಯ್ಯಪ್ಪರನ್ನು ರೆಫರ್ ಮಾಡಿದ್ದರು.

Sudeep Referred Ayyappa For Bigg Boss Contestant

'ಬಿಗ್ ಬಾಸ್' ಸೀಸನ್ 3 ಕಾರ್ಯಕ್ರಮ ಪ್ರಾರಂಭ ಆಗಲು ಕೆಲವೇ ದಿನಗಳ ಇರುವಾಗ ಒಬ್ಬ ಕ್ರಿಕೆಟ್ ಆಟಗಾರನನ್ನು ಹಾಕಬೇಕು ಎನ್ನುವ ಮಾತು ಬಂತು. ಕೊನೆಯ ಘಳಿಗೆ ಆಗಿರುವ ಕಾರಣ ಸುದೀಪ್ ನಟಿ ಪ್ರೇಮ ಸಹೋದರ, ಕ್ರಿಕೆಟ್ ಆಟಗಾರ ಅಯ್ಯಪ್ಪ ಹೆಸರುನ್ನು ಸೂಚಿಸಿದರು.

''ಅಯ್ಯಪ್ಪ ನನಗೆ ಪರಿಚಯ ಇಲ್ಲ. ನಿಮಗೆ ಬೇಕಾದರೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಬಹುದು'' ಎಂದು ಸುದೀಪ್ ಹೇಳಿದ್ದರಂತೆ. ಅಯ್ಯಪ್ಪ ಹೆಸರನ್ನು ಸುದೀಪ್ ಸೂಚಿಸಿದರೆ ವಿನಃ, ಒತ್ತಡ ಹಾಕಿಲ್ಲ. 'ಬಿಗ್ ಬಾಸ್' ಆಯೋಜಕರಿಗೂ ಅಯ್ಯಪ್ಪ ಇಷ್ಟ ಆಗಿದ್ದು, ಸ್ಪರ್ಧಿಯಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಬಿಟ್ಟರೆ, ಸುದೀಪ್ ಇದುವರೆಗೆ ಯಾವ ಸ್ಪರ್ಧಿಯನ್ನು ರೆಫರ್ ಮಾಡಿಲ್ಲ.

More from Filmibeat

English summary
Bigg Boss Kannada Season 7 : Sudeep referred cricketer Ayyappa for Bigg Boss contestant in season 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X