»   » ಕಿಚ್ಚ ಸುದೀಪ್ ಮಡದಿ ಪ್ರಿಯಾ ಈಗ ನಿರ್ಮಾಪಕಿ.!

ಕಿಚ್ಚ ಸುದೀಪ್ ಮಡದಿ ಪ್ರಿಯಾ ಈಗ ನಿರ್ಮಾಪಕಿ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಈಗ ನಿರ್ಮಾಪಕಿ ಪಟ್ಟಕ್ಕೆ ಏರಿದ್ದಾರೆ. ಹಾಗಂತ ಅವರು ಚಿತ್ರ ನಿರ್ಮಾಣ ಮಾಡುತ್ತಿಲ್ಲ. ಧಾರಾವಾಹಿಗೂ ಬಂಡವಾಳ ಹೂಡುತ್ತಿಲ್ಲ.

ಸುಪ್ರಿಯಾನ್ವಿ (Supriyanvi) ಎಂಬ ಪ್ರೊಡಕ್ಷನ್ ಸಂಸ್ಥೆಗೆ ಸಾರಥಿ ಆಗಿರುವ ಪ್ರಿಯಾ ಸುದೀಪ್, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ 'ಸ್ಟಾರ್ ಸವಿರುಚಿ' ಎಂಬ ಅಡುಗೆ ಕಾರ್ಯಕ್ರಮಕ್ಕೆ ಪ್ರೊಡ್ಯೂಸರ್ ಆಗಿದ್ದಾರೆ.

Sudeep wife Priya turns Producer with a cookery show

Supriyanvi ಹೆಸರನ್ನ ನೀವು ಸೂಕ್ಷ್ಮವಾಗಿ ಗಮನಿಸಿ - Supriya (Sudeep + Priya) Anvi (Sanvi). ಸುದೀಪ್, ಪ್ರಿಯಾ ಮತ್ತು ಮಗಳು ಸಾನ್ವಿ...ಮೂವರ ಹೆಸರನ್ನು ಒಟ್ಟುಗೂಡಿಸಿ 'ಸುಪ್ರಿಯಾನ್ವಿ ಪ್ರೊಡಕ್ಷನ್ಸ್' ಹೆಸರಿನ ಸಂಸ್ಥೆ ಹುಟ್ಟು ಹಾಕಿದ್ದಾರೆ ಪ್ರಿಯಾ.

Sudeep wife Priya turns Producer with a cookery show

ಸಂಸ್ಥೆಯ ಮೊದಲ ಕಾಣಿಕೆಯಾಗಿ 'ಸ್ಟಾರ್ ಸವಿರುಚಿ' ಸಿದ್ಧವಾಗುತ್ತಿದೆ. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಗಳು ಅಡುಗೆ ಮಾಡಲಿದ್ದಾರೆ. ಆಗಸ್ಟ್ 22 ರಿಂದ ಪ್ರತಿ ಮಧ್ಯಾಹ್ನ 1.30ಕ್ಕೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮಡದಿ ಪ್ರಿಯಾ ರವರ ಈ ಹೊಸ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಕೂಡ ಶುಭ ಹಾರೈಸಿದ್ದಾರೆ.

English summary
Kiccha Sudeep wife Priya has turned Producer with a cookery show called 'Star Saviruchi' under production company called 'Supriyanvi Productions'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada