ವಿಡಿಯೋ: 'ಬಿಗ್ ಬಾಸ್ ಕನ್ನಡ-6' ಮೊದಲ ಪ್ರೋಮೋ ಬಂತು ನೋಡಿ..
ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ-6' ಸದ್ಯದಲ್ಲಿಯೇ ಆರಂಭ ಆಗಲಿದೆ. ವರದಿಗಳ ಪ್ರಕಾರ, ಸೆಪ್ಟೆಂಬರ್ ಕೊನೆಯ ವಾರದ ಹೊತ್ತಿಗೆ 'ಬಿಗ್ ಬಾಸ್ ಕನ್ನಡ-6' ಪ್ರಸಾರವಾಗಲಿದೆ.
ಈಗಾಗಲೇ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಕೆಲಸಗಳು ಪ್ರಾರಂಭಗೊಂಡಿದೆ. ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಈ ಶೋದ ಪ್ರೋಮೋ ಶೂಟ್ ನಲ್ಲಿ ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು.
ಇದೀಗ ಕನ್ನಡದ 'ಬಿಗ್ ಬಾಸ್' ಆರನೇ ಆವೃತ್ತಿಯ ಮೊಟ್ಟ ಮೊದಲ ಪ್ರೋಮೋ ಬಿಡುಗಡೆ ಆಗಿದೆ. 'ಬಿಗ್ ಬಾಸ್ ಕನ್ನಡ-6'ಗಾಗಿ ಹೊಸ ಮನೆ ತಲೆಯೆತ್ತಿದೆ ಎಂಬ ಸಂದೇಶವನ್ನ ಈ ಪ್ರೋಮೋದಲ್ಲಿ ನೀಡಲಾಗಿದೆ.

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾರಣ, ಕೆಲ ತಿಂಗಳ ಹಿಂದೆ 'ಬಿಗ್ ಬಾಸ್' ಮನೆ ಸುಟ್ಟು ಭಸ್ಮವಾಗಿತ್ತು. ಇದೀಗ ಅದೇ ಜಾಗದಲ್ಲಿ ಬೃಹತ್ ಮನೆ ತಲೆಯೆತ್ತಿದೆ.
''ಈ ಮನೆಯಲ್ಲಿ ಕಿಚ್ಚಿದೆ ಅಂತ ಮೊದಲಿನಿಂದಲೂ ನಾನು ಹೇಳುತ್ತಲೇ ಇದ್ದೆ. ಆದ್ರೆ, ಅದೇ ಕಿಚ್ಚು ಇಡೀ ಮನೆಯನ್ನೇ ಸುಟ್ಟು ಬೂದಿ ಮಾಡಲಿದೆ ಅಂತ ನನಗೆ ಗೊತ್ತಿರಲಿಲ್ಲ. ಅದೇ ಬೂದಿಯಿಂದ ಎದ್ದು ಬಂದಿರುವ ಕಿಚ್ಚು ಹೊಸ ಮನೆ ಕುಟ್ಟುತ್ತಿದೆ. ಹೊಸ ಮನೆ ಜೊತೆಗೆ ಹೊಸ ಹೊಸ ಸ್ಪರ್ಧಿಗಳು.. ಇನ್ನೊಂದು ಹೊಸ ಸೀಸನ್. ಮಜಾ ಏನು ಅಂದ್ರೆ ಈ ಮನೆಯಲ್ಲೂ ಕಿಚ್ಚಿರುತ್ತೆ, ಹುಚ್ಚಿರುತ್ತೆ, ಮನಸ್ಸಲ್ಲೇ ಮಡಗಿರುವ ಮಚ್ಚಿರುತ್ತೆ, ಕಾಡ್ಗಿಚ್ಚಿರುತ್ತೆ'' ಅಂತ ಸುದೀಪ್ ಹೇಳುವ ಪ್ರೋಮೋ ಇಲ್ಲಿದೆ, ನೋಡಿರಿ...


Click it and Unblock the Notifications











