ಮೂರರಿಂದ ನಾಲ್ಕು ಗಂಟೆಗಳು ಮಾತ್ರ ಸುದೀಪ್ ನಿದ್ದೆ

By Rajendra
<ul id="pagination-digg"><li class="previous"><a href="/tv/sudeep-slams-vijay-raghavendra-bigg-boss-074522.html">« Previous</a>

ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಇಲ್ಲ ಎಂಬ ವಿಚಾರ ವೀಕ್ಷಕರಿಗೆ ಗೊತ್ತಿತ್ತು. ಆದರೆ ಸ್ಪರ್ಧಿಗಳಿಗೆ ಅದರ ಸುಳಿವಿರಲಿಲ್ಲ. ಈ ಬಾರಿ ಓಟಿಂಗ್ ಲೈನ್ಸ್ ಕ್ಲೋಸ್ ಆಗಿದೆ ಎಂಬುದು ನಮಗೂ, ನಿಮಗೆ ಮಾತ್ರ ಗೊತ್ತು. ಆದರೆ ಅವರಿಗೆ ಗೊತ್ತಿಲ್ಲವಲ್ಲಾ. ಬನ್ನಿ ಸ್ವಲ್ಪ ಮಜಾ ತಗೊಳ್ಳೋಣ ಎಂದು ಹೇಳಿ ಸ್ಪರ್ಧಿಗಳು ಬೆವರುವಂತೆ ಮಾಡಿದರು.

ಈ ಬಾರಿ ಚಂದ್ರಿಕಾ, ನಿಕಿತಾ, ಶರ್ಮಾ ಹಾಗೂ ವಿಜಯ್ ರಾಘವೇಂದ್ರ ನಾಮಿನೇಟ್ ಆಗಿದ್ದರು. ಮೊದಲು ಬ್ರಹ್ಮಾಂಡ ಶರ್ಮಾ ಅವರೇ ನೀವು ಸೇಫ್ ಎಂದು ಹೇಳಿದರು. ಬಳಿಕ ಚಂದ್ರಿಕಾ ಅವರನ್ನೇ ಸೇಫ್ ಮಾಡಿ ಕೊನೆಗೆ ನಿಕಿತಾ ಹಾಗೂ ರಾಘು ನಡುವೆ ಕೊಂಚ ಪೀಕಲಾಟ ಇಟ್ಟು ತಮಾಷೆ ನೋಡಿದರು ಸುದೀಪ್.

ನಿಕಿತಾ ಅವರಂತೂ ಎಲ್ಲಿ ತಾನು ಈ ಬಾರಿ ಮನೆಯಿಂದ ಹೊರಗೆ ಹೋಗುತ್ತೇನೋ ಎಂದು ಆತಂಕಕ್ಕೆ ಒಳಗಾಗಿದ್ದರು. ಬಹುಶಃ ನನಗೆ ಕನ್ನಡ ಬರುವುದಿಲ್ಲ. ಅದಕ್ಕೆ ನನ್ನನು ಮನೆಯಿಂದ ಕಳುಹಿಸುತ್ತಿದ್ದಾರೆ ಎಂದೂ ಹೇಳಿಕೊಂಡರು. ಸುದಿಪ್ ಅವರು, ನೀವು ಸೇಫ್ ಎಂದಾಗ ಅವರ ಕಣ್ಣಲ್ಲಿ ಆನಂದಭಾಷ್ಪಗಳು ತೊಟ್ಟಿಕ್ಕಿದವು.

Bigg Boss highlights

ಬ್ಯಾಗ್ ತೆಗೆದುಕೊಳ್ಳಲು ವಿಜಯ್ ರಾಘವೇಂದ್ರ ರೆಡಿಯಾಗಿದ್ದ ಎನ್ನಿಸುತ್ತದೆ. ಅವರು ಎಂದಿನಂತೆ ನಿರ್ಲಿಪ್ತರಾಗಿಯೇ ಇದ್ದರು. ಆದರೆ ಅವರನ್ನು ಸ್ವಲ್ಪ ಕಾಡಿಸಿದ ಬಳಿಕ ಕಿಚ್ಚ ಸುದೀಪ್ ನೀವು ಸೇಫ್ ಎಂದಾಗ ಎಲ್ಲರ ಮುಖದಲ್ಲೂ ಸಖೇದಾಶ್ಚರ್ಯ. ಬಳಿಕ ವಿಷಯ ತಿಳಿಸಿ ನಿಮ್ಮ ಜೊತೆ ಸ್ವಲ್ಪ ಹೊತ್ತು ಆಟ ಆಡಿಕೊಳ್ಳೋಣ ಎಂದೆನ್ನಿಸಿ ಹಾಗಾಗಿ ಹೀಗೆ ಮಾಡಿದೆವು ಎಂದರು.

ಬಳಿಕ ಮನೆಯಲ್ಲಿ ನಿದ್ರಾದೇವಿ ಆವಾಹನೆಯಾಗಿರುವ ಬಗ್ಗೆಯೂ ಸುದೀಪ್ ಗಮನಸೆಳೆದರು. ನೀವೆಲ್ಲಾ ನಿದ್ರೇನ ಎಂಜಾಯ್ ಮಾಡಿ. ಆದರೆ ಒಂದು ವಿಚಾರ ಹೇಳಿತ್ತೀನಿ, ಸ್ಲೀಪ್ ಈಸ್ ಎ ಡೆತ್ ಫರ್ ಎವರಿಬಡಿ. ನಾನು ಮೂರು, ನಾಲ್ಕು ಗಂಟೆಗಿಂತಲೂ ಹೆಚ್ಚಾಗಿ ನಿದ್ದೆ ಮಾಡಲ್ಲ. ನೀವು ಅಷ್ಟೇ ಹೆಚ್ಚಿಗೆ ನಿದ್ದೆ ಮಾಡಬೇಡಿ. ಕಣ್ಣು ತೆರೆದಿಡಿ. ನಿದ್ದೆಯನ್ನು ಬಿಡಿ ಎಂದು ಎಚ್ಚರಿಸಿದರು.

ಮುಂದಿನ ವಾರದಿಂದ ಎಲಿಮಿನೇಷನ್ ಇರುತ್ತದೆ. ಗಟ್ಟಿಯಾಗಿರುವ ಸ್ಪರ್ಧಿಗಳು ಒಬ್ಬೊಬ್ಬರೇ ಹೊರಗೆ ಹೋಗುತ್ತಿರುತ್ತಾರೆ. ಸಿಕ್ಕಾಪಟ್ಟೆ ಟಫ್ ಆಗಿರುತ್ತವೆ ಟಾಸ್ಕ್ ಎಂದು ಹೇಳಿದರು ಸುದೀಪ್. ಮನೆಯ ಸದಸ್ಯರೆಲ್ಲರೂ ಈ ವಾರ ಸಿಕ್ಕಾಪಟ್ಟೆ ಕುಣಿದಾಡಿದರು. ಆದರೆ ಮುಂದಿನ ವಾರದಿಂದ ಒಬ್ಬೊಬ್ಬರೇ ಹೊರಗೆ ಹೋಗುತ್ತಿದ್ದಾರೆ ಎಂಬ ಸುಳಿವನ್ನೂ ನೀಡಿದರು.

<ul id="pagination-digg"><li class="previous"><a href="/tv/sudeep-slams-vijay-raghavendra-bigg-boss-074522.html">« Previous</a>

More from Filmibeat

English summary
Etv Kannada reality show Bigg Boss week end programme 'Vaarada Kathe Kichchana Jothe' highlights. Arun Sagar and Chandrika's hide and seek game, Sudeep lightly slams Vijay Raghavendra for criticizing on BB. Sudeep gives caution to the inmates who are spend more time for sleeping. He said, I spent only 3 to
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X