'ಬಿಗ್ ಬಾಸ್-5' ಮುಗಿಸಿದ ಸುದೀಪ್ ಧನ್ಯವಾದ ಹೇಳಿದ್ದು ಯಾರಿಗೆ?
Recommended Video

ಮತ್ತೊಂದು ಬಿಗ್ ಬಾಸ್ ಆವೃತ್ತಿ ಯಶಸ್ವಿಯಾಗಿ ನೆರವೇರಿದೆ. ಕಳೆದ ನಾಲ್ಕು ವರ್ಷಗಳಿಂದ ಸಕ್ಸಸ್ ಫುಲ್ ಆಗಿ ನಿರೂಪಣೆ ಮಾಡುತ್ತಿರುವ ಕಿಚ್ಚ, ಐದನೇ ಆವೃತ್ತಿಯನ್ನ ಅದ್ಧೂರಿಯಾಗಿ ಮುಗಿಸಿದ್ದಾರೆ.
ಪ್ರತಿ ಶನಿವಾರ ಮತ್ತು ಭಾನುವಾರ ಆಯ್ತು ಅಂದ್ರೆ, ನಿಮ್ಮ ಮುಂದೆ ಬರ್ತಿದ್ದ ಸುದೀಪ್, ಸ್ಪರ್ಧಿಗಳಿಗೆ ಬುದ್ಧಿ ಹೇಳಿ, ಕೆಲವರಿಗೆ ಕಾಲೆಳೆದು, ಮತ್ತೆ ಕೆಲವರಿಗೆ ಎಚ್ಚರಿಕೆ ನೀಡಿ, ವೀಕ್ಷಕರಿಗೆ ಪೂರ್ತಿ ಮನನೀರಂಜನೆ ನೀಡುತ್ತಿದ್ದರು. ಇನ್ಮುಂದೆ ಇದ್ಯಾವುದು ಇಲ್ಲ. ಮುಂದಿನ ಆವೃತ್ತಿವರೆಗೂ ಬಿಗ್ ಬಾಸ್ ಗೆ ವಿಶ್ರಾಂತಿ.
ಐದನೇ ಬಿಗ್ ಬಾಸ್ ಯಶಸ್ವಿ ಮುಗಿಸಿದ ನಂತರ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ. ಅಷ್ಟಕ್ಕೂ, ಕಿಚ್ಚ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಯಾರಿಗೆ? ಧನ್ಯವಾದ ತಿಳಿಸಿದ್ದು ಯಾರಿಗೆ? ಇದನ್ನ ತಿಳಿಯಲು ಮುಂದೆ ಓದಿ.....

ಎಲ್ಲರಿಗೂ ಥ್ಯಾಂಕ್ಸ್
''ಮತ್ತೊಂದು ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನ ಯಶಸ್ವಿಯಾಗಿ ಮುಗಿಸಲು ಕಾರಣವಾದ ಎಲ್ಲರಿಗೂ ಧನ್ಯವಾದಗಳು. ಅದ್ಭುತವಾದ ತಾಂತ್ರಿಕ ತಂಡ ಮತ್ತು ಸ್ಪರ್ಧಿಗಳು ಈ ಕಾರ್ಯಕ್ರಮವನ್ನ ಸಕ್ಸಸ್ ಮಾಡಿದ್ದಾರೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಹಾಗೂ ಕಲರ್ಸ್ ಸೂಪರ್ ವಾಹಿನಿಗೂ ವಿಶೇಷವಾದ ಧನ್ಯವಾದ'' - ಸುದೀಪ್, ನಟ, ನಿರೂಪಕ

ನೀವಿಲ್ಲದೇ ಬಿಗ್ ಬಾಸ್ ಊಹಿಸಲು ಸಾಧ್ಯವಿಲ್ಲ
''ಬಿಗ್ ಬಾಸ್ ಕಾರ್ಯಕ್ರಮವನ್ನ ಅತ್ಯುತ್ತಮವಾಗಿ ಮುಗಿಸಿಕೊಟ್ಟಿದ್ದೀರಾ. ನಿಮಗೆ ಶುಭಾಶಯ. ನೀವಿಲ್ಲದೇ ಬಿಗ್ ಬಾಸ್ ಶೋವನ್ನ ಊಹಿಸಲು ಸಾಧ್ಯವಿಲ್ಲ. ನೀವು ಅದಕ್ಕೆ ಎಷ್ಟು ಹೊಂದಿಕೊಂಡಿದ್ದೀರಾ. ಬಿಗ್ ಬಾಸ್ ಕನ್ನಡ 6ಗೆ ಕಾಯುತ್ತಿರುತ್ತೇವೆ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರತಿವಾರವೂ ಮಿಸ್ ಮಾಡ್ಕೊಳ್ತೀವಿ
''ಇನ್ಮುಂದೆ ಪ್ರತಿವಾರವೂ ಟಿವಿಯಲ್ಲಿ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೇವೆ. ಈ ಶೋವನ್ನ ಹಾಗೂ ಸ್ಪರ್ಧಿಗಳನ್ನ ನಿಮ್ಮ ಮನೆಯವರಂತೆ ನೋಡಿಕೊಳ್ಳುತ್ತೀರಾ, ಪ್ರೀತಿಸುತ್ತೀರಾ. ನಿಮ್ಮ ನಿರೂಪಣೆ ಅದ್ಭುತ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಥ್ಯಾಂಕ್ ಯೂ ಸುದೀಪ್
''ನಿಜಕ್ಕೂ ಬಿಗ್ ಬಾಸ್ ಮಿಸ್ ಕಾರ್ಯಕ್ರಮವನ್ನ ಮಿಸ್ ಮಾಡಿಕೊಳ್ಳುತ್ತೇವೆ. ಥ್ಯಾಂಕ್ ಯೂ ಸೋ ಮಚ್. ನಮ್ಮನ್ನ ಮನರಂಜಿಸಿದ್ದಕ್ಕೆ ಉತ್ತೇಜನ ನೀಡಿದ್ದಕ್ಕೆ. ಆದಷ್ಟೂ ಬೇಗ ಮುಂದಿನ ಅವೃತ್ತಿಯಲ್ಲಿ ವಾಪಸ್ ಬನ್ನಿ. ಕಾಯುತ್ತಿರುತ್ತೇವೆ'' ಎಂದು ಖುಷಿ ಹಂಚಿಕೊಂಡಿದ್ದಾರೆ.


Click it and Unblock the Notifications











