ವೈರಲ್ ಆಯ್ತು ಚಿಕನ್ ಪಕೋಡ: ಇನ್ನೇನು ಮಾಡ್ತಾರೋ ಕಿಚ್ಚ.!

By Pavithra

Recommended Video

Bigg Boss Kannada Season 5 : ಸುದೀಪ್ ರವರ ಚಿಕನ್ ರೆಸಿಪಿ ಫುಲ್ ವೈರಲ್

ಪ್ರತಿವಾರ ಬಿಗ್ ಬಾಸ್ ನಲ್ಲಿ 'ಕಿಚ್ಚನ್ ಟೈಂ' ನಲ್ಲಿ ಸುದೀಪ್ ಅಭಿಮಾನಿಗಳಿಗಾಗಿ ಹಾಗೂ ಸೆಲೆಬ್ರಿಟಿಗಳಿಗೆ ಒಂದು ಸೂಪರ್ ಡೂಪರ್ ಆಗಿರುವ ಅಡುಗೆ ಒಂದನ್ನ ಹೇಳಿ ಕೊಡ್ತಾರೆ. ಅದರಿಂದ ಇಂಪ್ರೆಸ್ ಆಗಿರುವ ಕಿಚ್ಚನ ಅಭಿಮಾನಿಗಳು ತಾವು ಆ ಅಡುಗೆಯನ್ನ ಮನೆಯಲ್ಲಿ ಟ್ರೈ ಮಾಡ್ತಿದ್ದಾರೆ.

ಮೊದಲ ಎಪಿಸೋಡ್ ನಲ್ಲಿ ಕಿಚ್ಚ 'ಸಂಯುಕ್ತ ಹೆಗ್ಡೆ' ಅವ್ರಿಗೆ 'ಕಿರಿಕ್ ಚಿಕನ್' ಮಾಡೋದನ್ನ ಹೇಳಿಕೊಟ್ಟಿದ್ರು. ಅದನ್ನ ಅಭಿಮಾನಿಗಳು ತಮ್ಮದೇ ಸ್ಟೈಲ್ ನಲ್ಲಿ ಟ್ರೈ ಮಾಡಿ ಕಿಚ್ಚನಿಗೆ ಟ್ವಿಟ್ಟರ್ ಮೂಲಕ ಅರ್ಪಿಸಿದ್ರು. ಸಸ್ಯಹಾರಿಗಳಿಗಾಗಿ ವೆಜ್ ರೆಸಿಪಿಯನ್ನೂ ಕಿಚ್ಚ ಹೇಳಿಕೊಟ್ಟಿದ್ದರು. ಮುಂದೆ ಓದಿರಿ...

ಕಿಚ್ಚನಿಗಾಗಿ ಅಡುಗೆ ಮಾಡಿದ ಪ್ರಕಾಶ್

ಕಿಚ್ಚನಿಗಾಗಿ ಅಡುಗೆ ಮಾಡಿದ ಪ್ರಕಾಶ್

ಎರಡನೇ ವಾರದಲ್ಲಿ ಗಾಯಕ 'ವಿಜಯ್ ಪ್ರಕಾಶ್' ವೆಜ್ ಅಡುಗೆಯನ್ನ ಟ್ರೈ ಮಾಡಿದ್ರು. ಅದರ ಜೊತೆಗೆ 'ಸುದೀಪ್' ಕೂಡ ಒಂದು ಡಿಶ್ ಅನ್ನ ಮಾಡಿ ವಿಜಯ್ ಅವ್ರಿಗೆ ತಿನ್ನೋದಕ್ಕೆ ನೀಡಿದ್ರು.

