ವಿಜಯ್ ರಾಘವೇಂದ್ರ ಅವರಿಗೆ ಬೆಂಡೆತ್ತಿದ ಸುದೀಪ್
ಅರುಣ್ ಹಾಗೂ ಚಂದ್ರಿಕಾ ಅವರ ಶೃಂಗಾರ, ಹಾಸ್ಯ ರಸದ ಬಳಿಕ ಸುದೀಪ್ ಅವರು ಕೊಂಚ ಭಯಾನಕ ರಸ ಸ್ಫುರಿಸಿದರು. ಬರುಬರುತ್ತಾ ನಿಮ್ಮಲ್ಲಿ ಉತ್ಸಾಹ ಕಡಿಮೆಯಾಗುತ್ತಿದೆ. ಮೆಂಟಲಿ ಡ್ರೈನ್ ಔಟ್ ಆಗಿದ್ದೀರಾ. ಆಸಕ್ತಿ ತೋರಿಸುತ್ತಿಲ್ಲ. ನನ್ನ ಪ್ರಕಾರ ಕಷ್ಟ ಇಲ್ಲದೆ ಬರುವಂತಹ ಗೆಲುವು ಗೆಲುವೇ ಅಲ್ಲ. ಸೈಕಲ್ ಟಾಸ್ಕ್ ಸರಿಯಾಗಿ ನಿಭಾಯಿಸದೇ ಇರುವ ಬಗ್ಗೆ ಕ್ಲಾಸ್ ತೆಗೆದುಕೊಂಡರು.
ಸೈಕಲ್ ತುಳಿಯುವ ಟಾಸ್ಕನ್ನು ಎಲ್ಲರೂ ಅರ್ಧಕ್ಕೆ ಬಿಟ್ಟ ಬಗ್ಗೆ ಬೆಂಡೆತ್ತಿದರು. ಬಳಿಕ ವಿಜಯ್ ರಾಘವೇಂದ್ರ ಅವರು ಮಾಡಿದ ಆರೋಪಗಳಿಗೂ ವಿವರಣೆ ನೀಡಿತ್ತಾ ಅವರನ್ನೂ ತರಾಟೆಗೆ ತೆಗೆದುಕೊಂಡರು. ಟೆಕ್ನಿಕಲಿ ಸರಿಯಿಲ್ಲ, ಲೈಟ್ ಇರಲಿಲ್ಲ, ಮಾನವೀಯತೆ ಇಲ್ಲ ಎಂಬ ಆರೋಪಗಳಿಗೆ ಖಡಕ್ ಉತ್ತರವನ್ನೂ ಕೊಟ್ಟರು.

ಬಿಗ್ ಬಾಸ್ ನಮಗೆ ಚೀಟ್ ಮಾಡಿದ ಎಂದು ಎಲ್ಲರೂ ಆರೋಪಿಸಿದಿರಿ. ಈಗ ನಿಮ್ಮ ಮುಂದೆಯೇ ನಾನು ಪಾಯಿಂಟ್ಸನ್ನು ಲೆಕ್ಕ ಮಾಡುತ್ತೇನೆ ಎಂದು ಹೇಳಿ ಲೆಕ್ಕಾಚಾರ ತಪ್ಪಿದ ಬಗ್ಗೆ ತೋರಿಸಿದರು. ಏಳು ಸಾವಿರ ಚಿಲ್ಲರೆ ಪಾಯಿಂಟ್ಸ್ ಗೆ ಬದಲಾಗಿ ಏಳು ಸಾವಿರ ಪಾಯಿಂಟ್ಸ್ ಎಂದು ಲಗ್ಜುರಿ ಬಜೆಟನ್ನು ತಪ್ಪಾಗಿ ಲೆಕ್ಕಹಾಕಿದ್ದನ್ನು ತೋರಿಸಿದರು. ಇದಕ್ಕೆ ಮನೆಯ ಸದಸ್ಯರ ಮೌನವೇ ಉತ್ತರವಾಗಿತ್ತು.
ಇನ್ನು ನಿಮಗೆ ಉಳಿದಿರುವುದು ನಾಲ್ಕೇ ನಾಲ್ಕು ವಾರ. ಫೈನಲ್ಸ್ ಬರುತ್ತಿದ್ದಂತೆ ಟಾಸ್ಕ್ ಗಳು ಟಫ್ ಆಗುತ್ತಾ ಹೋಗುತ್ತವೆ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಲ್ಲವನ್ನೂ ನೀಟಾಗಿ ನಿಭಾಯಿಸಿ. ಗೆಲುಗು ನಿಮ್ಮ ಕೈಯಲ್ಲೇ ಇದೆ ಎಂದೂ ಎಚ್ಚರಿಸಿದರು.


Click it and Unblock the Notifications











