ಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತು

ಕಳೆದ ಮೂರು ತಿಂಗಳಿನಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿರುವ ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಶನಿವಾರ ಮತ್ತು ಭಾನುವಾರ ಫೈನಲ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ತಂಡ ಸೇರಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 6ರ ಫಿನಾಲೆ ವೇದಿಕೆ ಏರುವುದಕ್ಕೂ ಮುನ್ನಾ ಕಿಚ್ಚ ಟ್ವಿಟ್ಟರ್ ನಲ್ಲಿ ಈ ಆವೃತ್ತಿಯ ಬಗ್ಗೆ ತಮ್ಮ ಮನದಾಳವನ್ನ ವ್ಯಕ್ತಪಡಿಸಿದ್ದಾರೆ.

''ಫಿನಾಲೆಗೆ ಕ್ಷಣಗಣನೆ, ಇನ್ನೊಂದು ಅದ್ಭುತವಾದ ಆವೃತ್ತಿ ಅಂತಿಮ ಹಂತಕ್ಕೆ ಬಂದಿದೆ. ಮುಂದಿನ ಆವೃತ್ತಿ ಬರೋವರೆಗೂ ನನ್ನ ಬಿಗ್ ಬಾಸ್ ತಂಡವನ್ನ ನಾನು ಮಿಸ್ ಮಾಡಿಕೊಳ್ಳಲಿದ್ದೇನೆ. ಬಿಗ್ ಬಾಸ್ ಫೈನಲ್ ಸ್ಪರ್ಧಿಗಳಿಗೆ ನನ್ನ ಧನ್ಯವಾದ ಹಾಗೂ ಎಲ್ಲರಿಗೂ ಆಲ್ ದಿ ಬೆಸ್ಟ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Sudeep tweet on bigg boss final

ಶನಿವಾರ ಮತ್ತು ಭಾನುವಾರ ಎರಡು ದಿನ ಫೈನಲ್ ನಡೆಯಲಿದ್ದು, ಭಾನುವಾರ ವಿನ್ನರ್ ಯಾರೆಂದು ಪ್ರಕಟಿಸಲಾಗುವುದು. ನಿರೀಕ್ಷೆಯಂತೆ ಶನಿವಾರ ಕೆಲವು ಮನರಂಜನೆ ಕಾರ್ಯಕ್ರಮಗಳು, ಬಿಗ್ ಬಾಸ್ ಸ್ಪರ್ಧಿಗಳ ನೃತ್ಯ, ಹಾಗೂ ಒಬ್ಬರು ಅಥವಾ ಇಬ್ಬರ ಎಲಿಮಿನೇಷನ್ ಇರುವು ಸಾಧ್ಯತೆ ಇದೆ.

Sudeep tweet on bigg boss final

ಇನ್ನುಳಿದಂತೆ ಫೈನಲ್ ಹಂತದಲ್ಲಿ ನವೀನ್ ಸಜ್ಜು, ಕವಿತಾ ಗೌಡ, ಆಂಡ್ರ್ಯೂ, ಶಶಿಕುಮಾರ್ ಹಾಗೂ ರ್ಯಾಪಿಡ್ ರಶ್ಮಿ ಉಳಿದುಕೊಂಡಿದ್ದಾರೆ. ಈ ಐವರಲ್ಲಿ ಯಾರು ವಿನ್ ಆಗಬಹುದು ಎಂಬ ಚರ್ಚೆ ಹೆಚ್ಚಾಗಿದೆ.

More from Filmibeat

English summary
Kiccha sudeep has taken his twitter account to express his feeling about bigg boss kannada 6 finale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X