ಅಭಿಮಾನಿಗಳಿಗಿಷ್ಟ ಇಲ್ಲ ಬೇಕಿಂಗ್ ತಿಂಡಿ

ಅಭಿಮಾನಿಗಳಿಗಿಷ್ಟ ಇಲ್ಲ ಬೇಕಿಂಗ್ ತಿಂಡಿ

ಮೂರನೇ ವಾರ 'ಕಿಚ್ಚನ್ ಟೈಂ' ನಲ್ಲಿ ಬಂದಿದ್ದು ಹುಬ್ಬಳ್ಳಿ ಬೆಡಗಿ ನಟಿ ಮಯೂರಿ. ಮಯೂರಿ ಅಪ್ಪಟ ಸಸ್ಯಾಹಾರಿ ಆಗಿರೋದ್ರಿಂದ ಕಿಚ್ಚ ಬೇಕಿಂಗ್ ಫುಡ್ ಮಾಡೋದನ್ನ ಮಯೂರಿಗೆ ಹೇಳಿಕೊಟ್ರು. ಆದರೆ ಅಭಿಮಾನಿಗಳು ಅದನ್ನ ಫಾಲೋ ಮಾಡಲಿಲ್ಲ

ಸಖತ್ ವೈರಲ್ ಆಯ್ತು 'ಪಕೋಡ ರೆಸಿಪಿ'

ಸಖತ್ ವೈರಲ್ ಆಯ್ತು 'ಪಕೋಡ ರೆಸಿಪಿ'

ಕಳೆದ ವಾರ 'ಉಪ್ಪು ಹುಳಿ ಖಾರ' ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ನಟಿ 'ಮಾಲಾಶ್ರೀ' ಚಿಕನ್ ಪಕೋಡ ಮಾಡೋದನ್ನ ಕಲಿತರು. ಬಿಗ್ ಬಾಸ್ ನೋಡಿದ ಪ್ರೇಕ್ಷಕನಿಗೆ ಈ ರೆಸಿಪಿ ಇಷ್ಟ ಆಯ್ತು. ಅದೇ ಕಾರಣಕ್ಕೆ ಅಭಿಮಾನಿಗಳು ಚಿಕ್ಕನ್ ಪಕೋಡ ಮನೆಯಲ್ಲಿ ಟ್ರೈ ಮಾಡೋದಕ್ಕೆ ಶುರು ಮಾಡಿದ್ದಾರೆ.

ಸುದೀಪ್ ಮಾಡೋ ಚಿಕನ್ ರೆಸಿಪಿ ಆಗುತ್ತೆ ಫೇಮಸ್

ಸುದೀಪ್ ಮಾಡೋ ಚಿಕನ್ ರೆಸಿಪಿ ಆಗುತ್ತೆ ಫೇಮಸ್

ಸುದೀಪ್ ಅಭಿಮಾನಿಗಳು ಕಿಚ್ಚನಂತೆ ಚಿಕನ್ ಪ್ರಿಯರು. ನಾಲ್ಕು ವಾರಗಳಲ್ಲಿ ಮಾಡಿರುವ ಎರಡು ಚಿಕನ್ ಡಿಶ್ ಫೇಮಸ್ ಆಗಿರೋದ್ರ ಜೊತೆಗೆ ಅಭಿಮಾನಿಗಳು ಅವುಗಳನ್ನ ಮನೆಯಲ್ಲೇ ಟ್ರೈ ಮಾಡಿದ್ದಾರೆ. ಮಾಡಿದ ನಂತ್ರ ಕಿಚ್ಚನಿಗೆ ಅದರ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಇದರಿಂದಲೇ ತಿಳಿಯುತ್ತೆ ಕಿಚ್ಚನ ಅಭಿಮಾನಿಗಳು ಅವರಂತೆ ಚಿಕನ್ ಪ್ರಿಯರು ಅನ್ನೋದು.

More from Filmibeat

English summary
Sudeep's Chicken Recipe goes viral on twitter. ಕಿಚ್ಚನ್ ಟೈಂ ನಲ್ಲಿ ಮಾಡೋ ಅಡುಗೆಯನ್ನ ತಮ್ಮ ಮನೆಯಲ್ಲಿಯೂ ಟ್ರೈ ಮಾಡುತ್ತಿರೋ ಸುದೀಪ್ ಅಭಿಮಾನಿಗಳು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X