ಸದ್ದಿಲ್ಲದೆ ನಡೆದಿದೆ 'ಬಿಗ್ ಬಾಸ್ ಕನ್ನಡ-6' ಸುದೀಪ್ ಪ್ರೋಮೋ ಶೂಟ್
Recommended Video

'ಬಿಗ್ ಬಾಸ್ ಕನ್ನಡ-5' ನಿನ್ನೆ ಮೊನ್ನೆಯಷ್ಟೇ ಮುಗಿದ ಹಾಗಿದೆ. ಕನ್ನಡ Rapper ಚಂದನ್ ಶೆಟ್ಟಿ 'ಬಿಗ್ ಬಾಸ್' ಟ್ರೋಫಿಗೆ ಮುತ್ತಿಟ್ಟು ಕೆಲವೇ ದಿನಗಳು ಉರುಳಿದ ಹಾಗಿದೆ. ಸೆಲೆಬ್ರಿಟಿ ಹಾಗೂ ಕಾಮನ್ ಮ್ಯಾನ್ ನಡುವಿನ ಕಿತ್ತಾಟ ಇನ್ನೂ ಕಣ್ಣು ಮುಂದೆ ಇರುವಾಗಲೇ 'ಬಿಗ್ ಬಾಸ್ ಕನ್ನಡ-6'ಗೆ ಚಾಲನೆ ಸಿಕ್ಕಿದೆ.
ಕನ್ನಡ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿರುವ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.
ಕಳೆದ ಸೀಸನ್ ನಂತೆ ಈ ಬಾರಿಯೂ 'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರಿಗೆ ಪ್ರವೇಶ ಇದೆ. ವೂಟ್ ಆಪ್ ಮೂಲಕ ಅರ್ಜಿ ಸಲ್ಲಿಸಿರುವವರ ಆಡಿಷನ್ ಕಾರ್ಯ ಬಿರುಸಿನಿಂದ ಸಾಗಿದೆ.
ಈ ನಡುವೆ 'ಬಿಗ್ ಬಾಸ್ ಕನ್ನಡ-6' ಪ್ರೋಮೋ ಶೂಟ್ ಮುಗಿದಿದೆ. ಸೂಪರ್ ಸ್ಟೈಲಿಶ್ ಲುಕ್ ನಲ್ಲಿ ಕಿಚ್ಚ ಸುದೀಪ್ ಪ್ರೋಮೋ ಶೂಟ್ ಮಾಡಿದ್ದಾರೆ. ಬೇಕಾದ್ರೆ, ನೀವೇ ನೋಡಿರಿ...

ಸ್ಪೆಷಲ್ ಸೆಟ್, ಸ್ಪೆಷಲ್ ಪ್ರೋಮೋ ಶೂಟ್
ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಹಾಗೂ ಜಾಕೆಟ್ ತೊಟ್ಟು... ಸೋಫಾ ಮೇಲೆ ಕೂತು ಸುದೀಪ್ 'ಫೋನ್ ಹಾಗೂ ವೂಟ್ ಆಪ್' ಬಗ್ಗೆ ಮಾತನಾಡುವ ಪ್ರೋಮೋವನ್ನ ನಿನ್ನೆ ಚಿತ್ರೀಕರಣ ಮಾಡಲಾಗಿದೆ. ಇದಕ್ಕಂತಲೇ ವಿಶೇಷ ಸೆಟ್ ಕೂಡ ನಿರ್ಮಾಣ ಮಾಡಲಾಗಿತ್ತು.

ವೂಟ್ ನಲ್ಲಿ ನೋಡಿಲ್ಲ ಅಂದ್ರೆ, 'ಬಿಗ್ ಬಾಸ್' ನೋಡಿಲ್ಲ.!
''ಮೆಸೇಜ್ ಗೆ ಫೋನ್,
ಸೋಷಿಯಲ್ ಮೀಡಿಯಾಗೂ ಫೋನ್,
ಫೋಟೋ ತೆಗೆಯೋಕೂ ಫೋನ್,
ಬ್ಯಾಂಕಿಂಗ್ ವ್ಯವಸ್ಥೆಗೂ ಫೋನ್,
ಹೀಗೆ ಇಡೀ ಲೈಫ್ ಫೋನ್ ನಲ್ಲಿ ಇರಬೇಕಾದರೆ, 'ಬಿಗ್ ಬಾಸ್' ಫೋನ್ ನಲ್ಲಿ ಇಲ್ಲ ಅಂದ್ರೆ...
ವೂಟ್ ಡೌನ್ ಲೋಡ್ ಮಾಡಿಕೊಳ್ಳಿ...
ಬಿಗ್ ಬಾಸ್ ನೋಡಿ...
ವೂಟ್ ನಲ್ಲಿ ನೋಡಿಲ್ಲ ಅಂದ್ರೆ ನೀವು ಬಿಗ್ ಬಾಸೇ ನೋಡಿಲ್ಲ'' ಎಂಬ ಡೈಲಾಗ್ ಇರುವ ಸುದೀಪ್ ಪ್ರೋಮೋವನ್ನ ನಿನ್ನೆ ಶೂಟಿಂಗ್ ಮಾಡಲಾಗಿದೆ.

ಈ ಬಾರಿ ವೂಟ್ ನಲ್ಲಿ ಬೋನಸ್.?
''ವೂಟ್ ನಲ್ಲಿ ನೋಡಿಲ್ಲ ಅಂದ್ರೆ ನೀವು ಬಿಗ್ ಬಾಸೇ ನೋಡಿಲ್ಲ'' ಅಂತ ಸುದೀಪ್ ಹೇಳಿರುವುದರಿಂದ ಈ ಬಾರಿ ವೂಟ್ ನಲ್ಲಿ ವೀಕ್ಷಕರಿಗೆ 'ಬಿಗ್ ಬಾಸ್' ಕಡೆಯಿಂದ ಎಕ್ಸ್ ಟ್ರಾ ಬೋನಸ್ ಸಿಗುವ ಹಾಗಿದೆ.

ಯಾವಾಗ್ಲಿಂದ 'ಬಿಗ್ ಬಾಸ್' ಶುರು.?
ಮೂಲಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ 'ಬಿಗ್ ಬಾಸ್ ಕನ್ನಡ-6' ಪ್ರಸಾರ ಆಗಲಿದೆ. ಎಂದಿನಂತೆ ಈ ಬಾರಿಯೂ ಸುದೀಪ್ ನಿರೂಪಣೆ ಇರಲಿದೆ. ಬಿಗ್ ಬಾಸ್ ಕನ್ನಡ ಆರನೇ ಸೀಸನ್ ಗಾಗಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬೃಹತ್ ಮನೆ ತಲೆಯೆತ್ತಿದೆ.


Click it and Unblock the Notifications











