Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Automobiles
ಕಿಗರ್ ಕಾರು ವಿತರಣೆ ಆರಂಭವಾದ ಮೊದಲ ದಿನವೇ 1,100 ಯುನಿಟ್ ಮಾರಾಟ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ನಿರೂಪಣೆ ಬಗ್ಗೆ ಬೇಸರಗೊಂಡ ವೀಕ್ಷಕ: ಖಡಕ್ ಉತ್ತರ ಕೊಟ್ಟ ಕಿಚ್ಚ

ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಲಿಸಿದ್ರೆ, ಕಿಚ್ಚ ಸುದೀಪ್ ಅತ್ಯುತ್ತಮ ನಿರೂಪಕ ಎನ್ನುವುದು ವೀಕ್ಷಕರ ಅಭಿಪ್ರಾಯ. ಅದನ್ನ ಪ್ರತಿಯೊಬ್ಬರು ಕೂಡ ಒಪ್ಪಿಕೊಂಡಿದ್ದಾರೆ.
ಅಲ್ಲೊಬ್ಬ, ಇಲ್ಲೊಬ್ಬ ವ್ಯಕ್ತಿ ಕಿಚ್ಚನ ನಿರೂಪಣೆ ಬಗ್ಗೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳ ಬಳಿ ಸುದೀಪ್ ನಡೆದುಕೊಳ್ಳುವ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಉಂಟು. ಆದ್ರೆ, ಇದ್ಯಾವುದಕ್ಕು ಸುದೀಪ್ ತಲೆಕೆಡಸಿಕೊಂಡಿಲ್ಲ ಮತ್ತು ಪ್ರತಿಕ್ರಿಯೆ ನೀಡುವುದಿಲ್ಲ. ಸಮಾಧಾನವಾಗಿ ಎಲ್ಲವನ್ನ ಮ್ಯಾನೇಜ್ ಮಾಡ್ತಾರೆ.
ಆದ್ರೀಗ, ಸುದೀಪ್ ನಿರೂಪಣೆ ಬಗ್ಗೆ ಬಿಗ್ ಬಾಸ್ ವೀಕ್ಷಕರೊಬ್ಬರು ಕಿಚ್ಚನಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಸುದೀಪ್ ಕೂಡ ಅಷ್ಟೇ ಬುದ್ಧಿವಂತಿಕೆಯಿಂದ ಉತ್ತರ ಕೊಟ್ಟಿದ್ದಾರೆ. ಹಾಗಿದ್ರೆ, ಸುದೀಪ್ ಬಗ್ಗೆ ಆ ಅಭಿಮಾನಿ ಹೇಳಿದ್ದೇನು? ಸುದೀಪ್ ಕೊಟ್ಟ ಉತ್ತರವೇನು? ಮುಂದೆ ಓದಿ.....

ಸುದೀಪ್ ಪಕ್ಷಪಾತ ಮಾಡ್ತಾರಂತೆ?
ಬಿಗ್ ಬಾಸ್ ನಿರೂಪಣೆಯಲ್ಲಿ ಸುದೀಪ್ ಪಕ್ಷಪಾತ ಮಾಡ್ತಿದ್ದಾರೆ ಎಂಬ ಆರೋಪವನ್ನ ಪ್ರೇಕ್ಷಕನೊಬ್ಬ ಮಾಡಿದ್ದಾರೆ. ಸ್ಪರ್ಧಿ ಬಳಿ ಸುದೀಪ್ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಆ ವ್ಯಕ್ತಿ ಮಾಡಿದ ಕಾಮೆಂಟ್ ನೋಡಿ
''ನನ್ನ ವಿನಮ್ರ ವಿನಂತಿ...ಪಕ್ಷಪಾತಿ ನಿರೂಪಣೆ ಮಾಡಬೇಡಿ. ಜೆಕೆ ಅವರ ವಿಚಾರದಲ್ಲಿ ನೀವು ಮಾಡಿದ್ದನ್ನ ಇಡೀ ಕರ್ನಾಟಕದ ಜನ ನೋಡಿದ್ದಾರೆ'' ಎಂದು ಕಾಮೆಂಟ್ ಮಾಡಿದ್ದಾರೆ.
ಸುದೀಪ್ ದಂಪತಿಗೆ 'ಜೆಕೆ' ಧನ್ಯವಾದ ಹೇಳಿದ್ದೇಕೆ?

ಸುದೀಪ್ ಕೊಟ್ಟು ಬುದ್ಧಿವಂತಿಕೆ ಉತ್ತರ
''ಈ ವೀಕ್ಷಕನಿಗೆ ಟ್ವಿಟ್ಟರ್ ನಲ್ಲೇ ಉತ್ತರ ಕೊಟ್ಟ ಸುದೀಪ್, ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಖಚಿತವಾಗಿ ಸರ್....ಈ ಸಂದೇಶವನ್ನ ನನಗೆ ಕಳುಹಿಸಲು ಕರ್ನಾಟಕದ ಎಲ್ಲಾ ಜನರು ನಿಮ್ಮನ್ನು ಸಂಪರ್ಕಿಸಿದ್ದಾರೆ ಎಂದು ನಾನು ಖುಷಿ ಪಡುತ್ತೇನೆ'' ಎಂದು ಹೇಳುವ ಮೂಲಕ ಆ ಪ್ರೇಕ್ಷಕನಿಗೆ ಉತ್ತರಿಸಿದ್ದಾರೆ.

ಅಭಿಮಾನಿಗಳು ಅಭಿಪ್ರಾಯ
ಟಿವಿ ವೀಕ್ಷಕನೊಬ್ಬನ ಈ ಸಂದೇಶ ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಸುದೀಪ್ ಅವರ ನಿರೂಪಣೆ ಬಗ್ಗೆ ಮಾತನಾಡುವ ಹಕ್ಕಿಲ್ಲ ನಿಮಗೆ, ನೀವು ಸರಿಯಾಗಿ ಕಾರ್ಯಕ್ರಮ ನೋಡಿಲ್ಲ. ಅವರು ಅತ್ಯುತ್ತಮ ನಿರೂಪಕ. ಎಲ್ಲಿಯೂ ಪಕ್ಷಪಾತ ಮಾಡಿಲ್ಲ. ಮಾಡುವ ಅವಶ್ಯಕತೆ ಅವರಿಗಿಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ.