ಕಪಿಲ್ ಶರ್ಮಾ ಶೋನಲ್ಲಿ ಸುದೀಪ್ ಸಂಚಿಕೆ ನೋಡಲು ಮರೆಯದಿರಿ
ಕನ್ನಡದ ಆರಡಿ ಕಟೌಟ್, ಕಿಚ್ಚ ಸುದೀಪ್ ಬಾಲಿವುಡ್ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದರು. ಆ ಎಪಿಸೋಡ್ ಇನ್ನು ಪ್ರಸಾರವಾಗಿರಲಿಲ್ಲ. ಇದೀಗ, ಶನಿವಾರ ಸುದೀಪ್ ಭಾಗವಹಿಸಿದ್ದ ಎಪಿಸೋಡ್ ಟೆಲಿಕಾಸ್ಟ್ ಆಗ್ತಿದೆ.
ಶನಿವಾರ ರಾತ್ರಿ 9.30ಕ್ಕೆ ಸುದೀಪ್ ಎಪಿಸೋಡ್ ಸೋನಿ ಟಿವಿಯಲ್ಲಿ ಮೂಡಿಬರ್ತಿದೆ. ವಿಶೇಷ ಅಂದ್ರೆ, ಹಿಂದಿಯ ಈ ಕಾರ್ಯಕ್ರಮದಲ್ಲಿ ಸುದೀಪ್ ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಬಹಿರಂಗವಾಗಿತ್ತು.
ಅಂದ್ಹಾಗೆ, ಈ ಶೋನಲ್ಲಿ ಕೇವಲ ಸುದೀಪ್ ಮಾತ್ರವಲ್ಲ ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ, ನಟ ಹಾಗೂ ನಿರ್ಮಾಪಕ ಶೋಹಿಲ್ ಖಾನ್, ಸುದೀರ್ ಬಾಬು, ಮನೋಜ್ ತಿವಾರಿ, ಸಚಿನ್ ಜೋಶಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

ಈ ಶೋನ ವಿಶೇಷ ಅಂದ್ರೆ ಸಿಸಿಎಲ್ ಕ್ರಿಕೆಟ್ ಟೂರ್ನಿಯ ಆರಂಭದ ಹಿನ್ನೆಲೆ ಈ ಎಲ್ಲ ಕಲಾವಿದರು ಕಪಲ್ ಶರ್ಮಾ ಶೋಗೆ ಬಂದಿದ್ದರು. ಫೆಬ್ರವರಿ 27ರಂದು ಸಿಸಿಲ್ T-10 ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗಿಯಾಗುತ್ತಿದೆ.
ಈ ಬಗ್ಗೆ ಸ್ವತಃ ಸುದೀಪ್ ಟ್ವೀಟ್ ಮಾಡಿದ್ದರು. "ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದೆ. ನಕ್ಕು ನಕ್ಕು ಸಾಕಾಯ್ತು. ಈ ರೀತಿ ನಗುವ ಅವಕಾಶ ನನಗೆ ಸಿಕ್ಕಿದ್ದೇ ಅಪರೂಪ. ಇಂಥ ಅವಕಾಶ ಕಲ್ಪಿಸಿಕೊಟ್ಟವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಕಪಿಲ್ ಶರ್ಮ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇಂಟ್ರೆಸ್ಟಿಂಗ್ ಏನಪ್ಪ ಅಂದ್ರೆ ಕಪಿಲ್ ಶರ್ಮ ಶೋನಲ್ಲಿ ಭಾಗವಹಿಸಿರುವ ಮೊಟ್ಟಮೊದಲ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್. ಕಪಿಲ್ ಶರ್ಮ ಶೋ ಮೂಲಕ ಹಿಂದಿ ಕಿರುತೆರೆಯ ವೀಕ್ಷಕರಿಗೂ ಸುದೀಪ್ ಆಪ್ತವಾಗಲಿದ್ದಾರೆ.


Click it and Unblock the Notifications











