'ವಿಕ್ರಾಂತ್ ರೋಣ' ಬಿಟ್ಟು 'ಬಿಗ್ ಬಾಸ್' ಕಡೆ ವಾಲಿದ ಕಿಚ್ಚ ಸುದೀಪ್!
ಸದ್ಯಕ್ಕೆ ಕನ್ನಡದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟ ಎಂದರೆ ಅದು ಸುದೀಪ್. ಯಾಕೆಂದರೆ ನಟ ಸುದೀಪ್ ತಮ್ಮ ಮುಂದಿನ ಸಿನಿಮಾ 'ವಿಕ್ರಾಂತ್ ರೋಣ' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸುದೀಪ್ ನಿರತರಾಗಿದ್ದರು.
'ವಿಕ್ರಾಂತ್ ರೋಣ' ಸಿನಿಮಾದ ಜೊತೆಗೆ ಈಗ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮದ ಕಡೆಗೂ ಗಮನ ಕೊಡಬೇಕಾಗಿದೆ. ಇನ್ನೇನು ಬಿಗ್ ಬಾಸ್ ಶುರುವಾಗುತ್ತಿದ್ದು, ಇದಕ್ಕೆ ಸಕಲ ತಯಾರಿಗೂ ನಡೆಯುತ್ತಿದೆ. ಹಾಗಾಗಿ ನಟ ಸುದೀಪ್ ಇದಕ್ಕೂ ಗಮನ ಕೊಡಬೇಕಾಗಿದೆ.
ಜುಲೈ 28ಕ್ಕೆ 'ವಿಕ್ರಾಂತ್ ರೋಣ' ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಸುದೀಪ್ ಸಿನಿಮಾ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ ಈಗ ಸುದೀಪ್ ಕೊಂಚ ಬಿಡುವು ಮಾಡಿಕೊಂಡು, ಬಿಗ್‌ಬಾಸ್‌ಗೂ ಸಮಯ ಕೊಡುತ್ತಿದ್ದಾರೆ. ಸದ್ಯಕ್ಕೀಗ ಪ್ರೋಮೊ ಶೂಟ್ ಮುಗಿದಿದೆ.

ಬಿಗ್ ಬಾಸ್‌ನತ್ತ ಗಮನ ಹರಿಸಿದ ಸುದೀಪ್!
'ವಿಕ್ರಾಂತ್ ರೋಣ' ಸಿನಿಮಾದ ಅಬ್ಬರದ ಪ್ರಚಾರ ನಡೆಯುತ್ತಿದೆ. ಸಿನಿಮಾವನ್ನು ನೋಡಲು ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ಪ್ರಚಾರದಲ್ಲಿ ಬ್ಯುಸಿ ಇರುವ ನಟ ಸುದೀಪ್ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ಬಿಗ್ ಬಾಸ್ ಕಡೆಗೂ ಗಮನ ಹರಿಸಿದ್ದಾರೆ ನಟ ಸುದೀಪ್. ಬಿಗ್ ಬಾಸ್ ಸೀಸನ್ 9ರ ಪ್ರೋಮೊ ಶೂಟ್ ಮಾಡಿ ಮುಗಿಸಿದ್ದಾರೆ ಕಿಚ್ಚ.
ಬಿಗ್ ಬಾಸ್ ಬಗ್ಗೆ ಸುದೀಪ್ ಟ್ವೀಟ್!
ಬಿಗ್ ಬಾಸ್ ಪ್ರೋಮೊ ಶೂಟ್ ಮಾಡಿ ಮುಗಿಸಿರುವ ಬಗ್ಗೆ ನಟ ಸುದೀಪ್, ಟ್ವೀಟ್ ಮೂಲಕ ತಿಳಿಸಿದ್ದಾರೆ. " ಹೊಸ ಬಿಗ್ ಬಾಸ್ ಕನ್ನಡ ಪ್ರೋಮೊ ಶೂಟ್ ಆಗಿದೆ. ಇಡೀ ತಂಡದ ಶ್ರಮಕ್ಕೆ ಮತ್ತು ಚಿತ್ರೀಕರಣದಲ್ಲಿ ಭಾಗಿ ಆಗಿದ್ದ ಎಲ್ಲಾರಿಗೂ ಧನ್ಯವಾದಗಳು. ಸದ್ಯದಲ್ಲಿಯೇ ಪ್ರೋಮೊ ಬರಲಿದೆ ಕಾಯುತ್ತಿರಿ." ಎಂದು ಬರೆದುಕೊಂಡು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

ಕಿಚ್ಚನಿಗೆ ಅಭಿಮಾನಿಗಳ, ಅಭಿಮಾನದ ಮಾತು!
ನಟ ಸುದೀಪ್ ಟ್ವಿಟ್ಟರ್‌ನಲ್ಲಿ, ಬಿಗ್ ಬಾಸ್ ಪ್ರೋಮೊ ಬಗ್ಗೆ ಹಾಕುತ್ತಲೇ ಅಭಿಮಾನಿಗಳು ಕಳವಳ ವ್ಯಕ್ತ ಪಡಿಸಿದ್ದಾರೆ. ಸದ್ಯ 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ಗಮನ ಕೊಡಿ ಎನ್ನುತ್ತಿದ್ದಾರೆ. 'ವಿಕ್ರಾಂತ್ ರೋಣ' ಬಗ್ಗೆ ಇರುವ ಕ್ರೇಜ್ ಕಡಿಮೆ ಆಗುತ್ತದೆ. ದಯವಿಟ್ಟು 'ವಿಕ್ರಾಂತ್ ರೋಣ'ದಿಂದ ಡೈವರ್ಟ್ ಆಗಬೇಡಿ ಅಂತಲೂ ಕೂಡ ಹಲವರು ಕಮೆಂಟ್ ಮಾಡಿದ್ದಾರೆ. ಈಗ ಬಿಗ್ ಬಾಸ್‌ಗಿಂತಲೂ ಹೆಚ್ಚು ಮುಖ್ಯ 'ವಿಕ್ರಾಂತ್ ರೋಣ' ಸಿನಿಮಾ ಎನ್ನುವ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತ ಪಡಿಸುತ್ತಿದ್ದಾರೆ.

ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ಕಿಚ್ಚ!
ಇನ್ನು ನಟ ಸುದೀಪ್ ಸದ್ಯ ಪ್ರೋಮೊ ಶೂಟ್ ಮುಗಿಸಿದ್ದಾರೆ. ಈ ಪ್ರೋಮೊದಲ್ಲಿ ಸುದೀಪ್ ಹೇಗೆ ಕಾಣಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ನಟ ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ ವಿಡಿಯೋ ಫೋಟೊ ವೈರಲ್ ಆಗಿದೆ. ಆಫ್ ವೈಟ್ ಶರ್ಟ್ ಮತ್ತು ಕಪ್ಪು ಪ್ಯಾಂಟ್ ತೊಟ್ಟ ಸುದೀಪ್ ಲುಕ್ ಗಮನ ಸೆಳೆದಿದೆ.


Click it and Unblock the Notifications











